ಸಾರಾಂಶ
ಅತ್ಯಂತ ಪ್ರಾಚೀನ ಮಾನವ ತನ್ನ ಭಾವನೆಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಿರುವ ಚಿತ್ರಗಳ ಕಲ್ಲಾಸರೆ ಕಂಡುಬಂದಿವೆ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಕುರುಗೋಡು ಪಟ್ಟಣ ಸಮೀಪದ ಲಕ್ಷಿಪುರ ಗ್ರಾಮದ ರಾಮತೀರ್ಥ ಬೆಟ್ಟದ ಮೇಲೆ ಶಿಲಾಯುಗ ಕಾಲಕ್ಕೆ ಸಂಬಂಧಿಸಿದ್ದು ಎನ್ನಲಾದ ಕೆಂಪು ವರ್ಣದ ಚಿತ್ರಗಳು ಪತ್ತೆಯಾಗಿವೆ.ಕುರುಗೋಡಿನ ಕೆ. ವೀರಭದ್ರಗೌಡ ಎಂಬವರು ಈ ಚಿತ್ರಗಳನ್ನು ಪತ್ತೆ ಹಚ್ಚಿದ್ದಾರೆ. ಇತಿಹಾಸಕಾರರು ಕುರುಗೋಡು ಸುತ್ತಲಿನ ಬೆಟ್ಟದ ಆನೇಕ ಕಲ್ಲಾಸರೆಯಲ್ಲಿ ರೇಖಾಚಿತ್ರಗಳಿರುವುದನ್ನು ಗುರುತಿಸಿದ್ದಾರೆ. ಆದರೆ ಈ ಕಲ್ಲಾಸರೆಯಲ್ಲಿನ ಚಿತ್ರಗಳನ್ನು ಇಲ್ಲಿವರೆಗೂ ಪ್ರಕಟಗೊಂಡಿಲ್ಲ ಎನ್ನಲಾಗಿದೆ.
ಅತ್ಯಂತ ಪ್ರಾಚೀನ ಮಾನವ ತನ್ನ ಭಾವನೆಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಿರುವ ಚಿತ್ರಗಳ ಕಲ್ಲಾಸರೆ ಕಂಡುಬಂದಿದ್ದು, ಇಂತಹ ಚಿತ್ರಗಳಿರುವ ಕಲ್ಲಾಸರೆಗಳನ್ನು ಸಂಬಂಧಿಸಿದ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಸಂರಕ್ಷಣೆ ಮಾಡುವ ಅವಶ್ಯಕತೆ ಇದೆ ಎಂದು ಸ್ಥಳೀಯ ಇತಿಹಾಸಪ್ರಿಯರು ಆಗ್ರಹಿಸಿದ್ದಾರೆ. ಕುರುಗೋಡಿನ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಾಣಿಗಾರಿಕೆಯಿಂದ ರೇಖಾಚಿತ್ರವಿರುವ ಕಲ್ಲಾಸರೆಗಳು ಹಾಳಾಗುವ ಅಪಾಯವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.