ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ರಕ್ತದಾನ ಮಹಾದಾನವಾಗಿದ್ದು, ಹನಿ ರಕ್ತ ಜೀವ ರಕ್ಷಣೆಗೆ ಸಹಕಾರಿಯಾಗಿದೆ, ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷರು ಬಾಗಲಕೋಟೆ ಅಭಿವೃದ್ಧಿಯ ಮಾದರಿಯಿದ್ದಂತೆ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಕ್ತದಾನ ಮಹಾದಾನವಾಗಿದ್ದು, ಹನಿ ರಕ್ತ ಜೀವ ರಕ್ಷಣೆಗೆ ಸಹಕಾರಿಯಾಗಿದೆ, ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷರು ಬಾಗಲಕೋಟೆ ಅಭಿವೃದ್ಧಿಯ ಮಾದರಿಯಿದ್ದಂತೆ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಹೇಳಿದರು.ನಗರದ ಬಿ.ವಿ.ವಿ.ಎಸ್. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ರವರ ಜನ್ಮ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಹಾದಾನ-ಒಂದು ಹನಿ ರಕ್ತ ಜೀವ ರಕ್ಷಣೆಗೆ ಸಹಕಾರಿಯಾಗಿದೆ. ಕಾರಣ ರಕ್ತದಾನ ಮಾಡಿ, ಡಾ.ವೀರಣ್ಣ ಚರಂತಿಮಠ ಅವರ ಜನ್ಮದಿನದ ಈ ದಿನ ರಕ್ತದಾನ ಮಾಡಿರುವುದು ಅವರ ಪ್ರಾಮಾಣಿಕ ಸಮಾಜಸೇವೆ ಹೆಮ್ಮೆ ತರಿಸಿದಂತೆ. ಅವರು ಬಾಗಲಕೋಟೆ ಅಭಿವೃದ್ಧಿಯ ಮಾದರಿಯಿದ್ದಂತೆ, ಅಭಿವೃದ್ಧಿ ಪರ ಕನಸುಗಳಿಗೆ ಎಲ್ಲರೂ ಸಹಕರಿಸೋಣ ಎಂದರು.ಎಸ್.ಎನ್.ಎಂ.ಸಿ. ಯ ಕುಮಾರೇಶ್ವರ ಆಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ.ಕೇಶವ ಕುಲಕರ್ಣಿ ರಕ್ತದಾನ ಮಹತ್ವ ಕುರಿತು ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಗಗಳಿಗೂ ಕೂಡ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ಹುಟ್ಟು ಹಬ್ಬದ ಸಂದರ್ಭಗಳಲ್ಲಿ ದುಂದು ವೆಚ್ಚ ಮಾಡದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.40 ವೈದ್ಯ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಆಸ್ಪತ್ರೆಯಲ್ಲಿಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಪ್ರಾಧ್ಯಾಪಕರಾದ ಡಾ.ರವಿ.ಎಸ್. ಕೋಟೆಣ್ಣವರ, ಡಾ.ಸುಧೀರ ಬೆಟಗೇರಿ, ಡಾ.ಅಮರೇಶ ಬಳಗಾನೂರ, ಡಾ.ಅಖಿಲಾ ಹುಲ್ಲೂರ, ಎನ್.ಎಸ್.ಎಸ್.ಯೋಜನಾಧಿಕಾರಿ ಡಾ.ಸುನೀಲ ಭೋಸಲೆ.ಡಾ.ಪ್ರದೀಪ ರೆಡ್ಡಿ ಉಪಸ್ಥಿತರಿದ್ದರು.