ಸಾರಾಂಶ
ಕುಡಿದ ಅಮಲಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಗೆ ಚಾಕು ಇರಿದು, ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಚಿಕ್ಕಮ್ಮನಹಟ್ಟಿಯಲ್ಲಿ ನಡೆದಿದೆ.
ದಾವಣಗೆರೆ: ಕುಡಿದ ಅಮಲಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಗೆ ಚಾಕು ಇರಿದು, ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಚಿಕ್ಕಮ್ಮನಹಟ್ಟಿಯಲ್ಲಿ ನಡೆದಿದೆ.
ಮಹಿಳೆ ಮನೆಯಲ್ಲಿ ಮಗುವಿಗೆ ಹಾಲುಣಿಸುತ್ತಿದ್ದ ವೇಳೆ ಕಾಟೇಶ ಎಂಬಾತ ಕುಡಿದ ಮತ್ತಿನಲ್ಲಿ ಮನೆಗೆ ನುಗ್ಗಿ, ಮಹಿಳೆಯನ್ನು ಎಳೆದಾಡಿದ್ದಾನೆ. ಮಹಿಳೆ ಪ್ರತಿರೋಧ ತೋರಿದ್ದರಿಂದ ಆಕೆಯ ಕುತ್ತಿಗೆ, ಎದೆ, ಕೈಗೆ ಚಾಕುವಿನಿಂದ ಇರಿದಿದ್ದಾನೆ.ಮಹಿಳೆ ಜೋರಾಗಿ ಕೂಗಿದ್ದರಿಂದ ನೆರೆಹೊರೆಯವರು ಬಂದು ಮಹಿಳೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- - - (ಸಾಂದರ್ಭಿಕ ಚಿತ್ರ)