ಸಾರಾಂಶ
ಡಿಸಿ ಗಂಗೂಬಾಯಿ ಅವರ ಫೋಟೊ ಪ್ರೊಫೈಲ್‌ಗೆ ಹಾಕಲಾಗಿದೆ. ಉಳಿದಂತೆ ಡಿಸಿ ಕಚೇರಿ ಹೊರಭಾಗದ, ಬೀಚ್ ಫೋಟೊ ಕೂಡಾ ಖಾತೆಯಲ್ಲಿದೆ
ಕಾರವಾರ:
ಉತ್ತರ ಕನ್ನಡ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಸೈಬರ್ ವಂಚಕರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.Deputy Commissioner Uttara Kannada ಎಂಬ ಖಾತೆಯನ್ನು ಫೇಸ್‌ಬುಕ್‌ನಲ್ಲಿ ತೆರೆಯಲಾಗಿದೆ. ಡಿಸಿ ಗಂಗೂಬಾಯಿ ಅವರ ಫೋಟೊ ಪ್ರೊಫೈಲ್‌ಗೆ ಹಾಕಲಾಗಿದೆ. ಉಳಿದಂತೆ ಡಿಸಿ ಕಚೇರಿ ಹೊರಭಾಗದ, ಬೀಚ್ ಫೋಟೊ ಕೂಡಾ ಖಾತೆಯಲ್ಲಿದೆ. ಸೇನಾಧಿಕಾರಿ ಒಬ್ಬರ ಗೃಹ ಬಳಕೆ ವಸ್ತುಗಳನ್ನು ತುರ್ತಾಗಿ ಮಾರಾಟ ಮಾಡಬೇಕಿದೆ ಎಂದು ವ್ಯಕ್ತಿಯೊಬ್ಬರಿಗೆ ಮೆಸೇಜ್ ಕಳಿಸಿ ಹಣ ಪಡೆಯಲು ಯತ್ನಿಸಲಾಗಿದೆ. ನ. 3ರಂದು ಈ ನಕಲಿ ಖಾತೆ ತೆರೆಲಾಗಿದ್ದು, 111 ಫಾಲೋವರ್ಸ್ ಪಡೆದು 6 ಜನರನ್ನು ಖಾತೆಯಿಂದ ಫಾಲೋ ಮಾಡಲಾಗುತ್ತಿದೆ. ಉತ್ತರ ಕನ್ನಡ ಡಿಸಿಯ ಹೆಸರಿನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 8.9 k ಫಾಲೋವರ್ಸ್ ಇದ್ದಾರೆ. ಜಿಲ್ಲಾಧಿಕಾರಿ ಕಾರ್ಯಾಲಯದಿಂದ ನಕಲಿ ಖಾತೆ ಬ್ಲಾಕ್ ಮಾಡುವಂತೆ ಪೊಲೀಸ್ ದೂರು ನೀಡಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))