ಸಾರಾಂಶ
ಗೂಗಲ್ ಮ್ಯಾಪ್ ಮೂಲಕ ಕಾರಿನಲ್ಲಿ ಹೊರಟಿದ್ದ ಕುಟುಂಬವು ದಾರಿ ತಪ್ಪಿಸಿಕೊಂಡು ಖಾನಾಪುರದ ದಟ್ಟ ಕಾಡಿನಲ್ಲಿ ನಾಪತ್ತೆಯಾಗಿ ಯಾವುದೇ ಸಂಪರ್ಕ ಇಲ್ಲದೆ ಗೋಳಾಡುತ್ತಿತ್ತು. ಕಾಡಿನಲ್ಲಿ ದಿಕ್ಕು ತೋಚದೆ ಗೋಳಾಡುತ್ತದ್ದ ಕುಟುಂಬವನ್ನು ಪೊಲೀಸರು ಕೊನೆಗೂ ಪತ್ತೆ ಮಾಡಿ ಅವರ ರಾಜ್ಯಕ್ಕೆ ವಾಪಸ್ ಕಳುಹಿಸಿದ್ದಾರೆ.
ಬೆಳಗಾವಿ : ಗೂಗಲ್ ಮ್ಯಾಪ್ ಮೂಲಕ ಕಾರಿನಲ್ಲಿ ಹೊರಟಿದ್ದ ಕುಟುಂಬವು ದಾರಿ ತಪ್ಪಿಸಿಕೊಂಡು ಖಾನಾಪುರದ ದಟ್ಟ ಕಾಡಿನಲ್ಲಿ ನಾಪತ್ತೆಯಾಗಿ ಯಾವುದೇ ಸಂಪರ್ಕ ಇಲ್ಲದೆ ಗೋಳಾಡುತ್ತಿತ್ತು. ಆದರೆ, ಕಾಡಿನಲ್ಲಿ ದಿಕ್ಕು ತೋಚದೆ ಗೋಳಾಡುತ್ತದ್ದ ಕುಟುಂಬವನ್ನು ಪೊಲೀಸರು ಕೊನೆಗೂ ಪತ್ತೆ ಮಾಡಿ ಅವರ ರಾಜ್ಯಕ್ಕೆ ವಾಪಸ್ ಕಳುಹಿಸಿದ್ದಾರೆ.
ಡಿ.5ರಂದು ಬಿಹಾರದ ರಾಜದಾಸ್ ರಂಜಿತ ಅವರು ತಮ್ಮ ಕುಟುಂಬದ ಜತೆಗೆ ಉಜ್ಜೈನಿಯಿಂದ ಗೂಗಲ್ ಮ್ಯಾಪ್ ಮೂಲಕ (ಕಾರ್ ಸಂಖ್ಯೆ WB 06 H 8550) ಗೋವಾಕ್ಕೆ ತೆರಳುತ್ತಿದ್ದರು.
ಗೂಗಲ್ ಮ್ಯಾಪ್ ಹಾಕಿಕೊಂಡು ಹೋಗುವಾಗ ದಾರಿ ತಪ್ಪಿ ಖಾನಾಪುರ ಬಳಿಯ ಶಿರೋಲಿಯ ದಟ್ಟ ಕಾಡಿನಲ್ಲಿ ಸಿಕ್ಕಿಕೊಂಡಿದ್ದರು. ಹೇಗೋ ಮಾಡಿ ಇಆರ್‌ಎಸ್ ಪೊಲೀಸರ ನೆರವಿನಿಂದ ಲೈವ್ ಲೋಕೇಶನ್ ಬಿಡಿಸಿಕೊಂಡು ಆ ಸ್ಥಳಕ್ಕೆ ಪೋಲಿಸರು ತೆರಳಿದ್ದಾರೆ. ದಾರಿ ತಪ್ಪಿ ಕಾಡಿನಲ್ಲಿ ಗೋಳಾಡುತ್ತದ್ದ ಕುಟುಂಬವನ್ನು ಶಿರೋಲಿ ಕಾಡಿನಲ್ಲಿ ಪತ್ತೆ ಮಾಡಿದ ಪೊಲೀಸರು ಕಾಡಿನಿಂದ ಕುಟುಂಬ ಸಮೇತ ಕಾರನ್ನು ಹೊರಗೆ ತಂದು ಅವರ ರಾಜ್ಯಯಾದ ಬಿಹಾರಕ್ಕೆ ಮತ್ತೆ ಕಳುಹಿಸಿಕೊಡುವ ಮೂಲಕ ಎ.ಎಸ್.ಐ ಕೆ.ಐ. ಬಡಿಗೇರ ಹಾಗೂ ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ.