ಸಾಲಬಾಧೆ ತಾಳದೆ ನೇಣಿಗೆ ಶರಣಾದ ರೈತ

| Published : Sep 12 2024, 02:03 AM IST

ಸಾರಾಂಶ

A farmer who surrendered to hanging due to debt

ಶಹಾಪುರ: ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಟ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಚಟ್ನಳ್ಳಿ ಗ್ರಾಮದ ಸಾಬಣ್ಣ ಬಬಲಾದಿ (24) ಆತ್ಮಹತ್ಯೆಗೆ ಶರಣಾದ ರೈತ. ಮೃತ ರೈತನು 2 ಎಕರೆ ಜಮೀನಿನಲ್ಲಿ ಹತ್ತಿ ಬೆಳೆಯುತ್ತಿದ್ದ. ಸಾಲದ ಸುಳಿಗೆ ‌ಸಿಲುಕಿ ತೀವ್ರ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ. ಬೆಳೆ ಸರಿಯಾಗಿ ಬಾರದೆ, ಬೆಲೆ ಧಾರಣಿ ಕುಸಿತದಿಂದಾಗಿ ಹೈರಾಣಾಗಿದ್ದ ರೈತ. ಎಸ್‌ಬಿಐ ಖಾನಾಪುರ್ ಬ್ಯಾಂಕಿನಲ್ಲಿ 50 ಸಾವಿರ ಹಾಗೂ ಕೈ ಸಾಲ 5 ಲಕ್ಷ ರು.ಗಳ ಮಾಡಿಕೊಂಡಿದ್ದನು. ಮಾಡಿದ ಸಾಲ ಮರುಪಾವತಿ ಮಾಡುವುದು ಕಷ್ಟವಾಗಿತ್ತು ಎನ್ನಲಾಗಿದೆ. ಮೃತ ರೈತನ ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ‌ರವಾನಿಸಲಾಗಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-----

11ವೈಡಿಆರ್18: ರೈತ ಸಾಬಣ್ಣ, ಆತ್ಮಹತ್ಯೆ ಮಾಡಿಕೊಂಡ ರೈತ.