ಸಾರಾಂಶ
ಸರಗೂರು ತಾಲೂಕಿನ ಎಂ.ಸಿ. ತಳಲು ಗ್ರಾಮದ ಕೆಂಪದೇವಮ್ಮ ಗಾಯಗೊಂಡವರು. ಬಹಿರ್ದೆಸೆಗೆ ಹೋಗಲು ಮುಂಜಾನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕಾಡಾನೆ ದಾಳಿ ನಡೆಸಿದೆ. ಪಕ್ಕದಲ್ಲೇ ಇದ್ದ ನಿವಾಸಿಯೊಬ್ಬರು ಬ್ಯಾಟರಿಯಲ್ಲಿ ಬೆಳಕು ಬಿಟ್ಟು, ಜೋರಾಗಿ ಕೂಗಿದ್ದಾರೆ. ಕೂಗಿದ ಶಬ್ಧಕ್ಕೆ ಆನೆ ಸ್ಥಳದಿಂದ ಕಾಡಿನತ್ತ ಪರಾರಿಯಾಗಿದೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಸರಗೂರು
ಬಹಿರ್ದೆಸೆಗೆ ಹೋಗಿದ್ದಾಗ ಕಾಡಾನೆ ದಾಳಿ ನಡೆಸಿ ಮಹಿಳೆ ಗಾಯಗೊಂಡಿದ್ದು, ಎಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಲೂಕಿನ ಎಂ.ಸಿ. ತಳಲು ಗ್ರಾಮದ ಕೆಂಪದೇವಮ್ಮ ಗಾಯಗೊಂಡವರು. ಇವರು ಬಹಿರ್ದೆಸೆಗೆ ಹೋಗಲು ಮುಂಜಾನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕಾಡಾನೆ ದಾಳಿ ನಡೆಸಿದೆ. ಪಕ್ಕದಲ್ಲೇ ಇದ್ದ ನಿವಾಸಿಯೊಬ್ಬರು ಬ್ಯಾಟರಿಯಲ್ಲಿ ಬೆಳಕು ಬಿಟ್ಟು, ಜೋರಾಗಿ ಕೂಗಿದ್ದಾರೆ. ಕೂಗಿದ ಶಬ್ಧಕ್ಕೆ ಆನೆ ಸ್ಥಳದಿಂದ ಕಾಡಿನತ್ತ ಪರಾರಿಯಾಗಿದೆ ಎನ್ನಲಾಗಿದೆ.
ನುಗು ವನ್ಯಜೀವಿ ಅರಣ್ಯ ವಲಯಾಧಿಕಾರಿ ವಿವೇಕ್, ಡಿಆರ್.ಎಫ್.ಒ ಲಕ್ಷ್ಮಣ್ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದಲ್ಲದೆ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದ್ದಾರೆ.ಕೆಂಪದೇವಮ್ಮ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ನಿತ್ಯವು ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ರೈತರಿಗೆ ರಕ್ಷಣೆ ಮಾಡಬೇಕು, ಇಲ್ಲವಾದಲ್ಲಿ ಸಾವು ನೂವು ಸಂಬವ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ,
ಇಲಾಖಾಧಿಕಾರಿ ವಿವೇಕ್ ಮಾತನಾಡಿ, ಕೆಂಪದೇವಮ್ಮ ಅವರ ಚಿಕಿತ್ಸೆ ವೆಚ್ಚವನ್ನು ಇಲಾಖೆ ಭರಿಸಲಿದೆ. ಜತೆಗೆ ಜೀವನ ನಿರ್ವಹಣೆಗೆ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಹೋಟೆಲ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನಮೈಸೂರು:ಹೋಟಲ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ನಗರದ ಮಂಡಿ ಠಾಣೆಯ ಪೊಲೀಸರು ಬಂಧಿಸಿ, ಒಟ್ಟು 7.25 ಲಕ್ಷ ರೂ. ಮೌಲ್ಯದ 149 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಗ್ರಾಂಡ್ ಮರ್ಕೂರಿ ಹೋಟಲ್ ನಲ್ಲಿ ಜ.10 ರಂದು ಟಂಡರ್ ಆಪ್ ಮೂಲಕ ಪರಿಚಯವಾಗಿದ್ದ ಆರೋಪಿಯ ಜೊತೆಯಲ್ಲಿ ಉಳಿದುಕೊಂಡಿದ್ದಾಗ ಆರೋಪಿಯು ಪಿರ್ಯಾದಿಗೆ ಸೇರಿದ 149 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಜ.12 ರಂದು ಆರೋಪಿಯನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ಎನ್.ಆರ್. ಉಪ ವಿಭಾಗದ ಎಸಿಪಿ ಆಶ್ವತ್ಥ ನಾರಾಯಣ ಅವರ ಮಾರ್ಗದರ್ಶನದಲ್ಲಿ ಮಂಡಿ ಠಾಣೆಯ ಇನ್ಸ್ ಪೆಕ್ಟರ್ ಎಸ್. ನಾಗೇಶ್, ಎಸ್ಐಗಳಾದ ರೇವಣ್ಣಸಿದ್ದಪ್ಪ, ರಂಗಸ್ವಾಮಿ, ಎಎಸ್ಐ ಕೆ.ಎಸ್. ಗುರುಸ್ವಾಮಿ ಹಾಗೂ ಸಿಬ್ಬಂದಿ ಜಿ.ಸಿ. ರಾಜೇಂದ್ರ, ಜನಾರ್ದನರಾವ್, ಮಹಮದ್ ಖಯ್ಯೂಂ, ರಾಜುಸಾಬ್, ಮೆಹಬೂಬ್ ಖಾನ್, ಜಯಕುಮಾರ್, ಇಸ್ಮಾಯಿಲ್, ಸಮೀರ್, ಕರಿಯಪ್ಪ, ಯೋಗೇಶ್, ತಾಂತ್ರಿಕ ವಿಭಾಗದ ಕುಮಾರ್, ಮಂಜು, ಶ್ಯಾಮ್ ಸುಂದರ್ ಈ ಪತ್ತೆ ಮಾಡಿದ್ದಾರೆ.