ಬೆಂಗಳೂರು ಏರ್‌ಪೋರ್ಟ್‌ನ ಪಿಕ್‌ಅಪ್‌ ಲೈನ್‌ಗೆ ತೆರಳಲು ವಾಣಿಜ್ಯ ವಾಹನಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ. 7 ನಿಮಿಷ ನಿಲ್ಲಲು ಶುಲ್ಕ ಪವತಿಸಬೇಕು.

ಬೆಂಗಳೂರು :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನಗಳ ದೀರ್ಘ ಕಾಯುವಿಕೆಯಿಂದಾಗುವ ವಾಹನ ದಟ್ಟಣೆ ಸಮಸ್ಯೆ ತಪ್ಪಿಸಲು ವಾಣಿಜ್ಯ ವಾಹನಗಳು ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ನಲ್ಲಿನ ಪ್ರಯಾಣಿಕರ ಪಿಕ್‌ಅಪ್‌ ಲೇನ್‌ ಪ್ರವೇಶಿಸಲು ₹150 ಶುಲ್ಕ ನಿಗದಿ ಮಾಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಮಿನಲ್‌ 1 ಮತ್ತು 2ರಲ್ಲಿನ ಪಿಕ್‌ಅಪ್‌ ಲೇನ್‌ನಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನಗಳು ಪ್ರಯಾಣಿಕರನ್ನು ಹತ್ತಿಸಿ ಮತ್ತು ಇಳಿಸಿಕೊಳ್ಳುವ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದ್ದು, ಅದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಕಿರಿಕಿರಿ ಉಂಟಾಗುತ್ತಿದೆ. ಅದನ್ನು ತಪ್ಪಿಸುವ ಸಲುವಾಗಿ ಪಿಕ್‌ಅಪ್‌ ಲೇನ್‌ಗೆ ಪ್ರವೇಶಿಸುವ ವಾಣಿಜ್ಯ ವಾಹನಗಳು ಮೊದಲ 7 ನಿಮಿಷಗಳಿಗೆ ₹150 ಹಾಗೂ ನಂತರದ 7 ನಿಮಿಷಕ್ಕೆ ₹150 ಶುಲ್ಕ ನಿಗದಿ ಮಾಡಲಾಗಿದೆ. ಬಸ್‌ಗಳಿಗೆ ₹600 ಶುಲ್ಕ ನಿಗದಿ ಪಡಿಸಲಾಗಿದೆ.

ಖಾಸಗಿ ವಾಹನಗಳಿಗೆ ಮೊದಲ 7 ನಿಮಿಷ ಉಚಿತ ನಿಲುಗಡೆಗೆ ಅವಕಾಶ ನೀಡಲಾಗಿದ್ದು, ಅನಂತರವೂ ನಿಲುಗಡೆ ಮಾಡಿದರೆ ₹150 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಒಂದು ವೇಳೆ ಯಾವುದೇ ವಾಹನ 15 ನಿಮಿಷಕ್ಕಿಂತ ಹೆಚ್ಚಿನ ಅವಧಿ ನಿಲುಗಡೆ ಮಾಡಿದರೆ ಅದನ್ನು ಟೋಯಿಂಗ್‌ ಮೂಲಕ ಸ್ಥಳೀಯ ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಲಾಗುವುದು. ಅದಕ್ಕೆ ತಗಲುವ ವೆಚ್ಚವನ್ನು ವಾಹನ ಮಾಲೀಕರೇ ಭರಿಸಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ವಿಮಾನ ನಿಲ್ದಾಣದಲ್ಲಿ ಫಲಕ ಹಾಕಿದೆ.ನೂನಕುನುಗ್ಗಲು ತಡೆಗೆ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಹೊಸ ದ್ವಾರಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಜೆಸ್ಟಿಕ್‌ ಮೆಟ್ರೋ ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ತಡೆಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ನೇರಳೆ ಮತ್ತು ಹಸಿರು ಮಾರ್ಗ ಬದಲಾವಣೆಗೆ ಅನುಕೂಲವಾಗುವಂತೆ ಹೊಸ ದ್ವಾರವನ್ನು ಸೋಮವಾರ ತೆರೆದಿದೆ.

ಕಾನ್‌ಕೋರ್ಸ್ ಮಟ್ಟದ ಈ ದ್ವಾರವು ನೇರಳೆ ಮಾರ್ಗದ ಎರಡನೇ ಪ್ಲಾಟ್‌ಫಾರ್ಮ್‌ ಮತ್ತು ಹಸಿರು ಮಾರ್ಗದ 3 ಹಾಗೂ 4ನೇ ಪ್ಲಾಟ್‌ಫಾರ್ಮ್‌ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ. ಇದರ ಪಕ್ಕದಲ್ಲಿಯೆ ಹಿಂದಿನಿಂದ ಇರುವ ಎಸ್ಕಲೇಟರ್‌ ಹಾಗೂ ಮೆಟ್ಟಿಲುಗಳ ಮೂಲಕವೂ ಮಾರ್ಗ ಬದಲಾವಣೆ ಮಾಡಿಕೊಳ್ಳಬಹುದು.

ಸದ್ಯ 73.81 ಕಿ.ಮೀ. ಉದ್ದಕ್ಕೆ ಸೇವೆ ಕಲ್ಪಿಸುತ್ತಿರುವ ನಮ್ಮ ಮೆಟ್ರೋಗೆ ಮೆಜೆಸ್ಟಿಕ್‌ ಮಾತ್ರವೇ ಇಂಟರ್‌ಚೇಂಜ್‌ ಆಗಿದೆ. ಪ್ರತಿದಿನ 65-70 ಸಾವಿರಕ್ಕೂ ಅಧಿಕ ಪ್ರಯಾಣಿಕರು ಇದನ್ನು ಬಳಸುತ್ತಿದ್ದಾರೆ. ಪೀಕ್‌ ಅವರ್‌ ಅಂದರೆ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಇಲ್ಲಿ ವಿಪರೀತ ಜನದಟ್ಟಣೆ ಉಂಟಾಗುತ್ತಿದ್ದು, ಅದರಲ್ಲೂ ನೇರಳೆ-ಹಸಿರು ಮಾರ್ಗ ಬದಲಾವಣೆ ಸಂದರ್ಭದಲ್ಲಿ ಪ್ರಯಾಣಿಕರ ನಡುವೆ ನೂಕುನುಗ್ಗಲು ಆಗುತ್ತಿದೆ. ಇದರ ನಿವಾರಣೆಗೆ ಬಿಎಂಆರ್‌ಸಿಎಲ್‌ ಇದೀಗ ಹೊಸದಾಗಿ ಮಾರ್ಗ ಬದಲಾವಣಾ ದ್ವಾರ ತೆರೆಯಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.