30ರಂದು ಮಂಗಳೂರಿನಲ್ಲಿ ಪೇಜಾವರ ಶ್ರೀಗಳ ಷಷ್ಟ್ಯಬ್ದ ಅಭಿವಂದನೆ

| Published : Mar 28 2024, 12:54 AM IST

30ರಂದು ಮಂಗಳೂರಿನಲ್ಲಿ ಪೇಜಾವರ ಶ್ರೀಗಳ ಷಷ್ಟ್ಯಬ್ದ ಅಭಿವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ೬೦ವರ್ಷಗಳ ಸಾಧನಾ ಪಥದ ನೆಲೆಯಲ್ಲಿ ಷಷ್ಟ್ಯಬ್ದಬ್ದ ಪ್ರಯುಕ್ತ ವಿಶಿಷ್ಠ ರೀತಿಯಲ್ಲಿ ‘ಅಭಿವಂದನಾ ಸಮಾರಂಭ’ ಕಲ್ಕೂರ ಪ್ರತಿಷ್ಠಾನದಿಂದ ಮಾ.30ರಂದು ಮಂಗಳೂರಲ್ಲಿ ಹಮ್ಮಿಕೊಳ್ಳಲಾಗಿದೆ.

ಮಂಗಳೂರು: ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಪೇಜಾವರ ಮಠಾಧೀಶರೂ ಹಾಗೂ ಅಯೋಧ್ಯಾ ಶ್ರೀರಾಮ ಮಂದಿರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ೬೦ವರ್ಷಗಳ ಸಾಧನಾ ಪಥದ ನೆಲೆಯಲ್ಲಿ ಷಷ್ಟ್ಯಬ್ದಬ್ದ ಪ್ರಯುಕ್ತ ವಿಶಿಷ್ಠ ರೀತಿಯಲ್ಲಿ ‘ಅಭಿವಂದನಾ ಸಮಾರಂಭ’ ಕಲ್ಕೂರ ಪ್ರತಿಷ್ಠಾನದಿಂದ ಮಾ.30ರಂದು ಮಂಗಳೂರಲ್ಲಿ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 1.30ರಿಂದ ಸಂಜೆ ೫ ರ ತನಕ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯುವ ಈ ಸಮಾರಂಭದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು.

ಸಮಾಜದ ಅನ್ಯಾನ್ಯ ಕ್ಷೇತ್ರಗಳಲ್ಲಿ ಸೇವಾ ಮನೋಭಾವನೆಯಿಂದ ದುಡಿಯುತ್ತಿರುವ ೬೦ಕ್ಕೂ ಹೆಚ್ಚು ಮಂದಿ ಸಾಧಕರ ಮೂಲಕ ಪೇಜಾವರ ಶ್ರೀಗಳಿಗೆ ಅಭಿವಂದನೆಯನ್ನು ಸಲ್ಲಿಸಲಾಗುವುದು. ಅಲ್ಲದೆ ಯಕ್ಷಗಾನದ ರಾಜ ಕಿರೀಟದೊಂದಿಗೆ ಪುಷ್ಪವೃಷ್ಟಿ ಮಾಡಲಾಗುವುದು. ಸಮಾರಂಭದಲ್ಲಿ ವಿವಿಧ ಮಹಿಳಾ ತಂಡಗಳಿಂದ ಸಾಮೂಹಿಕ ಗೀತಗಾಯನ ಹಾಗೂ ಶಾಸ್ತ್ರೀಯ ಪಂಚರತ್ನ ಕೃತಿಗಳ ಗಾಯನ ಹಮ್ಮಿಕೊಳ್ಳಲಾಗಿದ್ದು, ಪೇಜಾವರ ಶ್ರೀಗಳು ವಿವಿಧ ಕ್ಷೇತ್ರಗಳ ೬೦ ಮಂದಿ ಸಾಧಕರನ್ನು ಅಭಿನಂದಿಸಲಿರುವರು ಎಂದು ಸಂಘಟಕ ಪ್ರದೀಪ್‌ ಕುಮಾರ್‌ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.