ಹೆಣ್ಣು ಆದರ್ಶ ಸಮಾಜದ ಕಣ್ಣು: ಡಾ.ಸುರೇಖಾ

| Published : Mar 12 2024, 02:05 AM IST

ಹೆಣ್ಣು ಆದರ್ಶ ಸಮಾಜದ ಕಣ್ಣು: ಡಾ.ಸುರೇಖಾ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ ಪಟ್ಟಣದಲ್ಲಿ ಪಟ್ಟಸಾಲಿ ನೇಕಾರ ಸಮಾಜ ಮಹಿಳಾ ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ.ಸುರೇಖಾ ಯಂಡಿಗೇರಿ ಮಾತನಾಡಿ, ಹೆಣ್ಣು ಆದರ್ಶ ಸಮಾಜದ ಕಣ್ಣು. ಸಮಾಜದಲ್ಲಿ ಮಹಿಳೆಯರ ಕಾಳಜಿ ಅವಿಸ್ಮರಣೀಯ. ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದ್ದು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿಸುವ ಕೆಲಸ ಮಹಿಳೆಯರು ಮಾಡಬೇಕು ಎಂದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಹೆಣ್ಣು ಆದರ್ಶ ಸಮಾಜದ ಕಣ್ಣು. ಸಮಾಜದಲ್ಲಿ ಮಹಿಳೆಯರ ಕಾಳಜಿ ಅವಿಸ್ಮರಣೀಯ. ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದ್ದು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿಸುವ ಕೆಲಸ ಮಹಿಳೆಯರು ಮಾಡಬೇಕು. ನೇಕಾರರ ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರಿಗೆ ಪ್ರೋತ್ಸಾಹ, ಪ್ರೇರಣೆ ಅವಶ್ಯವೆಂದು ಉಪನ್ಯಾಸಕಿ ಡಾ.ಸುರೇಖಾ ಯಂಡಿಗೇರಿ ಹೇಳಿದರು.

ಪಟ್ಟಣದಲ್ಲಿ ಪಟ್ಟಸಾಲಿ ನೇಕಾರ ಸಮಾಜ ಮಹಿಳಾ ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸಮಾಜದಲ್ಲಿ ಮಹಿಳೆ ಪುರುಷರಿಗೆ ಸಮಾನವಾಗಿ ನಿಂತಿದ್ದಾಳೆ. ಹೆಣ್ಣು ಮಕ್ಕಳಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಮಹಿಳೆಯರಿಗೆ ತಾಳ್ಮೆ, ಸಹನೆ, ಪ್ರೀತಿ ಹೆಚ್ಚು. ದೈಹಿಕವಾಗಿ, ಮಾನಸಿಕವಾಗಿ ಮಹಿಳೆಯರು ಹೆಚ್ಚು ಸಬಲರಾಗಿರುತ್ತಾರೆ ಎಂದರು.

ಬಸವೇಶ್ವರ ಕಾಲೇಜು ಉಪನ್ಯಾಸಕಿ ಡಾ.ವೀಣಾ ಕಲ್ಮಠ ಮಾತನಾಡಿ, ಜವಾಬ್ದಾರಿಯುತ ಮೌಲ್ಯ ಮಕ್ಕಳಲ್ಲಿ ಮೂಡಿಸಬೇಕು. ಮಾನಸಿಕವಾಗಿ ಸಿದ್ಧರನ್ನಾಗಿಸಬೇಕು. ಮುಂದಿನ ತಲೆಮಾರಿಗೆ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ, ಮೌಲ್ಯ ಮಕ್ಕಳಿಗೆ ಮುಟ್ಟಿಸಬೇಕು. ಆಧುನಿಕತೆಯೊಂದಿಗೆ ಮಹಿಳೆಯರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಕ್ತಿ ಸ್ವರೂಪಿಣಿಯಾದ ಮಹಿಳೆಯರು ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು. ಅಭಿವೃದ್ಧಿ, ಮೌಲ್ಯದೊಂದಿಗೆ ಹೊಸತನದತ್ತ ಮುಖ ಮಾಡಬೇಕು ಎಂದರು.

ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಶ್ರೀಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಪಟ್ಟಸಾಲಿ ಸಮಾಜದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಕುರುಹಿನಶೆಟ್ಟಿ ಸಮಾಜದ ಲತಾ ರಾಂಪೂರ, ಜ್ಯೋತಿ ಆಲೂರ, ರುಕ್ಮಿಣಿ ಕಂಠಿ, ಡಾ.ವೀಣಾ ಕಲ್ಮಠ, ಡಾ.ಸುರೇಖಾ ಯಂಡಿಗೇರಿ ಹಾಗೂ ಸಾಲೇಶ್ವರ ಸಹಕಾರಿ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಭಾಗ್ಯಾ ಉದ್ನೂರ ಅಧ್ಯಕ್ಷತೆ ವಹಿಸಿದ್ದರು.

ಚಂದ್ರಕಾಂತ ಶೇಖಾ, ಗೌರಮ್ಮ ಕಲಬುರ್ಗಿ, ದೀಪಾ ಉಂಕಿ, ಶಶಿಕಲಾ ಭಾವಿ, ಗಿರಿಜಾ ಕಲ್ಯಾಣಿ, ದಾನಮ್ಮ ಕಲ್ಯಾಣಿ, ನಾಗರತ್ನಾ ಎಣ್ಣಿ, ಪ್ರೇಮಾ ಚಿಂದಿ, ಅನಸೂಯಾ ಅಲದಿ, ವೇದಾ ಶೀಪ್ರಿ, ಮಾಲಾ ರಾಜನಾಳ, ತಾರಾಮತಿ ರೋಜಿ, ಮೀನಾಕ್ಷಿ ಮದ್ದಾನಿ, ಮೀನಾಕ್ಷಿ ಜಿಡಗಿ, ಸುವರ್ಣ ಲಂಡುನವರ, ದ್ರಾಕ್ಷಾಯಣಿ ಗೊಬ್ಬಿ, ಅನಿತಾ ಶಿರೋಳ, ಸೋಮು ಕಲಬುರ್ಗಿ ಇದ್ದರು.