ಸಾರಾಂಶ
ರೈತ ತಾನು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಳ್ಳು ಬೇಲಿ, ತಂತಿ ಬೇಲಿ ಹಾಗೂ ಕಲ್ಲುಗಳಿಂದ ಬೇಲಿ ಹಾಕುವುದು ಸಾಮಾನ್ಯ. ಆದರೆ ತಾಲೂಕಿನ ಕಾಚಾಪುರದ ನಾಗನಗೌಡ ಕಾಚಾಪುರ ಎನ್ನುವ ರೈತ ತಾನು ಬೆಳೆದ ಮೂರು ಎಕರೆ ದ್ರಾಕ್ಷಿ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಿಸಿಕೊಳಲು ಬಣ್ಣ-ಬಣ್ಣದ ಸೀರೆಗಳನ್ನು ಬಳಸಿ ರಕ್ಷಣಾ ಬೇಲಿ ನಿರ್ಮಿಸಿಕೊಂಡಿದ್ದಾನೆ.
ಯಡ್ರಾಮಿ: ರೈತ ತಾನು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಳ್ಳು ಬೇಲಿ, ತಂತಿ ಬೇಲಿ ಹಾಗೂ ಕಲ್ಲುಗಳಿಂದ ಬೇಲಿ ಹಾಕುವುದು ಸಾಮಾನ್ಯ. ಆದರೆ ತಾಲೂಕಿನ ಕಾಚಾಪುರದ ನಾಗನಗೌಡ ಕಾಚಾಪುರ ಎನ್ನುವ ರೈತ ತಾನು ಬೆಳೆದ ಮೂರು ಎಕರೆ ದ್ರಾಕ್ಷಿ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಿಸಿಕೊಳಲು ಬಣ್ಣ-ಬಣ್ಣದ ಸೀರೆಗಳನ್ನು ಬಳಸಿ ರಕ್ಷಣಾ ಬೇಲಿ ನಿರ್ಮಿಸಿಕೊಂಡಿದ್ದಾನೆ.
ತಾಲೂಕಿನ ಸುಂಬಡ, ಕಾಚಾಪುರ, ದುಮ್ಮದ್ರಿ, ಮಾಗಣಗೇರಿ, ವಡಗೇರಿ, ಕುಳಗೇರಿ ಸೇರಿದಂತೆ ಹಲವಾರು ಗ್ರಾಮಗಳ ಕಾಡು ಪ್ರಾಣಿ, ಪಕ್ಷಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಆಗುತ್ತಿದ್ದಂತೆ ಕಾಡು ಪ್ರಾಣಿಗಳು ತಂಡೋಪತಂಡವಾಗಿ ಕಬ್ಬು, ದ್ರಾಕ್ಷಿ, ಬತ್ತ ಬೆಳೆಗಳಲ್ಲಿ ಬಿಡಾರ ಬಿಟ್ಟು ಬೆಳೆಗಳನ್ನು ನಾಶ ಮಾಡುತ್ತಿವೆ.ಅದನ್ನು ಗಮನಿಸಿದ ರೈತ ನಾಗನಗೌಡ ಕಾಚಾಪುರ ಸೀರೆಗಳನ್ನು ಖರೀದಿಸಿ ದ್ರಾಕ್ಷಿ ತೋಟಕ್ಕೆ ಸುತ್ತಲು ಬೇಲಿ ಹಾಕಿ ದ್ರಾಕ್ಷಿ ರಕ್ಷಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ.
80 ಸೀರೆ ಬಳಕೆ: ರಾಜ್ಯದಲ್ಲಿ ಮೊದಲೆ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಕಾಚಾಪುರ ಗ್ರಾಮದ ಸುತ್ತ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದರಿಂದ ರೈತರು ಹಗಲು ರಾತ್ರಿ ಎನ್ನದೇ ಬೆಳೆಗಳನ್ನು ಉಳಿಸಿಕೊಳ್ಳಲು ವಿವಿಧ ಕಸರತ್ತುಗಳು ಮಾಡುತ್ತಿದ್ದಾರೆ. ರೈತ ನಾಗನಗೌಡ ಕಾಚಾಪುರ ದುಬಾರಿ ಖರ್ಚು ಮಾಡಿ 80 ಸೀರೆಗಳನ್ನು ಖರೀದಿಸಿ ಸುತ್ತಲೂ ಬೇಲಿ ಹಾಕಿ ದ್ರಾಕ್ಷಿ ಬೆಳೆ ರಕ್ಷಿಸಿಕೊಂಡಿದ್ದಾನೆ.ನಾನು ಮೊದಲು ಹಂದಿಗಳ ಕಾಟಕ್ಕೆ ತುಂಬಾ ಬೇಸತ್ತು ಸುಮಾರು ಸೀರೆಗಳನ್ನು ಖರೀದಿಸಿ ಸುತ್ತಲು ಬೇಲಿ ನಿರ್ಮಿಸಿದ್ದೇನೆ. ಹಂದಿಗಳು ಎಷ್ಟೇ ಪ್ರಯತ್ನ ಮಾಡಿದರೂ ಒಳಗೆ ಪ್ರವೇಶ ಮಾಡಲು ಸಾಧ್ಯವಿಲ್ಲ.
ನಾಗನಗೌಡ , ರೈತ ಕಾಚಾಪುರಹೊಲ, ಗದ್ದೆಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ರೈತರ ಸಂಕಷ್ಟ ಅರಿತುಕೊಳ್ಳಬೇಕಿದೆ. ಕೃಷಿ ಉಪಕರಣಗಳ ಭಾಗವಾಗಿರುವ ಸೀರೆಗಳು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಮಲ್ಲಿಕಾರ್ಜುನ ಬಿರಾದಾರ, ಪ್ರಗತಿಪರ ರೈತ