ಸಂಭ್ರಮದ ದೀಪಾವಳಿ, ಖರೀದಿ ಬಲುಜೋರು

| Published : Nov 13 2023, 01:15 AM IST

ಸಾರಾಂಶ

ಬರಗಾಲದಲ್ಲೂ ದೀಪಾವಳಿ ಹಬ್ಬವನ್ನು ಭಾನುವಾರ ಪಟ್ಟಣದ ಜನತೆ ಭರ್ಜರಿ ಖರೀದಿಯಲ್ಲಿ ತೊಡಗಿದ್ದರು.ಈ ಬಾರಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಈ ಪ್ರಯುಕ್ತ ಗ್ರಾಹಕರ ಕೈಗೆಟುಕುತ್ತಿದ್ದರೂ ನಾಮುಂದೆ, ತಾಮುಂದೆ ಎನ್ನುವಂತೆ ಖರೀದಿಗೆ ಮುಂದಾಗಿದ್ದಾರೆ. ಒಂದೆಡೆ ವ್ಯಾಪಾರ ಎಲ್ಲೆಡೆ ಉತ್ತಮವಾಗಿರುವುದು ಕಂಡು ಬಂತು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಬರಗಾಲದಲ್ಲೂ ದೀಪಾವಳಿ ಹಬ್ಬವನ್ನು ಭಾನುವಾರ ಪಟ್ಟಣದ ಜನತೆ ಭರ್ಜರಿ ಖರೀದಿಯಲ್ಲಿ ತೊಡಗಿದ್ದರು.ಈ ಬಾರಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಈ ಪ್ರಯುಕ್ತ ಗ್ರಾಹಕರ ಕೈಗೆಟುಕುತ್ತಿದ್ದರೂ ನಾಮುಂದೆ, ತಾಮುಂದೆ ಎನ್ನುವಂತೆ ಖರೀದಿಗೆ ಮುಂದಾಗಿದ್ದಾರೆ. ಒಂದೆಡೆ ವ್ಯಾಪಾರ ಎಲ್ಲೆಡೆ ಉತ್ತಮವಾಗಿರುವುದು ಕಂಡು ಬಂತು.ಪಟ್ಟಣದಲ್ಲಿ ಎಲ್ಲಿ ನೋಡಿದರೂ ಬರೀ ಜನಸಂದಣಿ ಕಂಡು ಬಂದಿತು. ಬಟ್ಟೆ, ಅಗತ್ಯ ವಸ್ತು, ದಿನಸಿ, ತರಕಾರಿ, ಹಣ್ಣು- ಹಂಪಲು ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಮಾರುಕಟ್ಟೆ ಮತ್ತು ಹಬ್ಬದ ವಸ್ತುಗಳ ಖರೀದಿಗೆ ಗ್ರಾಹಕರು ಆಸಕ್ತಿ ತೋರಿದ್ದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಜನ ಮುಗಿಬಿದ್ದು, ಖರೀದಿ ಮಾಡುತ್ತಿದ್ದ ದೃಶ್ಯ ಪಟ್ಟಣದ ಮುಖ್ಯರಸ್ತೆಗಳ ಅಂಗಡಿ ಮುಂಗಟ್ಟುಗಳಲ್ಲಿ ಸಾಮಾನ್ಯವಾಗಿ ಕಂಡುಬಂತು.ತರಕಾರಿ, ಹಣ್ಣು ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಗಗನಕ್ಕೇರಿದ್ದವೂ ಬೆಲೆ ಏರಿಕೆ ಬಿಸಿ ಹಬ್ಬದ ಸಂಭ್ರಮಕ್ಕೆ ದಕ್ಕೆ ತರಲಿಲ್ಲ. ಗ್ರಾಹಕರು ಬೆಲೆ ಏರಿಕೆಯ ಬಗ್ಗೆ ಗೊಣಗುತ್ತಲೇ ಭರ್ಜರಿ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರದಿಂದ ತತ್ತರಿಸಿದ ಜನತೆಯ ಮುಖದಲ್ಲಿ ಮಂದಹಾಸ ಕಾಣಿಸಿರಲಿಲ್ಲ. ಆದರೂ ರೈತಾಪಿ ವರ್ಗವು ಸಂತೋಷದಿಂದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.ಹಣತೆ ಖರೀದಿ:ದೀಪಾವಳಿ ಹಬ್ಬ ಅಂದರೆ ದೀಪಗಳ ಸಡಗರ. ಗ್ರಾಹಕರು ಮನೆಯಲ್ಲಿ ದೀಪ ಹಚ್ಚಲು ಕುಂಬಾರ ಸಮುದಾಯ ತಯಾರಿಸಿರುವ ಹಣತೆ ಖರೀದಿ ಮಾಡುತ್ತಿದ್ದರು. ಮನೆಯ ಅಲಂಕಾರಕ್ಕೆ ಆಕಾಶಬುಟ್ಟಿ, ಮಾವಿನತೋರಣ, ಹಣತೆ, ಹಣ್ಣು-ಹಂಪಲು ಮತ್ತಿತರ ವಸ್ತುಕೊಳ್ಳಲು ಮಹಿಳೆಯರು ಆಸಕ್ತಿ ತೋರಿದರೆ, ಪಟಾಕಿ ಖರೀದಿಯ ಭರಾಟೆಯಲ್ಲಿ ಮಕ್ಕಳು-ಯುವಕ, ಯುವತಿಯರು ತೊಡಗಿದ್ದು ಕಂಡುಬಂತು.