ಸಾರಾಂಶ
ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಈದುಲ್ ಫಿತರ್ ಆಚರಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಯ ಪಟ್ಟಣದ ಮೋಹಿಯದ್ದಿನ್ ಜುಮ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಚೆರಿಯಪರಂಬು, ಹಳೆ ತಾಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕೊಟ್ಟಮುಡಿ, ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಈದುಲ್ ಫಿತರ್ ಆಚರಿಸಿದ್ದರು.ಇಲ್ಲಿಯ ಮೋಹಿಯದ್ದಿನ್ ಜುಮ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಅವರು ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ನಮಾಜ್ ಬಳಿಕ ಎಲ್ಲರು ಪರಸ್ಪರ ಶುಭಾಶಯ ಹಂಚಿಕೊಂಡ ನಂತರ ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ವಿಶೇಷ ಪ್ರಾರ್ಥನೆ ನಡೆಸಿದರು.ಈ ಸಂದರ್ಭ ಅಧ್ಯಕ್ಷರಾದ ಎಮ್.ಎಚ್ ಅಬ್ದುಲ್ ರೆಹಮಾನ್, ಉಪ ಅಧ್ಯಕ್ಷ ಪಿ ಎಮ್ ಬದ್ರುದ್ದೀನ್ , ಪಿ ಎಮ್ ಅರಫತ್, ಕಾರ್ಯದರ್ಶಿ ಪಿ ಎಮ್ ಯೂನಸ್, ಖಜಾಂಚಿ ಶಾಹಿದ್ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು, ಸಮುದಾಯ ಬಾಂಧವರು ಭಾಗವಹಿಸಿದರು.