ಸಾರಾಂಶ
ಪಾವಗಡ ಪಟ್ಟಣದ ಐತಿಹಾಸಿಕ ಕೋಟೆ ಗೋಡೆ ಕುಸಿತ ವಿವಾದಕ್ಕೆ ಸಂಬಂಧಪಟ್ಟಂತೆ ಕಾನೂನು ಕ್ರಮ ವಿಳಂಬ ವಿರೋಧಿಸಿ ತಾಲೂಕು ಮಹಾ ಆದಿಗ ಹೋರಾಟ ಸಮಿತಿ ಹಾಗೂ ಇಲ್ಲಿನ ಇತರೆ ಸಂಘಸಂಸ್ಥೆಗಳಿಂದ ತಾಪಂ ಕಚೇರಿ ಬಳಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನದ ಮುಂದುವರಿದಿದ್ದು ಬುಧವಾರ ಪ್ರತಿಭಟನೆ ಸ್ಥಳಕ್ಕೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್ ಭೇಟಿ ನೀಡಿ ಹೋರಾಟಗಾರರಿಂದ ಮಾಹಿತಿ ಪಡೆದರು.
ಕನ್ನಡಪ್ರಭವಾರ್ತೆ ಪಾವಗಡ
ಪಟ್ಟಣದ ಐತಿಹಾಸಿಕ ಕೋಟೆ ಗೋಡೆ ಕುಸಿತ ವಿವಾದಕ್ಕೆ ಸಂಬಂಧಪಟ್ಟಂತೆ ಕಾನೂನು ಕ್ರಮ ವಿಳಂಬ ವಿರೋಧಿಸಿ ತಾಲೂಕು ಮಹಾ ಆದಿಗ ಹೋರಾಟ ಸಮಿತಿ ಹಾಗೂ ಇಲ್ಲಿನ ಇತರೆ ಸಂಘಸಂಸ್ಥೆಗಳಿಂದ ತಾಪಂ ಕಚೇರಿ ಬಳಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನದ ಮುಂದುವರಿದಿದ್ದು ಬುಧವಾರ ಪ್ರತಿಭಟನೆ ಸ್ಥಳಕ್ಕೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್ ಭೇಟಿ ನೀಡಿ ಹೋರಾಟಗಾರರಿಂದ ಮಾಹಿತಿ ಪಡೆದರು.ಈ ವೇಳೆ ಮಾತನಾಡಿದ ಅವರು, ನಗರದ ಐತಿಹಾಸಿಕ ಹಿನ್ನಲೆಯ ಕೋಟೆಗೋಡೆ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಕಟ್ಟಡ ಮಾಲೀಕರಿಗೆ 3ನೋಟಿಸ್ ನೀಡಲಾಗಿದ್ದು, ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಅನುಮತಿ ರದ್ದುಪಡಿಸಲು ಕ್ರಮವಹಿಸುವುದಾಗಿ ಹೇಳಿದರು. ಐತಿಹಾಸಿಕ ಕೋಟೆಯ ಸ್ಮಾರಕ ಕಲ್ಲುಗಳನ್ನು ನಾಶಪಡಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಪಟ್ಟು ಹಿಡಿದಿದ್ದು ಕೋಟೆ ಸ್ಮಾರಕಗಳು ಪುರಸಭೆ ವ್ಯಾಪ್ತಿಗೆ ಒಳಪಟ್ಟಿಲ್ಲ ಎನ್ನುತ್ತಿದ್ದಂತೆ ಧರಣಿ ನಿರತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವರದರಾಜ್ ಧರಣಿ ನಿರತರ ಬೇಡಿಕೆ ಆಲಿಸಿ, ಕೋಟೆ ಸ್ಮಾರಕ ನಾಶ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆತರಲಾಗಿದೆ. ಇಂದು ಸಂಜೆಯೊಳಗೆ ಧರಣಿ ನಿರತರಿಗೆ ಮಾಹಿತಿ ನೀಡಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು. ಕೋಟೆ ಸ್ಮಾರಕ ಹಾಗೂ ಇತರೆ ಸ್ಥಳೀಯ ಜ್ವಲಂತ ಸಮಸ್ಯೆಯ ಬೇಡಿಕೆ ಬಗೆಹರಿಯುವ ತನಕ ಧರಣಿ ಮುಂದುವರಿಸಲಿದ್ದು ನಿವಾರಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಧರಣಿ ನಿರತರಾದ ಕನ್ನಮೇಡಿ ಕೃಷ್ಣಮೂರ್ತಿ, ವಾಲ್ಮೀಕಿ ಜಾಗೃತಿ ವೇದಿಕೆ ಸಂಚಾಲಕ ಬೇಕರಿ ನಾಗರಾಜ್ ಮತ್ತಿತರರು ಪಟ್ಟುಹಿಡಿದಿದ್ದರು.ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಶಂಷುದ್ದೀನ್ ಭೇಟಿನೀಡಿದ್ದು ಸ್ಥಳೀಯ ಸಂಘಟನೆಯ ಮುಖಂಡರಾದ ಕಡಪಲಕರೆ ಪಿ.ಹನುಮಂತರಾಯಪ್ಪ, ಸಿ.ಕೆ.ತಿಪ್ಪೇಸ್ವಾಮಿ.ಬಿ.ಪಿ.ಪೆದ್ದನ್ನ, ದುಗ್ಯಪ್ಪ, ವೆಂಕಟೇಶ್ ನರಸಿಂಹಪ್ಪ, ಹನುಮಂತರಾಯಪ್ಪ ಅನೇಕ ಮಂದಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.