ಸಾರಾಂಶ
ಗಾಜಿನ ಮನೆಯಲ್ಲಿ 16ರವರೆಗೆ ವೀಕ್ಷಣೆಗೆ ಅವಕಾಶ । ಪ್ರತಿದಿನ ಸಂಜೆ ಸಂಗೀತ ಕಾರಂಜಿ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ, ದಾವಣಗೆರೆ ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಸಹಯೋಗದಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿ 50ನೇ ವರ್ಷವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಫಲಪುಷ್ಪ ಪ್ರದರ್ಶನವನ್ನು ಇಲ್ಲಿನ ಹೊರವಲಯದಲ್ಲಿರುವ ಗಾಜಿನ ಮನೆ ಆವರಣದಲ್ಲಿ ಆಯೋಜಿಸಲಾಗಿದೆ.
ಸೋಮವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ತೋಟಗಾರಿಕೆ ಉಪನಿರ್ದೇಶಕ ಜಿ.ಸಿ ರಾಘವೇಂದ್ರ ಪ್ರಸಾದ್ ಪ್ರದರ್ಶನಕ್ಕೆ ಚಾಲನೆ ನೀಡಿದರು.ಈ ಫಲಪುಷ್ಪ ಪ್ರದರ್ಶನದಲ್ಲಿ 10 ಸಾವಿರ ನಾನಾ ಪ್ಲಾಂಟ್‌ಗಳ ಮತ್ತು ಲಕ್ಷಾಂತರ ಹೂವುಗಳಲ್ಲಿ ಚಂದ್ರಯನ-3 ಸೇರಿ ಅನೇಕ ಕಲಾಕೃತಿಗಳು ಅರಳಿವೆ. ಮತ್ತು ರೈತರು ಬೆಳೆದ ವಿವಿಧ ಹಣ್ಣುಗಳು, ತರಕಾರಿ ಪ್ರದರ್ಶನ ಇರಲಿವೆ. ಇಸ್ರೋ ಸಂಸ್ಥೆಯಿಂದ 2023ರ ಜುಲೈ 14 ರಂದು ಉಡಾವಣೆ ಮಾಡಿದ ಚಂದ್ರಯಾನ-3ನ್ನು ಮೂರು ಲಕ್ಷ ಹೂಗಳ ಬಳಸಲಾಗಿದೆ. ಪಿಎಸ್‌ಎಲ್‌ವಿ ಮಾಡಲ್, ವಿಕ್ರಂ ಲ್ಯಾಂಡರ್ , ಪ್ರಗ್ನ್ಯಾನ್ ರೋವರ್‌ಗಳು ಹೂವಿನಿಂದ ಅಲಂಕರಿಸಲಾಗಿದೆ. ಇದರ ನಿರ್ಮಾಣಕ್ಕಾಗಿ 2 ಲಕ್ಷ ಸೇವಂತಿಗೆ, 50 ಸಾವಿರ ಕೆಂಪು ಗುಲಾಬಿ ಮತ್ತು 20 ಸಾವಿರ ಆರ್ಕಿಡ್ಸ್, ಕಾರ್ನೇಷನ್, ಅಂತೋರಿಯಮ್ಸ್, ಲಿಲ್ಲೀಸ್ ಮತ್ತು ಜಿಪ್ಸೋಪಿಲಾ ಸೇರಿ ಒಟ್ಟು 3 ಲಕ್ಷ ಹೂವುಗಳ ಬಳಕೆ ಮಾಡಲಾಗಿದೆ. ವಿವಿಧ ಅಲಂಕಾರಿಕ ಮತ್ತು ಹೂವಿನ ಗಿಡಗಳ ವಿವಿಧ ಕಲಾತ್ಮಕ ವಿನ್ಯಾಸಗಳ ಜೋಡಿಸಲಾಗಿದೆ. ಶಿವನಂದಿಯನ್ನು 16 ಅಡಿ ಎತ್ತರದ ಹಾಗೂ 10 ಅಡಿ ಅಗಲದ ಕಲಾಕೃತಿಯ ರಚನೆ ಮಾಡಲಾಗಿದೆ. ಎಲ್ಲಾ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರವು ಸೊಬಗು ಇಮ್ಮಡಿಗೊಳಿಸಿದೆ. ಇದಲ್ಲದೇ ಮಕ್ಕಳಿಗೆ ವಿವಿಧ ಆಟಗಳ ಜೊತೆಗೆ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳ ನಿರ್ಮಿಸಲಾಗಿದೆ.
ಭಾರತ ಭೂಪಟದ ವಿನ್ಯಾಸ, ಐಸಿಸಿ ವರ್ಲ್ಡ್ ಕಪ್, 10 ಅಡಿ ಎತ್ತರದ ಕಾಫಿ ಕಪ್‌ನ್ನು ವಿವಿಧ ಬಗೆರಯ ಹೂವುಗಳಿಂದ ನಿರ್ಮಿಸಲಾಗಿದೆ.ಪ್ರತಿದಿನ ಸಂಜೆ ಸಂಗೀತ ಕಾರಂಜಿ ಪ್ರದರ್ಶನ ಏರ್ಪಡಿಸಿದ್ದು, ಅದು ವಿಶೇಷ ಆಕರ್ಷಣೆಯಾಗಿ ಎಲ್ಲರ ಮನ ಸೆಳೆಯುತ್ತಿದೆ. ಇನ್ನು ವಿಭಿನ್ನ ಬಗೆಯ ಕಲಾಕೃತಿ, ಚಿತ್ರಕಲೆಗಳು, ಮಾಡೆಲ್‌ಗಳ ಮುಂದೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರತಿದಿನ ಕಲಾವಿದರು ಸ್ಥಳದಲ್ಲಿಯೇ ವರ್ಣರಂಜಿತ ಚಿತ್ರ ರಚನೆ ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಈ ಉದ್ಘಾಟನಾ ಸಮಾರಂಭದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿ ವರ್ಗದವರು, ಸಾರ್ವಜನಿಕರಿದ್ದರು.ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಕ ಕೇಂದ್ರಗಳು* ಚಂದ್ರಯಾನ-3 ಮಾದರಿಯ ಪಿಎಸ್‌ಎಲ್‌ವಿ ಮಾಡಲ್, ವಿಕ್ರಂ ಲ್ಯಾಂಡರ್ , ಪ್ರಗ್ನ್ಯಾನ್ ರೋವರ್‌ಗಳು ಹೂವಿನಿಂದ ಅಲಂಕಾರ
* ರಾಜ್ಯದ ಭೂಪಟವನ್ನು ಹೂವುಗಳಿಂದ ಅಲಂಕಾರ* ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳಿಂದ ರಾಜ್ಯೋತ್ಸವ ವಿಷಯ ಕೇಂದ್ರಿಕರಿಸಿ ವಿವಿಧ ಬಗೆಯ ಚಿತ್ರಕಲೆ, ಶಿಲ್ಪಕಲಾಕೃತಿಗಳು ಮತ್ತು ಕೆತ್ತನೆಗಳ ಪ್ರದರ್ಶನ
* ಭಾರತ ಭೂಪಟದ ವಿನ್ಯಾಸ, ಐಸಿಸಿ ವರ್ಲ್ಡ್ ಕಪ್ ಮಾದರಿ, 10 ಅಡಿ ಎತ್ತರದ ಕಾಫಿ ಕಪ್----ಜಿಲ್ಲೆಯ ವೈವಿಧ್ಯತೆಯ ಪ್ರದರ್ಶನ
ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಬಣ್ಣನೆಕನ್ನಡಪ್ರಭ ವಾರ್ತೆ ದಾವಣಗೆರೆ
ಕುಂದುವಾಡ ಕೆರೆಬಳಿಯ ಗಾಜಿನ ಮನೆಯಲ್ಲಿ ನ.13 ರಿಂದ 16 ರವರೆಗೆ ಫಲಪುಷ್ಪ ಪ್ರದರ್ಶನದ ಜೊತೆಗೆ ಸಂಗೀತ ಕಾರಂಜಿ, ಲೇಜರ್ ಶೋ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.ನಗರದ ಗಾಜಿನ ಮನೆಯಲ್ಲಿ ಏರ್ಪಡಿಸಲಾದ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ವೈವಿಧ್ಯತೆ ಸಾರ್ವಜನಿಕರಿಗೆ ತೋರ್ಪಡಿಸುವ ಉದ್ದೇಶದಿಂದ ದೀಪಾವಳಿ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಅರ್ಥಪೂರ್ಣ ಮತ್ತು ಸೊಗಸಾಗಿ ಏರ್ಪಡಿಸಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಇಸ್ರೋ ಉಡಾವಣೆಗೊಳಿಸಿದ ಚಂದ್ರಯಾನ-3 ಜಿಲ್ಲೆಯ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ರೈತರು ಬೆಳೆದ ಹೂವುಗಳು, ಹಣ್ಣುಗಳನ್ನು ತಂದು ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಬಿ.ಎಚ್.ವಿನಾಯಕ, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ರೇಖಾ ಸುರೇಶ್, ಮೀನಾಕ್ಷಿ ಜಗದೀಶ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಜಿ.ಸಿ ರಾಘವೇಂದ್ರ ಪ್ರಸಾದ್ ಇತರರಿದ್ದರು......