ಸಾರಾಂಶ
ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಗ್ರಾಮದ ಹತ್ತಿರ ಬಂದಿದ್ದರಿಂದ ತಾಯಿಯೊರ್ವಳು ಪಾತ್ರೆ ಬಟ್ಟೆ ತೊಳೆಯಲು ನದಿಗೆ ಹೋಗಿದ್ದಾಗ, ತಾಯಿ ಅರಿಸಿ ಮಗು ಹೋಗಿದ್ದಾಗ ಮಗು ನೀರು ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಜಮಖಂಡಿ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಗ್ರಾಮದ ಹತ್ತಿರ ಬಂದಿದ್ದರಿಂದ ತಾಯಿಯೊರ್ವಳು ಪಾತ್ರೆ ಬಟ್ಟೆ ತೊಳೆಯಲು ನದಿಗೆ ಹೋಗಿದ್ದಾಗ, ತಾಯಿ ಅರಿಸಿ ಮಗು ಹೋಗಿದ್ದಾಗ ಮಗು ನೀರು ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಬಾಲಕಿ ಸಮೃದ್ಧಿ ಸಿದ್ದಪ್ಪಾ ತಮ್ಮಪ್ಪನವರ(5) ನೀರು ಪಾಲಾದ ಬಾಲಕಿ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ನದಿ ನೀರು ಗ್ರಾಮದ ಹತ್ತಿರ ಬಂದಿವೆ. ಅಮ್ಮ ನನ್ನು ಹುಡಕುತ್ತಾನದಿ ದಡಕ್ಕೆ ಹೋದ ತುಂಬಿದ ನದಿಯಲ್ಲಿ ಮಗು ಹರಿದು ಹೋಗುವ ದೃಶ್ಯ ಕುಡಿಯುವ ನೀರಿನ ಘಟಕದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದವರು ಬಾಲಕಿಯನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಸದಾಶಿವ ಮಕ್ಕೊಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಶೋಧ ಕಾರ್ಯಕ್ಕೆ ದ್ರೋಣ್ ಕ್ಯಾಮೆರಾ ಬಳಸಲಾಗುತ್ತಿದೆ.