ಸಾರಾಂಶ
ಬಿಕ್ಕೋಡು ರಸ್ತೆಯಲ್ಲಿ ಮೆಣಸಿನಮ್ಮ ದೇವಾಲಯದ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಈ ಮಾರ್ಗ ದಿನನಿತ್ಯ ಪ್ರಯಾಣಿಸುವ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾರ ತೊಂದರೆಯಾಗಿದ್ದು ಅಪಘಾತ ಸಂಭವಿಸುತ್ತಿದೆ ಎಂದು ಕಿಡಿಕಾರಿದರು. ಇಲ್ಲಿಯ ಪಕ್ಕದಲ್ಲೇ ಬಾಲಕಿಯರ ಪದವಿ ಕಾಲೇಜು ಇದ್ದು ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ದಿನವೂ ಈ ಮಾರ್ಗವಾಗಿ ಸಾಗಬೇಕಾಗುತ್ತದೆ. ಗುಂಡಿಗಳಲ್ಲಿ ನೀರು ನಿಲ್ಲುವ ಪರಿಣಾಮ ವಾಹನಗಳ ಚಕ್ರಗಳಿಂದ ದಾರಿಹೋಗುವವರಿಗೆ ನೀರು ಎರಚುತ್ತಿರುವ ಘಟನೆಗಳು ಪ್ರತಿದಿನವೂ ನಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಬಿಕ್ಕೋಡು ರಸ್ತೆ ಗುಂಡಿ ಬಿದ್ದು ವಾಹನ ಸವಾರರಿಗೆ ತೊಂದರೆಗೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಬಿಕ್ಕೋಡು ರಸ್ತೆಯಲ್ಲಿ ಮೆಣಸಿನಮ್ಮ ದೇವಾಲಯದ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಈ ಮಾರ್ಗ ದಿನನಿತ್ಯ ಪ್ರಯಾಣಿಸುವ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾರ ತೊಂದರೆಯಾಗಿದ್ದು ಅಪಘಾತ ಸಂಭವಿಸುತ್ತಿದೆ ಎಂದು ಕಿಡಿಕಾರಿದರು. ಇಲ್ಲಿಯ ಪಕ್ಕದಲ್ಲೇ ಬಾಲಕಿಯರ ಪದವಿ ಕಾಲೇಜು ಇದ್ದು ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ದಿನವೂ ಈ ಮಾರ್ಗವಾಗಿ ಸಾಗಬೇಕಾಗುತ್ತದೆ. ಗುಂಡಿಗಳಲ್ಲಿ ನೀರು ನಿಲ್ಲುವ ಪರಿಣಾಮ ವಾಹನಗಳ ಚಕ್ರಗಳಿಂದ ದಾರಿಹೋಗುವವರಿಗೆ ನೀರು ಎರಚುತ್ತಿರುವ ಘಟನೆಗಳು ಪ್ರತಿದಿನವೂ ನಡೆಯುತ್ತಿವೆ. ರಸ್ತೆ ಗುಂಡಿಯಲ್ಲಿ ಮಳೆಗಾಲ ಆದ್ದರಿಂದ ದಿನದಂದು ನೀರು ಹರಿಯುತ್ತಾ ಗುಂಡಿಯೊಳಗೆ ತುಂಬಿ ಭರ್ತಿಯಾಗುತ್ತಿದ್ದು, ಅಪ್ಪಿತಪ್ಪಿ ಗುಂಡಿಯೊಳಗೆ ಕಾಲಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಸ್ಥಳೀಯ ನಿವಾಸಿಗಳ ಆತಂಕವಾಗಿದೆ. ಶೀಘ್ರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ನಿರ್ವಹಣಾ ಕಾರ್ಯ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.