ವೈಭದ ಪುರಮೆರವಣಿಗೆ, ಪಡುಕಡಲಲ್ಲಿ ಕೋಟ ಗಣಪನ ವಿಸರ್ಜನೆ

| Published : Sep 13 2024, 01:36 AM IST

ಸಾರಾಂಶ

ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 49 ನೇ ವರ್ಷದ ಗಣೇಶೋತ್ಸವವು ಸಂಪನ್ನಗೊಂಡಿತು. ಮೂಡುಗಣಪತಿ ಸೇವೆ, ವಿವಿಧ ಪೂಜಾ ಕಾರ್ಯ ನೆರವೇರಿತು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಪೂಜಿಸಲ್ಪಟ್ಟ ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 49ನೇ ವರ್ಷದ ಗಣೇಶೋತ್ಸವವು ವೈಭವದಿಂದ ಸಂಪನ್ನಗೊಂಡಿತು.

ಬುಧವಾರ ಕೋಟದ ಈ ಗಣಪನಿಗೆ ಮೂಡುಗಣಪತಿ ಸೇವೆ, ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ನಂತರ ಸಂಜೆ ಕೋಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟ ಪುರಮೆರವಣಿಗೆ ಸುಮಾರು 15 ಕಿ ಮೀ ಕ್ರಮಿಸಿಕೊಂಡು ಕೋಟ ಪಡುಕಡಲ ಸಮುದ್ರದಲ್ಲಿ ವಿಸರ್ಜನೆಗೊಳಿಸಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳಾದ ಜನತಾ ಫಿಶ್ ಮಿಲ್, ಬಾರಿಕೆರೆ ಯುವಕ ಮಂಡಲ, ಅಮೃತ ಯುವಕ ಸಂಘ ಕದ್ರಿಕಟ್ಟು, ಅರ್ಚಕರ ಯುವ ಸಂಘ ಕೋಟ, ಹರ್ತಟ್ಟು ಯುವಕ ಮಂಡಲ ಕೋಟ, ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಅವರು ಸ್ಥಬ್ಧ ಚಿತ್ರ ವಿಶೇಷವಾಗಿ ಗಮನ ಸೆಳೆದವು.

ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್, ಜನತಾ ಸಂಸ್ಥೆಗಳು ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಭಕ್ತರಿಗೆ ಪಾನೀಯ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.

ಈ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್, ಅಧ್ಯಕ್ಷ ರಮನಾಥ ಜೋಗಿ, ಕಾರ್ಯಾಧ್ಯಕ್ಷ ಪ್ರಭಾಕರ್ ಅಡಿಗ, ಕಾರ್ಯದರ್ಶಿ ಚಂದ್ರಯ್ಯ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್ ಮತ್ತಿತರರು ಭಾಗಿಯಾದರು.