ಸಾರಾಂಶ
ವೈಕುಂಠ ಏಕಾದಶಿಯಂದು ದೈವತ್ವದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ. ಕುಟುಂಬ ಸಮೇತ ವೆಂಕಟೇಶ್ವರ ದೇವಸ್ಥಾನಗಳಿಗೆ ತೆರಳಿ ಪೂಜೆ, ಅಭಿಷೇಕ ಸಮರ್ಪಿಸಿ ವೆಂಕೆಟೇಶ್ವರ ದೇವರ ದರ್ಶನಾಶೀರ್ವಾದ ಪಡೆದು ಪುನೀತರಾದರು.
ಹುಬ್ಬಳ್ಳಿ:
ಮಹಾನಗರದ ವಿವಿಧ ದೇವಾಲಯ, ಮನೆ-ಮನೆಗಳಲ್ಲಿ ವೈಕುಂಠ ಏಕಾದಶಿಯನ್ನು ವೈಭವಯುತವಾಗಿ ಆಚರಿಸಲಾಯಿತು.ವೈಕುಂಠ ಏಕಾದಶಿಯಂದು ದೈವತ್ವದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ. ಕುಟುಂಬ ಸಮೇತ ವೆಂಕಟೇಶ್ವರ ದೇವಸ್ಥಾನಗಳಿಗೆ ತೆರಳಿ ಪೂಜೆ, ಅಭಿಷೇಕ ಸಮರ್ಪಿಸಿ ವೆಂಕೆಟೇಶ್ವರ ದೇವರ ದರ್ಶನಾಶೀರ್ವಾದ ಪಡೆದು ಪುನೀತರಾದರು.
ನೃಪತುಂಗ ಬೆಟ್ಟದಲ್ಲಿರುವ ವೆಂಕಟೇಶ್ವರ ದೇವಸ್ಥಾನ, ಕುಂಬಕೋಣಂ ಹಾಗೂ ರಾಯಾಪುರ ಇಸ್ಕಾನ್ ಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಉತ್ಸಾಹ ಸಂಭ್ರಮದಿಂದ ಕೂಡಿದ್ದವು. ಭಗವಂತನ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಿದ್ದರು.ಇಸ್ಕಾನ್ ಮಂದಿರದಲ್ಲಿ ಬೆಳಗಿನ ಜಾವ 4.30ಕ್ಕೆ ಶ್ರೀಕೃಷ್ಣ ಬಲರಾಮರ ಮಹಾ ಮಂಗಳಾರತಿಯೊಂದಿಗೆ ಶುಕ್ರವಾರದ ಕಾರ್ಯಕ್ರಮ ಆರಂಭವಾದವು. ಈ ಸಮಯದಲ್ಲಿ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೈಕುಂಠ ನಾರಾಯಣನ ಅಲಂಕಾರದಲ್ಲಿದ್ದ ಶ್ರೀಕೃಷ್ಣನ ದರ್ಶನ ಪಡೆದು ಭಕ್ತರು ಧನ್ಯತೆ ಮೆರೆದರು. ಭಗವಂತನನ್ನು ಸ್ತುತಿಸುವ ಭಜನೆ ಹಾಗೂ ಕೀರ್ತನೆಗಳಲ್ಲಿ ಪಾಲ್ಗೊಂಡು ಭಾವುಕರಾದ ಭಕ್ತರು ಭಗವಂತನ ವಿಗ್ರಹಗಳ ಮುಂದೆ ನರ್ತಿಸಿದರು.ವಿಶೇಷವಾಗಿ ಅಲಂಕರಿಸಿ ಸ್ಥಾಪಿಸಲಾಗಿದ್ದ ಸ್ವರ್ಣ ವರ್ಣದ ವೈಕುಂಠ ದ್ವಾರವನ್ನು 10.30ಕ್ಕೆ ತೆರೆಯಲಾಯಿತು. ಈ ಮಂಗಳಕರ ಸಂದರ್ಭಕ್ಕೆಂದೇ ಭಗವಂತನ ಒಂದು ಲಕ್ಷನಾಮಗಳ ಜಪ ಸೇವೆಯು ಇಡೀ ದಿನ ನೆರವೇರಿತು. ವಿಶೇಷ ಮಂಟಪದ ಮುಂದೆ ಸುಂದರವಾಗಿ ಅಲಂಕಾರದೊಂದಿಗೆ ಸ್ಥಾಪಿತಗೊಂಡ ಕಲಶಗಳಿಗೆ ಭಕ್ತರು ಪುಷ್ಪಾರ್ಚನೆ ಸೇವೆ ಮಾಡಿ ಭಕ್ತಿಯ ಪರವಶರಾದರು.
ಶ್ರೀವೈಕುಂಠ ನಾರಾಯಣನನ ಕೃಪೆ ಮತ್ತು ವಿಶ್ವ ಶಾಂತಿಗಾಗಿ ಮಹತ್ವವಾದ ವೆಂಕಟೇಶ್ವರನ ಹೋಮ ನೆರವೇರಿಸಲಾಯಿತು.