ಸಾರಾಂಶ
ಎಲ್ಲ ಜಾತಿ ವರ್ಗ, ಇಲಾಖೆಗಳನ್ನು ಸಮಾನವಾಗಿ ಕಂಡಂತಹ ಉತ್ತಮವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೊಟ್ಟಿದ್ದಾರೆ. ₹30 ಸಾವಿರ ಕೋಟಿಯಷ್ಟು ಹೆಚ್ಚುವರಿಯಾದ ಬಜೆಟ್ ಇದಾಗಿರುವುದರಿಂದ ಎಲ್ಲ ಮೂಲಸೌಕರ್ಯಗಳಿಗೆ ಹಣದ ಕೊರತೆ ಆಗುವುದಿಲ್ಲ. ಬಜೆಟ್‌ನಲ್ಲಿ ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡಿರುವುದು ವಿಶೇಷವಾಗಿದೆ ಎಂದು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದ್ದಾರೆ.
ಸಾಗರ: ಎಲ್ಲ ಜಾತಿ ವರ್ಗ, ಇಲಾಖೆಗಳನ್ನು ಸಮಾನವಾಗಿ ಕಂಡಂತಹ ಉತ್ತಮವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೊಟ್ಟಿದ್ದಾರೆ ಎಂದು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯಿಸಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ₹30 ಸಾವಿರ ಕೋಟಿಯಷ್ಟು ಹೆಚ್ಚುವರಿಯಾದ ಬಜೆಟ್ ಇದಾಗಿರುವುದರಿಂದ ಎಲ್ಲ ಮೂಲಸೌಕರ್ಯಗಳಿಗೆ ಹಣದ ಕೊರತೆ ಆಗುವುದಿಲ್ಲ. ಬಜೆಟ್‌ನಲ್ಲಿ ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡಿರುವುದು ವಿಶೇಷವಾಗಿದೆ. ಮುಖ್ಯವಾಗಿ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಸ್ಮಾರಕಕ್ಕೆ ಹಣ ಮೀಸಲಿಟ್ಟಿರುವುದು ಸಂತಸ ತಂದಿದೆ ಎಂದರು.ಬಿಜೆಪಿ ನಡೆ ಖಂಡನೀಯ:
ಮುಖ್ಯಮಂತ್ರಿ ಅವರು ಬಜೆಟ್ ಮಂಡಿಸುವಾಗ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿರುವುದು ಖಂಡನೀಯ. ಬಜೆಟ್ ಮಂಡಿಸುವ ಸಂದರ್ಭ ಎಲ್ಲರೂ ಸುಮ್ಮನೆ ಕೇಳಬೇಕು. ಅನಂತರ ಈ ಕುರಿತಂತೆ ಚರ್ಚೆ, ವಿಮರ್ಶೆ ನಡೆಸಲು ಅವಕಾಶವಿದೆ. ಅದು ಬಿಟ್ಟು ಸಭಾತ್ಯಾಗ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತಹದಲ್ಲ ಎಂದು ಬೇಳೂರು ಹೇಳಿದರು.- - - -16SAGARA: ಗೋಪಾಲಕೃಷ್ಣ ಬೇಳೂರು, ಶಾಸಕ, ಸಾಗರ ಕ್ಷೇತ್ರ