ಸಾರಾಂಶ
ಮುಧೋಳ: ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಅಡಿಯಲ್ಲಿ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುವೆಂಪುರವರ 118ನೇ ಜನ್ಮ ದಿನದ’ ನಿಮಿತ್ತ ಆಯೋಜಿಸಿದ್ದ ರಸಋಷಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಉಪನ್ಯಾಸಕಿ ಶೈಲಾ ಹಿರೇಮಠ ಪುಷ್ಪನಮನ ಸಲ್ಲಿಸಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಕುವೆಂಪು ವಿಶ್ವ ಕುಟುಂಬಕಂ ಕಲ್ಪನೆಯನ್ನು ಕೊಟ್ಟವರು. ವೈಚಾರಿಕ ನೆಲೆಗಟ್ಟಿನ ಮೇಲೆ ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಅವರು ತಮ್ಮ ಸಾಹಿತ್ಯದಲ್ಲಿ ಜಾತಿ, ಮತ, ಪಂಥ ಮೀರಿದ ಜಗತ್ತು ಒಂದೆಂಬ ವಿಶ್ವಮಾನವ ಸಂದೇಶ ಕೊಟ್ಟಿದ್ದಾರೆ. ಇವರ ಬರಹಗಳಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ನಿಲುವುಗಳಿದ್ದು, ಇವುಗಳನ್ನು ಆಚರಣೆಯಲ್ಲಿ ತರವುದು ಅವಶ್ಯಕವಾಗಿದೆ ಎಂದು ಮುಧೋಳ ಆರ್.ಎಂ.ಜಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶೈಲಾ ಹಿರೇಮಠ ಹೇಳಿದರು.ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಅಡಿಯಲ್ಲಿ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುವೆಂಪುರವರ 118ನೇ ಜನ್ಮ ದಿನದ’ ನಿಮಿತ್ತ ಆಯೋಜಿಸಿದ್ದ ರಸಋಷಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಚಾರ್ಯ ಪ್ರೊ.ಮಲ್ಲಿಕಾರ್ಜುನ ಎಂ. ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅಗ್ರಗಣ್ಯರಾಗಿದ್ದಾರೆ. ನಾಗರಿಕರು ಗುಡಿ, ಚರ್ಚ್, ಮಸೀದಿಯಲ್ಲಿರುವ ಕಂದಾಚಾರಗಳಿಂದ ಹೊರಬರಲು ಕರೆಕೊಟ್ಟರು, ಅವರ ವಿಶ್ವಮಾನವ ಸಂದೇಶಗಳನ್ನು ಆಚರಣೆಯಲ್ಲಿ ತರಲು ತಾವು ಕಂಕಣಬದ್ಧರಾಗಬೇಕು ಎಂದು ವಿದ್ಯಾರ್ಥಿನಿ ಕರೆಕೊಟ್ಟರು.ವಿದ್ಯಾರ್ಥಿನಿಯರಾದ ಭಾರತಿ ತಳಗೇರಿ ಮತ್ತು ಸುರೇಖಾ ದಳವಾಯಿ ಅವರು ಕುವೆಂಪುರವರ ವಿಶ್ವಮಾನವ ಗೀತೆಯಾದ ಓ ನನ್ನ ಚೇತನ ಹಾಡು ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎನ್. ಬಾರಕೇರ ಸ್ವಾಗತಿಸಿದರು. ಪ್ರೊ.ಕೆ.ಎಲ್.ಗುಡಿಮನಿ ವಂದಿಸಿದರು., ಪ್ರೊ ಮಲ್ಲಿಕಾರ್ಜುನ ಎಮ್ ಪರಿಚಯಿಸಿದರು, ಸವಿತಾ ಕಡಕೋಳ ಪ್ರಾರ್ಥನೆ ಹೇಳಿದರು, ಅಕ್ಷತಾ ಬಡಿಗೇರ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು, ದುಂಡಮ್ಮ ಮಠದ ನಿರೂಪಿಸಿದರು.
ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.