ಉತ್ತಮ ಸಮಾಜಕ್ಕೆ, ಉತ್ತಮ ವಾತಾವರಣ ಅವಶ್ಯಕ

| Published : Sep 21 2024, 01:50 AM IST

ಸಾರಾಂಶ

ಬಸವಕಲ್ಯಾಣ ತಾಲೂಕಿನ ಪರತಾಪೂರ ಗ್ರಾಮದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ಜರುಗಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶ ದಿಂದ ಸೆ.14 ರಿಂದ ಅ.1 ರವರೆಗೆ ಹಮ್ಮಿಕೊಂಡ ಸ್ವಚ್ಛತಾ ಹೀ ಸೇವಾ ಅಭಿಯಾನ ಗ್ರಾಪಂ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

ತಾಲೂಕಿನ ಪರತಾಪೂರ ಗ್ರಾಮದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಸರ್ಕಾರದ ಆದೇಶದಂತೆ ನಿತ್ಯ ಚಟುವಟಿಕೆಗಳು ಮಾಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.ಮನುಷ್ಯನಿಗೆ ಮೂಲಭೂತ ಸೌರ್ಯಗಳು ಎಷ್ಟು ಮುಖ್ಯವೋ, ಆರೋಗ್ಯವಂತ ಜೀವನಕ್ಕೆ ಉತ್ತಮವಾದ ವಾತವರಣ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ನಮ್ಮ ಸುತ್ತಮುತ್ತಲಿರುವ ವಾತಾವರಣವನ್ನು ನಾವು ಸ್ವಚ್ಛತೆ ಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಎಂದು ತಿಳಿಸಿದರು.

ನಂತರ ಶಾಲಾ ಆವರಣ, ಅಂನಗವಾಡಿ ಕೇಂದ್ರಗಳು, ಆರೋಗ್ಯ ಉಪಕೇಂದ್ರ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ್, ಸದಸ್ಯರಾದ ಖುರ್ಷಿದ, ಕಾವೇರಿ ನಾಮದೇವ, ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಪ್ರಮುಖರಾದ ನವನಾಥ ರಾಠೋಡ, ಪಿಡಿಒ ಚಂದ್ರಾಮ ಧೂಳಖೇಡ, ವಿದ್ಯಾಸಾಗರ ಉಡಚಣ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಗ್ರಾಪಂ ಸಿಬ್ಬಂದಿ ಇದ್ದರು.