ಉತ್ತಮ ಶಿಕ್ಷಕ ಸ್ಫೂರ್ತಿದಾಯಕವಾಗಿರಬೇಕು: ಕುಲಸಚಿವ ಡಾ.ಎನ್. ನಾಗರಾಜ

| Published : Mar 07 2025, 12:50 AM IST

ಉತ್ತಮ ಶಿಕ್ಷಕ ಸ್ಫೂರ್ತಿದಾಯಕವಾಗಿರಬೇಕು: ಕುಲಸಚಿವ ಡಾ.ಎನ್. ನಾಗರಾಜ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಪ್ರಚಲಿತ ವಿಷಯದತ್ತಾ ನವೀಕರಿಸಬೇಕು. ಶಿಕ್ಷಕರು ಎಂದು ಗುರುತಿಸಿಕೊಳ್ಳಲು, ನಮ್ಮನ್ನು ನಾವು ಬೇರೆಯವರ ಮೂಲಕ ಗುರುತಿಸಿಕೊಂಡಾಗ ಅದು ಯಶಸ್ಸು.

ಕನ್ನಡಪ್ರಭ ವಾರ್ತೆ ಮೈಸೂರು

ಉತ್ತಮ ಶಿಕ್ಷಕನಾದವನು ಎಂದಿಗೂ ಮಕ್ಕಳಿಗೆ ಸ್ಫೂರ್ತಿದಾಯಕನಾಗಿರಬೇಕು. ಸಮಾಜದ ಜನ ಮತ್ತು ಬೇರೊಬ್ಬ ವ್ಯಕ್ತಿಯಿಂದ ಗುರುತಿಸಿಕೊಳ್ಳುವವನಾಗಬೇಕು ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎನ್. ನಾಗರಾಜ ತಿಳಿಸಿದರು.

ನಗರದ ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಒಬ್ಬ ಉತ್ತಮ ಶಿಕ್ಷಕರಾಗಲು ಬೇಕಾಗಿರುವುದು ಉತ್ತಮವಾದ ಜ್ಞಾನ ಒಂದೇ ಅಲ್ಲ. ಜೊತೆಗೆ ತಾನು ಓದಿದ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು ಎಂದರು.

ಒಬ್ಬ ವಿದ್ಯಾರ್ಥಿ ಉನ್ನತ ಸ್ಥಾನಕ್ಕೆ ಯಶಸ್ಸನ್ನು ಕಾಣಲು, ತನ್ನ ಪರಿಶ್ರಮದ ಜೊತೆ ಇತರರು ಮಾಡುವ ಕೆಲಸವನ್ನು ತಾನು ಅವರಿಗಿಂತ ವಿಭಿನ್ನವಾಗಿ ಮಾಡಬೇಕು. ವಿಭಿನ್ನತೆ ಇದ್ದಲ್ಲಿ ಯಶಸ್ಸು ಖಚಿತ ಎಂದು ಅವರು ಹೇಳಿದರು.

ವಾಣಿಜ್ಯ ತೆರಿಗೆ ಅಧಿಕಾರಿ ಬಸವರಾಜ್ ಬರಡನಪುರ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಭಯ ಬೇಡ, ಆತ್ಮ ವಿಶ್ವಾಸ, ಧೈರ್ಯ, ಹಂಬಲ, ಛಲ, ಸತತ ಪ್ರಯತ್ನ ಇದ್ದರೆ ಸಾಕು ಎಂದರು.

ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ಶೈಕ್ಷಣಿಕ ಸಂಯೋಜಕ ಪ್ರೊ.ಎಂ.ಆರ್. ಜಯಪ್ರಕಾಶ್ ಮಾತಾನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಪ್ರಚಲಿತ ವಿಷಯದತ್ತಾ ನವೀಕರಿಸಬೇಕು. ಶಿಕ್ಷಕರು ಎಂದು ಗುರುತಿಸಿಕೊಳ್ಳಲು, ನಮ್ಮನ್ನು ನಾವು ಬೇರೆಯವರ ಮೂಲಕ ಗುರುತಿಸಿಕೊಂಡಾಗ ಅದು ಯಶಸ್ಸು ಎಂದು ತಿಳಿಸಿದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಮಹೇಶ ದಳಪತಿ ಮೊದಲಾದವರು ಇದ್ದರು.