ಕುಡುಕರ ಅಡ್ಡೆಯಾಗಿರುವ ಸರ್ಕಾರಿ ಕಟ್ಟಡ

| Published : Feb 09 2024, 01:47 AM IST

ಕುಡುಕರ ಅಡ್ಡೆಯಾಗಿರುವ ಸರ್ಕಾರಿ ಕಟ್ಟಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕೆಲಸದ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಮದ್ಯವ್ಯಸನಿಗಳು, ಪುಂಡರ ತಾಣವಾಗುತ್ತಿದ್ದು, ಮಲ ಮೂತ್ರ ವಿಸರ್ಜನೆಯಿಂದ ದುರ್ನಾತ ಬೀರುತ್ತದೆ. ಸಂಜೆಯಾದಂತೆ ಕುಟುಕರು ಹಾಗೂ ಪುಂಡರ ಅಡ್ಡೆಯಾಗಿ ಮಾರ್ಪಾಡುತ್ತದೆ. ಇಲ್ಲಿ ವಿದ್ಯುತ್‌ ದೀಪ ಇಲ್ಲದಿರುವುದು ಮದ್ಯ ವ್ಯಸನಿಗಳಿಗೆ ಮತ್ತು ಪುಂಡರಿಗೆ ಹೇಳಿಮಾಡಿಸಿದ ತಾಣವಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಈ ಹಿಂದೆ ಸರ್ಕಾರದ ಅನುದಾನದಿಂದ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರ ಭವನ, ವಾರ್ತಾ ಇಲಾಖೆ ಕಚೇರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಕಟ್ಟಡದ ಪಕ್ಕದ ಎರಡು ಸರ್ಕಾರಿ ಕಟ್ಟಡಗಳು ಖಾಲಿ ಇದ್ದು ಹಾಳು ಕೊಂಪೆಯಂತಾಗಿವೆ. ರಾತ್ರಿಯಾದರೆ ಸಾಕು ಇವೆರಡೂ ಕಟ್ಟಗಳು ಕುಡುಕರ ಅಡ್ಡೆಯಾಗಿ ಮಾರ್ಪಾಡುತ್ತವೆ.

ಸರ್ಕಾರಿ ಕೆಲಸದ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಮದ್ಯವ್ಯಸನಿಗಳು, ಪುಂಡರ ತಾಣವಾಗುತ್ತಿದ್ದು, ಮಲ ಮೂತ್ರ ವಿಸರ್ಜನೆಯಿಂದ ದುರ್ನಾತ ಬೀರುತ್ತದೆ. ಸಂಜೆಯಾದಂತೆ ಕುಟುಕರು ಹಾಗೂ ಪುಂಡರ ಅಡ್ಡೆಯಾಗಿ ಮಾರ್ಪಾಡುತ್ತದೆ. ಇಲ್ಲಿ ವಿದ್ಯುತ್‌ ದೀಪ ಇಲ್ಲದಿರುವುದು ಮದ್ಯ ವ್ಯಸನಿಗಳಿಗೆ ಮತ್ತು ಪುಂಡರಿಗೆ ಹೇಳಿಮಾಡಿಸಿದ ತಾಣವಾಗಿದೆ. ಸರ್ಕಾರಿ ಕಚೇರಿಗೆ ಬಳಸಿಕೊಳ್ಳಿ

ಜಿಲ್ಲಾಧಿಕಾರಿಗಳಾಗಲಿ ಸಂಬಂಧಪಟ್ಟ ಇಲಾಖೆಗಳವರಾಗಲಿ ಇತ್ತ ಗಮನ ಹರಿಸಿ ಈ ಕಟ್ಟಡವನ್ನು ಸರ್ಕಾರಿ ಇಲಾಖೆಯ ಯಾವುದಾದರೂ ಸರ್ಕಾರಿ ಕಚೇರಿಗೆ ಬಳಸಿಕೊಂಡರೆ ಆಗುತ್ತಿರುವ ನಷ್ಟವನ್ನು ತುಂಬಿಕೊಳ್ಳಬಹುದು. ಬಾಡಿಗೆ ನೀಡಿ ಸರ್ಕಾರಿ ಕಚೇರಿ ನಡೆಸುತ್ತಿರುವ ಇಲಾಖೆಗಳಲ್ಲಿ ಕನಿಷ್ಠಪಕ್ಷ ಎರಡು ಇಲಾಖೆಗೆ ಈ ಕಟ್ಟಡಗಳಿಗೆ ಸ್ಥಳಾಂತರಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಯಾವುದೇ ಕಲಾಪಕ್ಕೂಅವಕಾಶ ಇಲ್ಲದೆ ಯಾವುದೇ ಕಚೇರಿ ಕಾರ್ಯ ನಿರ್ವಹಿಸದೆ ಇರುವ ಈ ಅಮೂಲ್ಯ ಕಟ್ಟಡ ಈಗ ನಿರಾಶ್ರಿತರ ತಾಣವು ಸಹ ಆಗಿಲ್ಲ ಹೀಗೆ ಅನುಪಯುಕ್ತವಾಗಿ ಇರುವ ಈ ಕಟ್ಟಡದಲ್ಲಿ ಉಪಯೋಗವಾಗುವ ರೀತಿಯಲ್ಲಿ ನಗರಸಭೆಯವರು ಈ ಕಟ್ಟಡಗಳನ್ನು ವಶಕ್ಕೆ ಪಡೆದುಕೊಂಡು ಬಳಕೆಗೆ ವ್ಯವಸ್ಥೆ ಮಾಡಬಹುದು.

ಸಾರ್ವಜನಿಕ ಶೌಚಾಲ ನಿರ್ಮಿಸಲಿ

ಅತ್ಯಂತ ಜನನಿ ಬಿಡ ಹಿಂಭಾಗದಲ್ಲಿ ಹಾಗೂ ಅತ್ಯಂತ ಸಮೀಪವಿರುವ ಈ ಸ್ಥಳದಲ್ಲಿ ಅನೇಕ ಬಾರಿ ಸುತ್ತಮುತ್ತಲ ಊರುಗಳಿಂದ ಬರುವ ಮಹಿಳೆಯರು ಮತ್ತು ಪುರುಷರು ಸಾರ್ವಜನಿಕ ಸುಲಭ ಶೌಚಾಲಯವಿಲ್ಲದೆ ಪರದಾಡುವುದು ಕಂಡು ಬಂದಿದೆ. ಸಾರ್ವಜನಿಕ ಹಿತಾದೃಷ್ಟಿಯಿಂದ ಆಲೋಚಿಸಬಹುದಾದರೆ ಸಮಾಜದ ಸಾರ್ವಜನಿಕ ಆರೋಗ್ಯ ಕಾಪಾಡಲು ಶೌಚಾಲಯಗಳ ಅವಶ್ಯಕತೆ ಜಿಲ್ಲಾ ಕೇಂದ್ರದಲ್ಲಿ ಬಹಳಷ್ಟು ಇದೆ.

ಅಕ್ರಮ ಚಟುವಟಿಕೆಗಳ ತಾಣ

ಈ ಕಾರಣಕ್ಕಾದರೂ ಉಪಯೋಗವಾದರೆ ಅದೇ ಎಷ್ಟೋ ಮೇಲು ಒಂದಿಬ್ಬರು ಸಿಬ್ಬಂದಿ ವರ್ಗಕ್ಕೆ ಅವರ ಕುಟುಂಬಕ್ಕೆಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಸಹ ಆಗುತ್ತದೆ ಹಾಗೂ ಇದರಿಂದ ಬರುವ ಆದಾಯ ನಗರಸಭೆಯ ಬೊಕ್ಕಸವನ್ನು ತುಂಬುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳವರು .ಸಾರ್ವಜನಿಕ ಸ್ಥಳಗಳು ಅಕ್ರಮ ಚಟುವಟಿಕೆಗಳ ತಾಣವಾಗುವುದು ಖಂಡನೀಯ. ಸಂಬಂಧಿಸಿ ಅಧಿಕಾರಿಗಳು, ತಕ್ಷಣ ಸೂಕ್ತಕ್ರಮ ಕೈಗೊಳ್ಳಬೇಕು. ಸ್ವತ್ಛತಾ ಅಭಿಯಾನವನ್ನು ಇಲ್ಲಿಂದಲೇ ಆರಂಭವಾಗಲಿ ಎಂದು ಸಾಹಿತಿ ಟಿ.ಎಸ್.ನಾಗೇಂದ್ರ ಬಾಬು ಒತ್ತಾಯಿಸಿದ್ದಾರೆ. ಸಿಕೆಬಿ-3 ಚಿಕ್ಕಬಳ್ಳಾಪುರ ನಗರದಲ್ಲಿ ತಾಲೂಕು ಕಸಾಪ ಕಚೇರಿ ಪಕ್ಕದ ಸರ್ಕಾರಿ ಕಟ್ಟಡ ಬಳಸೆ ಮೂಲೆಗುಂಪಾಗಿರುವುದು.