ಸಾರಾಂಶ
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಹೋರಾಟ ಮಾಡುತ್ತಾ ರಾಜಕಾರಣಕ್ಕೆ ಬಂದಿದ್ದೇನೆ. ಆ ಹೋರಾಟಗಳನ್ನು ಮಾಡಿದ್ದರಿಂದಲ್ಲೇ ಜನರು 3 ಬಾರಿ ಶಾಸಕನ್ನನ್ನಾಗಿ ಆಯ್ಕೆ ಮಾಡಿದ್ದಾರೆ. ನನ್ನ ವಿರುದ್ಧ ಎಷ್ಟೇ ಪ್ರಕರಣ ದಾಖಲಿಸಿದರೂ ಹೆದರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಹೋರಾಟ ಮಾಡುತ್ತಾ ರಾಜಕಾರಣಕ್ಕೆ ಬಂದಿದ್ದೇನೆ. ಆ ಹೋರಾಟಗಳನ್ನು ಮಾಡಿದ್ದರಿಂದಲ್ಲೇ ಜನರು 3 ಬಾರಿ ಶಾಸಕನ್ನನ್ನಾಗಿ ಆಯ್ಕೆ ಮಾಡಿದ್ದಾರೆ. ನನ್ನ ವಿರುದ್ಧ ಎಷ್ಟೇ ಪ್ರಕರಣ ದಾಖಲಿಸಿದರೂ ಹೆದರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶನಿವಾರ ಹೊನ್ನಾಳಿ ಪಟ್ಟಣ, ಹುಟ್ಟೂರು ಕುಂದೂರು ಗ್ರಾಮ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿರುವ ಗೌರಿ- ಗಣೇಶಗಳ ದರ್ಶನ ಮಾಡಿದ ನಂತರ ಅವರು ಮಾತನಾಡಿದರು.ಯಾವುದೇ ಸರ್ಕಾರಗಳು ಇದ್ದಾಗಲೂ ಪ್ರತಿವರ್ಷ ಗಣೇಶ ವಿಸರ್ಜನೆ ಸಮಯದಲ್ಲಿ ಡಿಜೆ ಸೌಂಡ್ ಬಳಕೆಗೆ ಅನುಮತಿ ನೀಡುತ್ತಿದ್ದರು. ಆದರೆ ಈ ಬಾರಿ ಏಕಾಏಕಿ ಅನುಮತಿ ನಿರಾಕರಿಸಿದ್ದಾರೆ. ಡಿಜೆಗೆ ಅನುಮತಿ ಕೊಡದೇ ಇರುವುದನ್ನು ಖಂಡಿಸಿ ಪ್ರತಿಭಟಿಸಿದರೆ, ಹಿಂದೂಗಳ ಪರ ಮಾತನಾಡಿದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆ ಮೂಲಕ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆ ಯಾರು ಹೆದರುವುದಿಲ್ಲ. ಹಿಂದೂ ಜಾಗರಣೆ ವೇದಿಕೆ ಪ್ರಮುಖ್ ಸತೀಶ್ ಪೂಜಾರಿ ಅವರನ್ನು ವಿಚಾರಣೆ ನೆಪದಲ್ಲಿ ವಿನಾಕಾರಣ ಬಂಧಿಸುವ ಅಗತ್ಯತೆ ಏನಿತ್ತು? ಈ ಹಿಂದೆ ಹಾಗೂ ಈಗ ಸಿದ್ದರಾಮಯ್ಯ ಅಧಿಕಾರದಲ್ಲಿ ವಿನಾಕಾರಣ ಹಿಂದೂಗಳಿಗೆ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದರು.- - -
-30ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ಪಟ್ಟಣದ ಮೇದಾರ್ ಕೇರಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶನನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದರ್ಶನ ಮಾಡಿ, ಪೊಜೆ ಸಲ್ಲಿಸಿದರು.