ಕಡೂರು ಪಟ್ಟಣದ ಶ್ರೀವೇಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ 32ನೇ ವರ್ಷದ ಶ್ರೀ ವೈಕುಂಠ ಏಕಾದಶಿ ಎರಡನೇ ದಿನವಾದ ಬುಧವಾರವೂ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆ ಶ್ರೀ ವೇಂಕಟೇಶ್ವರ ಸ್ವಾಮಿಗೆ ಶ್ರೀ ಭೂದೇವಿ ಶ್ರೀದೇವಿಯವರ ಸಹಿತ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ, ಕಡೂರು
ಪಟ್ಟಣದ ಶ್ರೀವೇಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ 32ನೇ ವರ್ಷದ ಶ್ರೀ ವೈಕುಂಠ ಏಕಾದಶಿ ಎರಡನೇ ದಿನವಾದ ಬುಧವಾರವೂ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆ ಶ್ರೀ ವೇಂಕಟೇಶ್ವರ ಸ್ವಾಮಿಗೆ ಶ್ರೀ ಭೂದೇವಿ ಶ್ರೀದೇವಿಯವರ ಸಹಿತ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.ಬೆಳಿಗ್ಗೆ 11ಗಂಟೆಗೆ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗು ಶ್ರೀ ಪಾರ್ವತಿ ದೇವಾಲಯದಲ್ಲಿ ಶ್ರೀ ಈಶ್ವರ, ಶ್ರೀ ಗಣಪತಿ, ಶ್ರೀಸುಬ್ರಹ್ಮಣ್ಯ, ಶ್ರೀಪಾರ್ವತಿ ಮತ್ತು ನವಗ್ರಹಗಳಿಗೂ ಪಂಚಾಮೃತ ಅಭಿಷೇಕ ನಡೆಯಿತು. ಶ್ರೀ ಶಿವ ದೇವರಿಗೆ ಭಸ್ಮಾಲಂಕಾರ ಶ್ರೀ ಪಾರ್ವತಿ ಅಮ್ಮನಿಗೆ ಅರಿಶಿನ ಅಲಂಕಾರ ಮಾಡಲಾಯಿತು. ಆನಂತರ ಮಹಾ ಮಂಗಳಾರತಿ ನಡೆವ ಮೂಲಕ ಪ್ರಸಾದ ವಿನಿಯೋಗ ನಡೆಯಿತು.
ಆನಂತರ ಶ್ರೀ ಸ್ವಾಮಿಗೆ ಶ್ರೀದೇವಿ ಮತ್ತು ಭೂದೇವಿಯವರಿಗೆ ಸಾಂಪ್ರದಾಯಿಕ ಪೂಜೆಗಳು ನೆರವೇರಿದವು. ಸೇರಿದ್ದ ಸಾವಿರಾರು ಭಕ್ತರು ಸಾಕ್ಷಿಯಾಗುವ ಮೂಲಕ ಶ್ರೀ ಸ್ವಾಮಿ ಕಲ್ಯಾಣೋತ್ಸವ ಮಂತ್ರ ಘೋಷಣೆಗಳೊಂದಿಗೆ ನೆರವೇರಿತು. ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ಕಾರ್ಯಗಳಲ್ಲಿ ಭಾಗವಹಿಸಿ ಪುನೀತರಾದರು. ಬಂದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಇದೇ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿ ಡಿ.ಪ್ರಶಾಂತ್ ಮಾತನಾಡಿ, ಎರಡು ದಿನಗಳ ಕಾಲ ಶ್ರೀ ವೇಂಕಟೇಶ್ವರ ಸ್ವಾಮಿ ವೈಕುಂಠ ಏಕಾದಶಿ ಕಾರ್ಯಕ್ರಮ ಶಾಂತಿಯಿಂದ ನಡೆಯಲು ಸಹಕರಿಸಿದ ಭಕ್ತರು ದೇವಾಲಯದ ಆಡಳಿತ ವರ್ಗದ ಸಮಿತಿ ಪದಾಧಿಕಾರಿಗಳಿಗೂ ಪೋಲೀಸರಿಗೂ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿದರು.
31ಕೆಕೆಡಿಯು1.ಕಡೂರಿನಲ್ಲಿ ನಡೆದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಶ್ರೀವೇಂಕಟೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನೆರವೇರಿತು.