ದೊಡ್ಡಬಳ್ಳಾಪುರ: ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಕಲಾ ಪ್ರಜ್ಞೆ ರೂಢಿಸಿಕೊಂಡಿರುವ ದೊಡ್ಡಬಳ್ಳಾಪುರ ಸಂಸ್ಕೃತಿಗೆ ಸ್ಪಷ್ಟ ಉದಾಹರಣೆ ನವರಾತ್ರಿ ಸಂದರ್ಭದಲ್ಲಿ ಇಲ್ಲಿ ನಿರ್ಮಾಣವಗುವ ಗೊಂಬೆ ಮನೆಗಳು. ಸಾಂಪ್ರದಾಯಿಕ ಆಚರಣೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಹಾದಿಯಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ
ದೊಡ್ಡಬಳ್ಳಾಪುರ: ತನ್ನದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಕಲಾ ಪ್ರಜ್ಞೆ ರೂಢಿಸಿಕೊಂಡಿರುವ ದೊಡ್ಡಬಳ್ಳಾಪುರ ಸಂಸ್ಕೃತಿಗೆ ಸ್ಪಷ್ಟ ಉದಾಹರಣೆ ನವರಾತ್ರಿ ಸಂದರ್ಭದಲ್ಲಿ ಇಲ್ಲಿ ನಿರ್ಮಾಣವಗುವ ಗೊಂಬೆ ಮನೆಗಳು. ಸಾಂಪ್ರದಾಯಿಕ ಆಚರಣೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಸ್ಪರ್ಶದೊಂದಿಗೆ ಮತ್ತಷ್ಟು ಕಳೆಗಟ್ಟುತ್ತಾ ಪ್ರತಿವರ್ಷ ಹೊಸತನದ ಹಾದಿಯಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ.
ನಡಹಬ್ಬ ದಸರಾ ಮನೆಮನೆಯ ಹಬ್ಬವಾಗಿ ಆಚರಿಸಲ್ಪಡುತ್ತದೆ. ಇದನ್ನು ತಾತ-ಮುತ್ತಾತಂದಿರ ಕಾಲದಿಂದ ಉಳಿಸಿಕೊಂಡು ಬಂದ ಮನೆಗಳೂ ಇಲ್ಲುಂಟು. ಹಿಂದಿನ ಕಾಲದಿಂದಿಲೂ ಸಂಗ್ರಹಿಸಿ, ಸಂರಕ್ಷಿಸಿಕೊಂಡು ಬಂದ ಚೆಂದದ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದೇ ದೊಡ್ಡ ವೈಭವ. ಅದರಲ್ಲೂ ಮರದ ಪಟ್ಟದ ಗೊಂಬೆಗಳಿಗೆ ರಾಜ-ರಾಣಿಯರ ಧಿರಿಸು ಹಾಕಿ ಪಟ್ಟಕ್ಕೆ ಕೂರಿಸುವ ಮೂಲಕ 9 ದಿನಗಳ ವೈಭವ ಆರಂಭವಾಗುತ್ತದೆ. ಕೆಲ ಮನೆಗಳಲ್ಲಿ ಕಳಶವನ್ನಿಟ್ಟು ಪೂಜಿಸುವ ಸಂಪ್ರದಾಯವೂ ಇದೆ. ಇದರೊಂದಿಗೆ ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ಅನೇಕ ಪುರಾಣಗಳ ಹಲವು ಸನ್ನಿವೇಶಗಳಿಗೂ ಇಲ್ಲಿ ಜೀವಂತಿಕೆ ಬರುವುದುಂಟು. ದೇವಾನು ದೇವತೆಗಳು, ಕಾಡು, ಉದ್ಯಾನ, ನದಿ, ಸರೋವರ, ಅರಮನೆ, ಕೈಲಾಸ, ವೈಕುಂಠ, ದೆವಲೋಕ, ಕ್ರಿಕೆಟ್ ಸ್ಟೇಡಿಯಂ, ಸರ್ಕಸ್ ಮತ್ತಿತರ ಮಾದರಿಗಳ ನಿರ್ಮಾಣ ಇಲ್ಲಿ ನೋಡಸಿಗುತ್ತದೆ.ಈ ಬಾರಿ ದೊಡ್ಡಬಳ್ಳಾಪುರದ ವಿವಿಧ ಮನೆಗಳಲ್ಲಿ ಗೊಂಬೆ ಮನೆಗಳ ಚಿತ್ತಾರ ಮೂಡಿದೆ. ಇಲ್ಲಿನ ನೇಯ್ಗೆಬೀದಿ, ಬ್ರಾಹ್ಮಣರಬೀದಿ, ಸೋಮೇಶ್ವರ ಬಡಾವಣೆ, ಶಾಂತಿನಗರ, ಮಾರುತಿ ನಗರ, ನಗರ್ತರಪೇಟೆ, ಟ್ಯಾಂಕ್‌ರಸ್ತೆ, ಕೊಂಗಾಡಿಯಪ್ಪ ಮುಖ್ಯರಸ್ತೆ ಸೇರಿದಂತೆ ಹಲವು ಬಡಾವಣೆಗಳ ಹತ್ತಾರು ಮನೆಗಳಲ್ಲಿ ಗೊಂಬೆ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಸಂಪ್ರದಾಯಕ್ಕೆ ಆಧುನಿಕ ಸ್ಪರ್ಶ:ಸಾಂಪ್ರದಾಯಿಕ ಮಣ್ಣಿನ ಗೊಂಬೆಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗೊಂಬೆಗಳು, ಪ್ಲಾಸ್ಟಿಕ್ ಗೊಂಬೆಗಳ ಆರ್ಭಟ ಹೆಚ್ಚಿದೆ. ಇದರೊಟ್ಟಿಗೆ ಚೀನಾ ದೇಶದಿಂದ ಆಮದಾಗುತ್ತಿರುವ ಗೊಂಬೆಗಳೂ ರಾರಾಜಿಸುತ್ತಿದೆ. ಅದೇನೇ ಇರಲಿ ಇಂದಿನ ಫ್ಯಾಷನ್ ಭರಾಟೆ ಕಾಲದಲ್ಲೂ ಹಿಂದಿನವರು ನಡೆಸಿಕೊಂಡು ಬಂದ ಆಚರಣೆಗಳು ಭಿನ್ನ ಆಲೋಚನೆಗಳ ಜೊತೆಗೂಡಿ ಮುಂದುವರೆಯುತ್ತಿರುವುದು ಗಮನಾರ್ಹ.
10 ದಿನಗಳ ಸಂಭ್ರಮ:ಭಾನುವಾರದಿಂದ ಆರಂಭವಾಗಿರುವ ಗೊಂಬೆ ಹಬ್ಬ ವಿಜಯದಶಮಿವರೆಗೆ ಮುಂದುವರೆಯಲಿದೆ. ದೊಡ್ಡಬಳ್ಳಾಪುರದ ಮನೆಮನೆಗಳಲ್ಲಿ ಇದೀಗ ಪರಂಪರೆಯ ಝಲಕ್ ಆರಂಭವಾಗಿದ್ದು, ಕಲರ್‌ಫುಲ್ ಲೋಕ ಸೃಷ್ಠಿಯಾಗಿದೆ.
ಪ್ರತಿದಿನ ಸಂಜೆ ಗೊಂಬೆಗಳ ಲೋಕದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯುತ್ತದೆ. ಮನೆ ಮನೆಗಳಿಗೆ ಭೇಟಿ ನೀಡಿ ಗೊಂಬೆಗಳ ವೈಭವ ಕಣ್ತುಂಬಿಕೊಳ್ಳುವುದು ಮಕ್ಕಳಾದಿಯಾಗಿ ಎಲ್ಲ ವಯೋಮಿತಿಯ ಜನ ಪರಿಪಾಠವಾಗಿರುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಸಾಂಪ್ರದಾಯಿಕ ಆತಿಥ್ಯವೂ ಇಲ್ಲುಂಟು. ಒಟ್ಟಾರೆ ನಾಡಹಬ್ಬದ ಪರಂಪರೆ ಹಲವು ಪೀಳಿಗೆಗಳನ್ನು ಮೀರಿ ಪ್ರಸ್ತುತತೆಯನ್ನು ಕಾಯ್ದುಕೊಂಡಿರುವುದು ವಿಶೇಷವಾಗಿದೆ.(ಎರಡು ಫೋಟೊ ಬಳಸಿ ಸರ್)
12ಕೆಡಿಬಿಪಿ3-ಶಾಂತಿನಗರದ ಗೌರಿ ರಾಮಕೃಷ್ಣ ಅವರ ಮನೆಯಲ್ಲಿ ಗೊಂಬೆಹಬ್ಬದ ಸಂಭ್ರಮ.
12ಕೆಡಿಬಿಪಿ4-ಸಪ್ತಮಾತೃಕೆ ಮಾರಿಯಮ್ಮ ದೇಗುಲದಲ್ಲಿ ಗೊಂಬೆಗಳೊಂದಿಗೆ ದುರ್ಗಾಮಾತೆ ಪ್ರತಿಷ್ಠಾಪನೆ.