ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಪಟ್ಟಣದಲ್ಲಿ ನಾಡಹಬ್ಬ ದಸರಾ ಹಾಗೂ ವಿಜಯ ದಶಮಿಯ ಮೆರವಣಿಗೆಯನ್ನು ಅತ್ಯಂತ ಅದ್ಧೂರಿಯಿಂದ ಆಚರಿಸಲು ದಸರಾ ಸಮಿತಿ ಸಭೆ ನಡೆಸಿತು.ಗುರುವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಆರ್ ರಾಘವೇಂದ್ರ ಮಾತನಾಡಿ, ವಿಜಯ ದಶಮಿಯಂದು ಪ್ರತಿವರ್ಷ ನಡೆಸುವಂತೆ ಈ ಬಾರಿ ಮೆರವಣಿಗೆಯಲ್ಲಿ ವಿಶೇಷ ಮೆರಗನ್ನು ತರಲು ಹಲವಾರು ಜನಪದ ತಂಡಗಳನ್ನು ಆಹ್ವಾನಿಸಲಾಗಿದೆ. ಮಹಿಳಾ ವೀರಗಾಸೆ, ರೋಡ್ ಆಕೆರ್ಸ್ಟ್ರಾ, ಲಂಬಾಣಿ ಕುಣಿತ, ಗೊಂಬೆ ಕುಣಿತ, ನಂದಿಕೋಲು, ಡೊಳ್ಳು ಕುಣಿತ ಸೇರಿದಂತೆ ಇನ್ನೂ ಹಲವಾರು ಜನಪದ ತಂಡಗಳು ಭಾಗವಹಿಸಲಿವೆ ಎಂದರು.
ಈ ಬಾರಿ ದುರ್ಗಾದೇವಿಯ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗವುದು. ನಮಗೆ ಹಣದ ಸಮಸ್ಯೆ ಉಂಟಾಗಬಹುದು ಎಂಬ ಅತಂಕವಿತ್ತು. ಆದರೆ ನಮ್ಮ ಪುರಸಭೆ ಸಹಕಾರ ಕೊಡುತ್ತಿರುವುದರಿಂದ ಹಾಗೆಯೇ ಪ್ರತಿವರ್ಷ ವಿಜಯ ದಶಮಿ ಉತ್ಸವಕ್ಕೆ ಸಹಕಾರ ನೀಡುವುತ್ತಿರುವವುದರಿಂದ ಹಬ್ಬದ ಆಚರಣೆ ಜೋರಾಗಿಯೇ ನಡೆಯಲಿದೆ ಎಂದರು.ಮಾಜಿ ಪುರಸಭೆ ಸದಸ್ಯ ಹಾಗೂ ಮಾಗರ್ದಶರ್ಕ ಐ.ಎಂ.ಶಿವಾನಂದಯ್ಯ ಮಾತನಾಡಿ, ನಾವು ಶಿರಾಳಕೊಪ್ಪ ಪಟ್ಟಣದಲ್ಲಿ 1986ರಲ್ಲಿ ಸಾಮೂಹಿಕವಾಗಿ ಉತ್ಸವ ಮಾಡುವುದು ಹಾಗೂ ಬನ್ನಿ ಮುಡಿಯುವ ಹಬ್ಬವನ್ನು ಆಚರಣೆಗೆ ತರಲಾಯಿತು. ಅಂದಿನಿಂದ ಪ್ರತಿವರ್ಷ ಉತ್ಸವಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿರುವ ಪದ್ದತಿ ಮುಂದುವರೆದಿದೆ. ಸಮಿತಿ ಅಧ್ಯಕ್ಷರು ಸೊರಬ ರಸ್ತೆಯಲ್ಲಿ ಇರುವ ಬನ್ನಿ ಮಂಟಪದಲ್ಲಿ ಅವರಿಂದ ಬನ್ನನಿ ಮುಡಿದ ಮೇಲೆ ಸಾಮೂಹಿಕವಾಗಿ ಬನ್ನಿ ಮುಡಿಯಲಾಗುತ್ತಿದೆ ಎಂದರು.
ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್ ರಟ್ಟಿಹಳ್ಳಿ ಮಾತನಾಡಿ, ಪಟ್ಟಣದಲ್ಲಿ ಯಾವುದೇ ಜಾತಿ ಮತಪಂತ ವಿಲ್ಲದೇ ಆಚರಣೆ ಮಾಡಬೇಕು ಎಂದು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುತ್ತತಿದ್ದೇವೆ.ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚನೆ ಮಾಡಲಾಗಿದ್ದು, ಕಾರ್ಯದರ್ಶಿ ಸಂತೋಷ, ಖಜಾಂಚಿಯಾಗಿ ವಿಷ್ಣುರಾಯ್ಕರ್ ಸೇರಿ ಹಲವಾರು ಜನರ ಸಮಿತಿ ನಿರಂತರವಾಗಿ ಉತ್ಸವ ಯಶಸ್ಸಿಗೆ ಶ್ರಮಿಸುತ್ತಿದೆ ಎಂದು ಕಾಯದರ್ಶಿ ಸಂತೋಷ ತಿಳಿಸಿದರು.