ಗ್ರಾಮದಲ್ಲಿರುವ ಸರ್ವಧರ್ಮಗಳಿಗೂ ಸೇರಿದ ಎಲ್ಲ ಕೋಮಿನ ಜನಾಂಗದವರು ಈ ಹಬ್ಬವನ್ನು ಆಚರಿಸಲಿದ್ದು,
ಕನ್ನಡಪ್ರಭ ವಾರ್ತೆ ಮೂಗೂರು
ಇತಿಹಾಸ ಪ್ರಸಿದ್ಧ ಮೂಗೂರು ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರೆ ಮಹೋತ್ಸವ ಜ. 3 ರಿಂದ 7ರವರೆಗೆ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯಕ್ಕೆ ಸುಣ್ಣ, ಬಣ್ಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ.
ಜ. 3ರಂದು ಬಂಡೀ ಉತ್ಸವ, 4ರಂದು ತೆಪೋತ್ಸವ, 5ರಂದುಮಹಾರಥೋತ್ಸವ, ಜ. 6ರಂದು ಹೊಸಹಳ್ಳಿಯಲ್ಲಿ ಚಿಗುರು ಕಡಿಯುವುದು,
ಜ. 7 ರಂದು ವೈ ಮಾಳಿಗೆ ಉತ್ಸವ ನಡೆಯಲಿದೆ.ಮೂಕಸುರ ಊರು ಮೂಗೂರು
ಗ್ರಾಮದಲ್ಲಿರುವ ಸರ್ವಧರ್ಮಗಳಿಗೂ ಸೇರಿದ ಎಲ್ಲ ಕೋಮಿನ ಜನಾಂಗದವರು ಈ ಹಬ್ಬವನ್ನು ಆಚರಿಸಲಿದ್ದು, ಮೂಗೂರು ಎಂದು ಹೆಸರು ಬರಲು ಕಾರಣ ಶ್ರೀ ತ್ರಿಪುರ ಸುಂದರಿ ಮೂಕಸುರರನ್ನು ವಧಿಸಿದ ಸ್ಥಳವಾದರಿಂದ ಈ ಊರಿಗೆ ಮೂಕಸುರ ಊರು ಮೂಗೂರು ಎಂದು ಹೆಸರು ಬಂದಿದೆ.ಊರಿನ ಮಧ್ಯಭಾಗದಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯವು ಪ್ರಜ್ವಲಿಸುತ್ತದೆ. ಮೂರು ಕಿ.ಮೀ. ದೂರದಲ್ಲಿರುವ ಮೂಗೂರಿನ ಸಮೀಪವಿರುವ ಸಣ್ಣ ಗ್ರಾಮವಾದ ಹೊಸಹಳ್ಳಿಯಲ್ಲಿ ಏಳು ಜನ ಸೋದರಿಯರೊಂದಿಗೆ ವಾಸವಾಗಿದ್ದಾರೆಂದು ಪ್ರತೀತಿ ಇದೆ.
ಹೊಸಹಳ್ಳಿ ಶ್ರೀ ತಿಪುರ ಸುಂದರಿಯ ಸೋದರಿಯರುಮೂಗೂರು - ಶ್ರೀ ತಿಬ್ಬಾದೇವಿ, ಸೋಸೆಲೆ - ಹೊನ್ನಾ ದೇವಿ, ಬನ್ನೂರು - ಹೇಮಾಂದ್ರದೇವಿ, ಹಂಚಿತಾಳು - ಮಂಚಾದೇವಿ, ಕಳಲೆ - ಕೈವಲ್ಯ ದೇವಿ,
ಅರಕೊಟಗಲು- ಕೋಟಗಳದೇವಿ, ಬಳಗೋಳ- ಗಿರಿ ದೇವಿ.ಇವರು ಏಳು ಜನರು ಶ್ರೀ ತ್ರಿಪುರ ಸುಂದರಿಯ ಸೋದರಿಯರೆಂದು
ಪುರಾಣಗಳಲ್ಲಿ ಪ್ರಸಿದ್ಧವಾಗಿದೆ.ಜಾತ್ರೆಯ ವಿಶೇಷಗಳು
ವಧೆ ಉತ್ಸವ ಎಂದರೆ ಮುಕಾಸುರಾರನ್ನು ವಧೆ ಶ್ರೀ ತ್ರಿಪುರ ಸುಂದರಿ ಅಮ್ಮನ ವರ ಮುಕಾಸುರಾರನ್ನು ವಧಿ (ಸಂಹಾರ) ಸುತ್ತಾಳೆ.ಮಂಟಪೋತ್ಸವಗಳು ದಿನನಿತ್ಯ ಜಾತ್ರೆ ನಿಮಿತ್ತ ನೆರವೇರುತ್ತದೆ, ಕೇಶವಾಹನ, ಚಂದ್ರವಾಹನ, ಚಂದ್ರಮಂಡಲ, ಪಕ್ಷಿ ವಾಹನ.
ಜ. 3ರಂದು ಬಂಡೀ ಉತ್ಸವ ನಡೆಯಲ್ಲಿದ್ದು, ಈ ಬಂಡಿ ಉತ್ಸವವು ಮೂಕಾಸುರನ ವಧೆಯಾದ ಮೇಲೆ ನಾಲ್ಕನೇ ದಿನ ನೆರವೇರುತ್ತದೆ, ಇದನ್ನು ಓಡಿಸುವ ಕಾರಣ ಮೂಕಸೂರನನ್ನು ಸ್ಮಶಾನ ಕಟ್ಟೆಯ ಅಂದರೆ ಬಂಡೀಯ ಚಾವಡಿ ಎಂದು ಕರೆಯುತ್ತಾರೆ.ಜ. 4ರಂದು ತೆಪ್ಪೋತ್ಸವ ನೆರವೇರಲಿದ್ದು, ಮುಕಾಸುರನ ಸಂಹಾರದಿಂದ ಸಂತೋಷದಿಂಧ ಭರಿತವಾದ ಶ್ರೀ ತ್ರಿಪುರ ಸುಂದರಿಯು ಮತ್ತು ಸೋದರಿಯರು ಜಲ ಕ್ರೀಡೆ ಅಥವಾ ತೆಪ್ಪೋತ್ಸವ ಮಾಡುತ್ತಾರೆ.
ಜ. 5ರಂದು ಮಹಾ ರಥೋತ್ಸವವ ವೈಭಯುತವಾಗಿ ನೆರವೇರಲಿದೆ.ಒಂದು ಬಾರಿ ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಯಲಿದ್ದು, ಭಕ್ತಾದಿಗಳು ಹಣ್ಣು- ಧವನ ಎಸೆಯುತ್ತಾರೆ, ನೂತನ ದಂಪತಿಗಳು ಸಹ ಭಾಗವಹಿಸಿ ಬಾ ಳೆಹಣ್ಣು- ದವನ ಎಸೆಯುವರು.
ಜ. 6ರಂದು ಮೂಗೂರಿನಿಂದ 3 ಕಿ.ಮೀ. ದೂರದಲ್ಲಿರುವ ಶ್ರೀ ತ್ರಿಪುರ ಸುಂದರಿಯ ಅಮ್ಮನವರ ಮೂಲ ಸ್ಥಳವಾದ ಹೊಸಹಳ್ಳಿ ಗ್ರಾಮದಲ್ಲಿ ಒಂದು ಕೆರೆಯ ಪಕ್ಕದಲ್ಲಿ ಪುರಾತನ ನೇರಳೆ ಮರವಿದೆ, ಅಲ್ಲಿ ಪೂಜಾ ವಿಧಾನಗಳು ನೆರವೇರುತ್ತದೆ, ಚಿಗುರು ಕಡಿಯುವುದು ಎಂದರೆ ಚಿಗುರು ಒಡೆಯುವುದು ಎಂದರ್ಥ.ಜ 7ರಂದು ಬೆಳಗ್ಗೆ ಅಳು ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕಿಯಲ್ಲಿ ಅಂದರೆ ಗೊಂಬೆಗಳನ್ನು ಗಾಲಿಯ ಮೇಲೆ ಅಲಂಕಾರ ಮಾಡಿ, ಊರಿನ ಮುಖ್ಯ ಬೀದಿಯಲ್ಲಿ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಉತ್ಸವ ಮೂರ್ತಿಯುನ್ನ ಮೆರವಣಿಗೆ ಮಾಡುತ್ತಾರೆ. ಅನಂತರ ಅಮ್ಮನವರ ಉತ್ಸವ ಮೂರ್ತಿಯುನ್ನು ದೇವಸ್ಥಾನದ ಸ್ವಸ್ಥಾನಕ್ಕೆ ಕೂರಿಸುತ್ತಾರೆ. ಕಡೆಯ ಪ್ರದರ್ಶನ ಬಂದಾಗ ಭಕ್ತಾದಿಗಳು ಈಡುಗಾಯನ್ನು ಹೊಡೆಯಲು ಕಾತುರರಾಗಿರುತ್ತಾರೆ.