ಕಾವೇರಿ ನದಿಯ ಎಡದಂಡೆಯ ಮೇಲೆ ಕೇಂದ್ರಿಕೃತವಾಗಿರುವ ಕೇರಳಾಪುರ ಗ್ರಾಮದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಚಿಕ್ಕರಥೋತ್ಸವವನ್ನು ಭಕ್ತಾದಿಗಳು ಹಮ್ಮಿಕೊಳ್ಳುತ್ತಾರೆ. ಜನವರಿ ತಿಂಗಳ ಚಿಕ್ಕರಥೋತ್ಸವವನ್ನು ಕೇರಳಾಪುರದ ಸೋಮಶೇಖರ ಕುಂಟುಬವರ್ಗ ಮತ್ತು ಹೇಮಲತಾ ಸತೀಶ್ ಅವರು ಹಮ್ಮಿಕೊಂಡಿದ್ದರು ಶುಕ್ರವಾರ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ರುದ್ರಾಭಿಷೇಕ, ಕಳಶಸ್ಥಾಪನೆ, ಶ್ರೀ ವೀರಭದ್ರೇಶ್ವರ ಭದ್ರಕಾಳೇಶ್ವರಿಗೆ ಅರ್ಚನೆ, ಸೋಮೇಶ್ವರ ಸ್ವಾಮಿಗೆ ಪೂಜಾದಿ ಕೈಂಕರ್ಯ ಜರುಗಿದವು.
ಬಸವಾಪಟ್ಟಣ: ಇಲ್ಲಿಗೆ ಸಮೀಪದ ಕೇರಳಾಪುರ ಶ್ರೀ ವಿರಭದ್ರಶ್ವೆರ ಸ್ವಾಮಿಯವರ ಹುಣ್ಣಿಮೆ ಚಿಕ್ಕರಥೋತ್ಸವವು ಅದ್ಧೂರಿಯಾಗಿ ಸಂಪನ್ನಗೊಂಡಿತು.
ಕಾವೇರಿ ನದಿಯ ಎಡದಂಡೆಯ ಮೇಲೆ ಕೇಂದ್ರಿಕೃತವಾಗಿರುವ ಕೇರಳಾಪುರ ಗ್ರಾಮದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಚಿಕ್ಕರಥೋತ್ಸವವನ್ನು ಭಕ್ತಾದಿಗಳು ಹಮ್ಮಿಕೊಳ್ಳುತ್ತಾರೆ. ಜನವರಿ ತಿಂಗಳ ಚಿಕ್ಕರಥೋತ್ಸವವನ್ನು ಕೇರಳಾಪುರದ ಸೋಮಶೇಖರ ಕುಂಟುಬವರ್ಗ ಮತ್ತು ಹೇಮಲತಾ ಸತೀಶ್ ಅವರು ಹಮ್ಮಿಕೊಂಡಿದ್ದರು ಶುಕ್ರವಾರ ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ರುದ್ರಾಭಿಷೇಕ, ಕಳಶಸ್ಥಾಪನೆ, ಶ್ರೀ ವೀರಭದ್ರೇಶ್ವರ ಭದ್ರಕಾಳೇಶ್ವರಿಗೆ ಅರ್ಚನೆ, ಸೋಮೇಶ್ವರ ಸ್ವಾಮಿಗೆ ಪೂಜಾದಿ ಕೈಂಕರ್ಯ ಜರುಗಿದವು. ಮಹಾಮಂಗಳರಾತಿ ಜೊತೆಗೆ ಚಿಕ್ಕರಥೋತ್ಸಕ್ಕೆ ಹೂವಿನ ಅಲಂಕಾರ ಅಲ್ಲದೆ ಉದ್ದೂರು ರವಿ ಮತ್ತು ತಂಡದವರಿಂದ ವೀರಭದ್ರಶ್ವೇರ ಕುಣಿತ ( ವೀರಗಾಸೆ) ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮದ ಉಮಾಶಂಕರ ಮಹದೇವ, ರವಿಕುಮಾರ್, ಶಾಂತವೀರಪ್ಪ ಹಾಜರಿದ್ದರು.