ಸಾರಾಂಶ
ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ವಿವಿಧ ಕಡೆಗಳಿಂದ ಬಂದ ಸಾವಿರಾರು ಸಂಖ್ಯೆಯ ಭಕ್ತರುಪಾಲ್ಗೊಂಡು ರಥೋತ್ಸವದಲ್ಲಿ ತಮ್ಮ ಸೇವೆ ಸಲ್ಲಿಸಿ ಹರಕೆ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸುವುದು ಸಂಪ್ರದಾಯ. ಬುಧವಾರ ಮುಂಜಾನೆ ಶ್ರೀಗಳ ದೇವಾಲಯದಲ್ಲಿ ಸುಮಂಗಲಿಯರಿಂದ ಬಾಯಿಬೀಗ ಧಾರಣೆಯ ಹರಕೆಯೊಂದಿಗೆ ಚಂದ್ರಮಂಡಲೋತ್ಸವ ಮತ್ತು ಅಗ್ನಿಕುಂಡ ಸೇವೆ ಧಾರ್ಮಿಕ ಕಾರ್ಯಗಳು ನೆರವೇರಿದ ನಂತರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮತ್ತು ಶ್ರೀ ಪಾರ್ವತಮ್ಮಉತ್ಸವಮೂರ್ತಿಗೆ ಮಹಾಮಂಗಳಾರತಿ ನಡೆಯಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಸಮೀಪದ ಅಂಚೆ ಕೊಪ್ಪಲ್‌ನಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿಯ, ಮರಳು ಸಿದ್ಧೇಶ್ವರ ಮತ್ತು ಶ್ರೀ ಪಾರ್ವತಮ್ಮ ದೇವಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ಜಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ವಿವಿಧ ಕಡೆಗಳಿಂದ ಬಂದ ಸಾವಿರಾರು ಸಂಖ್ಯೆಯ ಭಕ್ತರುಪಾಲ್ಗೊಂಡು ರಥೋತ್ಸವದಲ್ಲಿ ತಮ್ಮ ಸೇವೆ ಸಲ್ಲಿಸಿ ಹರಕೆ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸುವುದು ಸಂಪ್ರದಾಯ. ಬುಧವಾರ ಮುಂಜಾನೆ ಶ್ರೀಗಳ ದೇವಾಲಯದಲ್ಲಿ ಸುಮಂಗಲಿಯರಿಂದ ಬಾಯಿಬೀಗ ಧಾರಣೆಯ ಹರಕೆಯೊಂದಿಗೆ ಚಂದ್ರಮಂಡಲೋತ್ಸವ ಮತ್ತು ಅಗ್ನಿಕುಂಡ ಸೇವೆ ಧಾರ್ಮಿಕ ಕಾರ್ಯಗಳು ನೆರವೇರಿದ ನಂತರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮತ್ತು ಶ್ರೀ ಪಾರ್ವತಮ್ಮಉತ್ಸವಮೂರ್ತಿಗೆ ಮಹಾಮಂಗಳಾರತಿ, ನಡೆಮುಡಿ ಸೇವೆ ಮತ್ತು ತೇರು ಮಂಟಪದ ಸೇವಾ ಕಾರ್ಯಕ್ರಮಗಳು ಸಂಪ್ರದಾಯದಂತೆ ಪೂರೈಸಿದ ಮೇಲೆ ಶ್ರೀ ಸ್ವಾಮಿಯವರನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಕುಳ್ಳಿರಿಸಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ನಂತರ ರಥೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.