ಸುತ್ತೂರು ಜಾತ್ರಾ ರಥಕ್ಕೆ ಕುಣಿಗಲ್‌ನಲ್ಲಿ ಅದ್ಧೂರಿ ಸ್ವಾಗತ

| Published : Jan 06 2024, 02:00 AM IST

ಸುತ್ತೂರು ಜಾತ್ರಾ ರಥಕ್ಕೆ ಕುಣಿಗಲ್‌ನಲ್ಲಿ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.6 ರಿಂದ 11 ರವರೆಗೆ ಸುತ್ತೂರು ಮಠದಲ್ಲಿ ನಡೆಯುವ ಜಾತ್ರೆ ಹಿನ್ನೆಲೆ ಕುಣಿಗಲ್ ಪಟ್ಟಣಕ್ಕೆ ಬಂದ ಜಾತ್ರಾ ರಥವನ್ನು ಕುಣಿಗಲ್ ವೀರಶೈವ ಸಮಾಜದ ವತಿಯಿಂದ ಅದ್ಧೂರಿ ಸ್ವಾಗತ ಮಾಡಿ ಬಿಳ್ಕೊಡುಗೆ ಮಾಡಲಾಯಿತು,

ಕನ್ನಡಪ್ರಭ ವಾರ್ತೆ ಕುಣಿಗಲ್

ಫೆ.6 ರಿಂದ 11 ರವರೆಗೆ ಸುತ್ತೂರು ಮಠದಲ್ಲಿ ನಡೆಯುವ ಜಾತ್ರೆ ಹಿನ್ನೆಲೆ ಕುಣಿಗಲ್ ಪಟ್ಟಣಕ್ಕೆ ಬಂದ ಜಾತ್ರಾ ರಥವನ್ನು ಕುಣಿಗಲ್ ವೀರಶೈವ ಸಮಾಜದ ವತಿಯಿಂದ ಅದ್ಧೂರಿ ಸ್ವಾಗತ ಮಾಡಿ ಬಿಳ್ಕೊಡುಗೆ ಮಾಡಲಾಯಿತು,

ತಾಲೂಕು ಅಧ್ಯಕ್ಷ ಎನ್.ಎಸ್. ವಸಂತ್ ಕುಮಾರ್ ನೇತೃತ್ವದಲ್ಲಿ ಸಂಘಟನೆಗೊಂಡ ಸಮಾಜದ ಬಾಂಧವರು ಪಟ್ಟಣದ ಹುಚ್ಚ ಮಾಸ್ತಿ ಗೌಡ ವೃತದಲ್ಲಿ ಜಾತ್ರಾ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಸುತ್ತೂರು ಸಂಸ್ಥಾನ ಸ್ವಾತಂತ್ರ್ಯ ಪೂರ್ವದಿಂದ ಅಕ್ಷರ ಅನ್ನ ಜ್ಞಾನದ ದಾಸೋಹ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು ಹಲವಾರು ದೇಶಗಳಲ್ಲಿ ತನ್ನದೇ ಆದ ಸಂಸ್ಥೆಗಳನ್ನು ಪ್ರಾರಂಭಿಸಿ ಇಂದಿಗೂ ಕೂಡ ಶಿಕ್ಷಣ ನೀಡುತ್ತಾ ರಾಜ್ಯದ ಉತ್ತಮ ಶಿಕ್ಷಣ ಸಂಸ್ಥೆ ಎಂಬುದನ್ನು ಕಾಣಬಹುದಾಗಿದೆ.

ಸುತ್ತೂರು ಜಾತ್ರೆ ರೈತರಿಗೆ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಕೂಡ ಬೇಕಾದ ಎಲ್ಲಾ ಮಾಹಿತಿ ವಿವರ ಮತ್ತು ವಿವಿಧ ನೋಟ ಮಾರಾಟ ಸೇರಿದಂತೆ ಪ್ರತಿಯೊಂದು ಆಯಾಮದಲ್ಲಿ ಮಾಹಿತಿ ಹಾಗೂ ಸೇವಾ ತಂತ್ರಜ್ಞಾನವನ್ನು ಒದಗಿಸುವ ಒಂದು ಉತ್ತಮ ಜಾತ್ರೆಯಾಗಿದೆ ಎಂದರು.

ಪ್ರತಿ ವರ್ಷ ಕುಣಿಗಲ್‌ನಿಂದ ಜಾತ್ರೆಗೆ ಹಲವಾರು ಜನಗಳು ಹೋಗುತ್ತಿದ್ದು, ಈ ಬಾರಿಯೂ ಕೂಡ ಸಮಾಜದ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತಿವುಳ್ಳವರು ಮೊದಲು ನೋಂದಾಯಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸುತ್ತೂರು ಪ್ರಚಾರ ಸಮಿತಿಯ ಪಂಚಾಕ್ಷರಿ ಗೌರವಾಧ್ಯಕ್ಷ ದೊಡ್ಡ ಮಾವತ್ತೂರು ಬಸವರಾಜಪ್ಪ, ಕಾರ್ಯದರ್ಶಿ ಪರಮಶಿವಯ್ಯ, ನಿರ್ದೇಶಕ ಕೆಇಬಿ ಶಿವಣ್ಣ, ಕಗ್ಗೆರೆ ಪ್ರಸಾದ್, ವಿಶ್ವನಾಥ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಆರ್‌. ಚಂದ್ರಶೇಖರಯ್ಯ, ಕೆಎಸ್ಆರ್‌ಟಿಸಿ ನೌಕರ ಮುಖಂಡ ಬಸವರಾಜ್, ಮುಜರಾಯಿ ನೌಕರರ ಸಂಘದ ಅಧ್ಯಕ್ಷ ರಾಜಣ್ಣ , ಸ್ಟುಡಿಯೋ ಗಂಗಾಧರ್, ಅರ್ಚಕ ಗಂಗಾಧರ್ ಸೇರಿದಂತೆ ಹಲವರು ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಸೇರಿದಂತೆ ಸಾರ್ವಜನಿಕರು ಇದ್ದರು.