ಸಾರಾಂಶ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಭಾರತ ಮಾತೆಯ ಸೇವೆಯಲ್ಲಿ ಕಳೆದ 22 ವರ್ಷಗಳಿಂದ ತೊಡಗಿಕೊಂಡಿದ್ದ ವೀರಯೋಧ ಸುರೇಶ ಹೂಲಿಕಟ್ಟಿ ಸೇವೆಯಿಂದ ನಿವೃತ್ತರಾಗಿ ತವರಿಗೆ ಆಗಮಿಸಿದ್ದ ವೇಳೆ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ದೇಶಾಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡರು.ನಿವೃತ್ತ ಯೋಧ ಸುರೇಶ ಹೂಲಿಕಟ್ಟಿ ದಂಪತಿಗಳನ್ನು ತೆರೆದ ಜೀಪಿನಲ್ಲಿ ಪಟ್ಟಣದ ತುಂಬೆಲ್ಲ ಮೆರವಣಿಗೆ ಮಾಡುತ್ತ ಸಾಗಿದ್ದು ವಿಶೇಷವಾಗಿ ಕಂಡು ಬಂದಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಭಾರತ ಮಾತೆಯ ಸೇವೆಯಲ್ಲಿ ಕಳೆದ 22 ವರ್ಷಗಳಿಂದ ತೊಡಗಿಕೊಂಡಿದ್ದ ವೀರಯೋಧ ಸುರೇಶ ಹೂಲಿಕಟ್ಟಿ ಸೇವೆಯಿಂದ ನಿವೃತ್ತರಾಗಿ ತವರಿಗೆ ಆಗಮಿಸಿದ್ದ ವೇಳೆ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ದೇಶಾಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡರು. ನಿವೃತ್ತ ಯೋಧ ಸುರೇಶ ಹೂಲಿಕಟ್ಟಿ ದಂಪತಿಗಳನ್ನು ತೆರೆದ ಜೀಪಿನಲ್ಲಿ ಪಟ್ಟಣದ ತುಂಬೆಲ್ಲ ಮೆರವಣಿಗೆ ಮಾಡುತ್ತ ಸಾಗಿದ್ದು ವಿಶೇಷವಾಗಿ ಕಂಡು ಬಂದಿತು. ಲಕ್ಷ್ಮೇಶ್ವರ ತಾಲೂಕು ನಿವೃತ್ತ ಸೈನಿಕರ ಸಂಘದ ಸದಸ್ಯರು ಪಟ್ಟಣದ ಶಿಗ್ಲಿ ಕ್ರಾಸ್, ಸೋಮೇಶ್ವರ ಪಾದಗಟ್ಟಿ, ಹಾವಳಿ ಹನಮಪ್ಪನ ದೇವಸ್ಥಾನ, ವಿದ್ಯಾರಣ್ಯ ವೃತ್ತ, ಮಹಾಕವಿ ಪಂಪ ವೃತ್ತದ ಮೂಲಕ ಮೂಕ ಬಸವೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.ಮೆರವಣಿಗೆಯಲ್ಲಿ ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗುತ್ತ ದೇಶಾಭಿಮಾನಿಗಳು ಸಾಗಿದ್ದು ಕಂಡು ಬಂದಿತು. ಸುರೇಶ ನಾನಾ ಕಡೆಗಳಲ್ಲಿ ದೇಶ ಸೇವೆ ಸಲ್ಲಿಸಿ ತವರಿಗೆ ಮರಳಿದ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಭೀಮಣ್ಣ ಯಂಗಾಡಿ, ಮಂಜುನಾಥ ಚಾಕಲಬ್ಬಿ, ಎಸ್.ಎಫ್. ಆದಿ, ಎನ್.ಎನ್. ನೆಗಳೂರ, ಚರಂತಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.