ತವರೂರಿಗೆ ಮರಳಿದ ವೀರಯೋಧನಿಗೆ ಅದ್ಧೂರಿ ಸ್ವಾಗತ

| Published : Apr 08 2024, 01:01 AM IST

ಸಾರಾಂಶ

ಮೂಲತಃ ರಾಮನಗರ ತಾಲೂಕು ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದವರಾದ ಶಿವಸ್ವಾಮಿ, ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ತವರೂರಿಗೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಭಾರತೀಯ ಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿ ತವರೂರಿಗೆ ಮರಳಿದ ನಿವೃತ್ತ ಯೋಧ ಶಿವಸ್ವಾಮಿ ಅವರನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಮೂಲತಃ ರಾಮನಗರ ತಾಲೂಕು ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದವರಾದ ಶಿವಸ್ವಾಮಿ, ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ತವರೂರಿಗೆ ಆಗಮಿಸಿದರು.

ಸಮಾನ ಮನಸ್ಕ ವೇದಿಕೆ ಮುಖಂಡರು, ಗ್ರಾಮಸ್ಥರು ರಾಮನಗರದ ರೈಲ್ವೆ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡು ತೆರೆದ ವಾಹನದಲ್ಲಿ ರಾಮನಗರದ ರೈಲ್ವೆ ನಿಲ್ದಾಣ ವೃತ್ತದಿಂದ ಸುಮಾರು 150ಕ್ಕೂ ಹೆಚ್ಚಿನ ಬೈಕ್‌ಗಳಲ್ಲಿ ನೂರಾರು ಜನರು ‘ಭಾರತ್ ಮಾತಾಕೀ ಜೈ’ ಘೋಷಣೆಯೊಂದಿಗೆ ದಾರಿಯುದ್ದಕ್ಕೂ ಪುಷ್ಪಾರ್ಚನೆಯೊಂದಿಗೆ ಎಂ.ಜಿ. ರಸ್ತೆ, ಮುಖ್ಯರಸ್ತೆ, ಹಳೆಯ ಬಸ್ ನಿಲ್ದಾಣ, ಐಜೂರು ಸರ್ಕಲ್ ಮೂಲಕ ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ಅಂಜನಾಪುರ ಮುಖಾಂತರ ಮೆರವಣಿಗೆ ನಡೆಸಲಾಯಿತು.

ಆನಂತರ ವಿಭೂತಿಕೆರೆ ಗ್ರಾಮಕ್ಕೆ ಆಗಮಿಸಿದ ಶಿವಸ್ವಾಮಿ ಅವರಿಗೆ ಕುಂಭಮೇಳದೊಂದಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ನಿವೃತ್ತ ಯೋಧ ಶಿವಸ್ವಾಮಿ ಮಾತನಾಡಿ, ಭಾರತೀಯ ಸೇನೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಪಂಜಾಬ್‌ನ ಜಲಂಧರ್‌ನಲ್ಲಿ ಸೇನಾ ತರಬೇತಿ ಮತ್ತು ಪಂಜಾಬ್ ಗಡಿ ಪ್ರದೇಶ ಕೆಲಸ ನಿರ್ವಹಣೆ. ಕಾಶ್ಮೀರ, ಕಲ್ಕತ್ತ, ಛತ್ತೀಸ್ಗಡ ನಕ್ಷಲ್ ಕಾರ್ಯಾಚರಣೆ ಹಾಗೂ ಗುಜರಾತ್‌ನಲ್ಲಿ ಸೇವೆ ಸಲ್ಲಿಸಿ, ನನ್ನ ಈ ಸೇವೆಯಲ್ಲಿ ತೃಪ್ತಿ ಕಂಡಿದ್ದೇನೆ. ದೇಶ ಸೇವೆ ಮಾಡಲು ನನಗೆ ಉತ್ತಮ ಅವಕಾಶ ಜೀವನದಲ್ಲಿ ಒದಗಿತ್ತು. ಸಂತೋಷದಿಂದ ದೇಶ ಸೇವೆ ಮಾಡಿದ್ದೇನೆ ಎಂದರು.

ಇಂದಿನ ಯುವ ಸಮುದಾಯ ಸೈನ್ಯ ಸೇರಲು ಗಮನಹರಿಸಬೇಕು, ಈಗ ಅತ್ಯಾಧುನಿಕ ಸಲಕರಣೆಗಳು ಆತ್ಮರಕ್ಷಣೆಗೆ ಇವೆ. ದೇಶ ಸೇವೆ ಮಾಡುವುದು ನಮ್ಮ ಪುಣ್ಯದ ಕೆಲಸ, ನನ್ನ ಸೇವೆ ಗುರುತಿಸಿ ನೀವು ತೋರಿರುವ ಪ್ರೀತಿ, ವಿಶ್ವಾಸ, ಔದಾರ್ಯಕ್ಕೆ ಚಿರಋಣಿ ಎಂದು ಹೇಳಿದರು.

ಮೆರವಣಿಗೆ ಸಂದರ್ಭದಲ್ಲಿ ಶಾಸಕ ಇಕ್ಬಾಲ್ ಹುಸೇನ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಕೆ. ರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜ್, ಮಾಜಿ ಜಿಪಂ ಅಧ್ಯಕ್ಷ ಕೆ. ರಮೇಶ್, ಮುಖಂಡ ನರಸಿಂಹಯ್ಯ, ಗೋಪಾಲ್ ಅಭಿಮಾನಿ ಬಳಗದವರು, ವೀರಶೈವ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರಸ್ವಾಮಿ, ಮಹಸಭಾ ಅಧ್ಯಕ್ಷ ಪೋಲೀಸ್ ಶಂಕರಪ್ಪ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಮುಖಂಡರು, ನಿವೃತ್ತ ಯೋಧ ತಂಡದವರು, ಶಿವರಾಂ ಎಲೆಕ್ಟ್ರಿಕಲ್ಸ್, ಪದಂ ಜುವೆಲ್ಲರ್‍ಸ್ ಮತ್ತು ಆಟೋ ಚಾಲಕರ ಸಂಘ, ಹಲವಾರು ಸಂಘ ಸಂಸ್ಥೆಗಳ ಮುಖಂಡರು, ದೇಶಾಭಿಮಾನಿಗಳು, ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ಅಂಜನಾಪುರ, ವಿಭೂತಿಕೆರೆ, ಬನ್ನಿಕುಪ್ಪೆ ಡೈರಿ ಸಂಘದವರು ಮತ್ತು ಗ್ರಾಮಸ್ಥರು ದಾರಿಯುದ್ದಕ್ಕೂ ಅದ್ಧೂರಿ ಸ್ವಾಗತ ಕೋರಿದರು.

ಸಮಾನ ಮನಸ್ಕ ವೇದಿಕೆಯ ಅಂಜನಾಪುರ ವಾಸುನಾಯ್ಕ, ನರಸಿಂಹಯ್ಯ, ಗೋವಿಂದರಾಜು ಮಾಸ್ಟರ್, ಕುಂಭಾಪುರ ಕಾಲೋನಿ ಕೃಷ್ಣಪ್ಪ, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಮಂಡಲ್ ಸದಸ್ಯ ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗಪ್ರಸಾದ್, ಸುಗ್ಗನಹಳ್ಳಿ ಮಹದೇವ್, ರುದ್ರದೇವರು, ಶಿವಾನಂದ್, ಜಯಕುಮಾರ್, ಶಿವಸ್ವಾಮಿ, ಬಿಜೆಪಿ ಮಂಜು, ಉಮೇಶ್, ರೇವಣ್ಣ, ಅರ್ಕೇಶ್, ಮೋಹನ್, ನಂಜುಂಡ, ವಿಜಯಕುಮಾರ್, ರಾ.ಶಿ. ಬಸವರಾಜ್, ಕೆಂಪರಾಜು, ಮುನಿರಾಜು, ಆಡಿಟರ್ ಕುಮಾರ್, ಗೂಳಿಗೌಡ, ಪರಮಶಿವಯ್ಯ, ಬಸವರಾಜ್, ರಾಜು, ಲೋಕೇಶ್, ಚನ್ನಪ್ಪ ಮುಂತಾದವರಿದ್ದರು.