ಕಿತ್ತೂರು ಉತ್ಸವ ವಿಜಯ ಜ್ಯೋತಿಗೆ ಅದ್ದೂರಿ ಸ್ವಾಗತ

| Published : Oct 14 2024, 01:23 AM IST

ಸಾರಾಂಶ

ತ್ತೂರು ಉತ್ಸವದ ಪ್ರಯುಕ್ತ ರಾಜ್ಯಾದಂತ್ಯ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಭಾನುವಾರ ರಾಯಚೂರು ನಗರ ತಲುಪಿತು. ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ವಿಜಯ ಜ್ಯೋತಿಗೆ ರಾಯಚೂರು ತಹಸೀಲ್ದಾರ್ ಸುರೇಶ ವರ್ಮ ಜ್ಯೋತಿಯನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕಿತ್ತೂರು ಉತ್ಸವದ ಪ್ರಯುಕ್ತ ರಾಜ್ಯಾದಂತ್ಯ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಭಾನುವಾರ ರಾಯಚೂರು ನಗರ ತಲುಪಿತು. ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ವಿಜಯ ಜ್ಯೋತಿಗೆ ರಾಯಚೂರು ತಹಸೀಲ್ದಾರ್ ಸುರೇಶ ವರ್ಮ ಜ್ಯೋತಿಯನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಅವರ ತ್ಯಾಗ, ಶೌರ್ಯ ಮತ್ತು ದೇಶ ಭಕ್ತಿಯು ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಬೇಕು. ಬ್ರಿಟೀಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಎಂದು ಕೊಂಡಾಡಿದರು.

ರಾಯಚೂರು ನಗರದ ವಿವಿಧೆಡೆ ಯಾತ್ರೆ ಸಂಚರಿಸಲಿದೆ. ಅ.2ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಯಾತ್ರೆಗೆ ಚಾಲನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅ.23 ರಿಂದ 25ರವರೆಗೆ ಕಿತ್ತೂರು ಉತ್ಸವ ಏರ್ಪಡಿಸಲಾಗಿದೆ ಎಂದರು.ಕಲಾ ತಂಡಗಳೊಂದಿಗೆ ಸಾಗಿದ ವಿಜಯ ಜ್ಯೋತಿ ಯಾತ್ರೆಯು ನಗರದ ಚಂದ್ರಮೌಳೇಶ್ವರ ವೃತ್ತದ ಮಾರ್ಗವಾಗಿ ಯಾದಗಿರಿಗೆ ತಲುಪುತ್ತದೆ. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅ.23 ರಿಂದ 25ರವರೆಗೆ ನಡೆಯಲಿರುವ ಕಿತ್ತೂರು ಉತ್ಸವ, ಕೊಪ್ಪಳ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ತಲುಪಿದ್ದು, ದೇವಸೂಗೂರು ಮಾರ್ಗವಾಗಿ ಯಾದಗಿರಿ ಜಿಲ್ಲೆಗೆ ಬಿಳ್ಕೊಡಲಾಯಿತು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಕ ಅಧಿಕಾರಿ ಚಂದ್ರಶೇಖರ ಪವಾರ್, ನಗರಸಭೆಯ ಪೌರಾಯಕ್ತ ಗುರುಸಿದ್ದಯ್ಯಸ್ವಾಮಿ ಹಿರೇಮಠ ಸೇರಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಜನರು ಇದ್ದರು.