ಸಾರಾಂಶ
ರಥ ಆಗಮಿಸುವ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿತು. ರಥವು ಆಗಮಿಸಿದ ಬಳಿಕ ಗ್ರಾಮದ ರಾಕ್ಷಮ ದೇವಸ್ಥಾನದ ಬಳಿ ದೇವಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ರಥ ಬರುವ ದಾರಿಯುದ್ದಕ್ಕೂ ಪುಷ್ಪಾರ್ಚನೆ ಮಾಡಿ, ಹೆಣ್ಣುಮಕ್ಕಳ ಪೂರ್ಣಕುಂಭ, ಶಾಲಾ ಮಕ್ಕಳ ಬ್ಯಾಂಡೆ ಸೆಟ್, ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ಭಾವುಗಳನ್ನು ಹಿಡಿದು ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಪ್ರಚಾರ ರಥ ತಾಲೂಕಿನ ಸುಂಕಾತೊಣ್ಣೂರು ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ನೀಡಿದರು.ಕಾಳೇನಹಳ್ಳಿ ಗ್ರಾಮದಿಂದ ಸುಂಕಾತೊಣ್ಣೂರು ಗಡಿ ಭಾಗಕ್ಕೆ ರಥವು ಆಗಮಿಸುತ್ತಿದ್ದಂತೆಯೇ ಕನ್ನಡ ಸಾಹಿತ್ಯ ಪರಿಷತಿನ ಮೇಲುಕೋಟೆ ಹೋಬಳಿ ಅಧ್ಯಕ್ಷ ಜೆ.ದೇವೇಗೌಡ ನೇತೃತ್ವದಲ್ಲಿ ಗ್ರಾಪಂ ವತಿಯಿಂದ ರಥಕ್ಕೆ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.
ರಥ ಆಗಮಿಸುವ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿತು. ರಥವು ಆಗಮಿಸಿದ ಬಳಿಕ ಗ್ರಾಮದ ರಾಕ್ಷಮ ದೇವಸ್ಥಾನದ ಬಳಿ ದೇವಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ರಥ ಬರುವ ದಾರಿಯುದ್ದಕ್ಕೂ ಪುಷ್ಪಾರ್ಚನೆ ಮಾಡಿ, ಹೆಣ್ಣುಮಕ್ಕಳ ಪೂರ್ಣಕುಂಭ, ಶಾಲಾ ಮಕ್ಕಳ ಬ್ಯಾಂಡೆ ಸೆಟ್, ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ಭಾವುಗಳನ್ನು ಹಿಡಿದು ಸಾಗುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಗ್ರಾಪಂ ಆವರಣದಲ್ಲಿ ಸಾರ್ವಜನಿಕರಿಗೆ ಸಹಿಹಂಚಿ ಸಂಭ್ರಮಿಸಿದರು.ತಹಸೀಲ್ದಾರ್ ಸಂತೋಷ್ ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ 30 ವರ್ಷಗಳ ಬಳಿಕ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡ ಹಬ್ಬಕ್ಕೆ ಪ್ರತಿ ಮನೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಹೇಮಂತ್ ಕುಮಾರ್, ಸೊಸೈಟಿ ಅಧ್ಯಕ್ಷರು ಎಸ್.ಕೆ.ಸ್ವಾಮೀಗೌಡ, ಡೇರಿ ಅಧ್ಯಕ್ಷ ಸೋಮ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಕಸಾಪ ಹೋಬಳಿ ಅಧ್ಯಕ್ಷ ಜೆ.ದೇವೇಗೌಡ, ಗ್ರಾಮ ಲೆಕ್ಕಾಧಿಕಾರಿ ಸಂಜೀವ್ ರಾಥೋಡ್, ಗ್ರಾಪಂ ಸದಸ್ಯರಾದ ಜಯಶೀಲಮ್ಮ, ಸುರೇಶ್, ಪುಟ್ಟಸ್ವಾಮೀಗೌಡ, ನಳಿನಾಕ್ಷಿ, ಶೀಲಾ, ಭಾಗ್ಯಮ್ಮ, ಉದ್ಯಮಿ ಶಿವಕುಮಾರ್, ಪಿಡಿಒ ಮಹದೇವು ಸೇರಿದಂತೆ ಗ್ರಾಮದ ಯಜಮಾನರು, ಮುಖಂಡರು, ಅಂಗನವಾಡಿ ಹಾಗೂ ಆಶಾ ಕಾರ್‍ಯಕರ್ತೆಯರು, ಶಾಲಾ ಶಿಕ್ಷಕರು, ಯುವಕರು ಸೇರಿದಂತೆ ಸಂಘ-ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.