ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಸಮಿತಿಯಿಂದ 27ನೇ ವರ್ಷದ ರಾಯಣ್ಣನ ಜ್ಯೋತಿಯಾತ್ರೆ ಅದ್ಧೂರಿಯಿಂದ ನಡೆಯಿತು. ಬೆಳಗ್ಗೆ ಬೈಲಹೊಂಗಲ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜ್ಯೋತಿಯಾತ್ರೆ ನಂದಗಡಕ್ಕೆ ತೆರಳಿ, ಅಲ್ಲಿ ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮೂವತ್ತು ವಾಹನಗಳೊಂದಿಗೆ ಸ್ಮರಣೋತ್ಸವ ಸಮಿತಿಯ ನೂರಾರು ಯುವಕರು ರಾಯಣ್ಣನ ಆತ್ಮಜ್ಯೋತಿಯನ್ನು ರಾಷ್ಟ್ರಾಭಿಮಾನದೊಂದಿಗೆ, ಭಕ್ತಿಪೂರ್ವಕವಾಗಿ ತಂದು ವೀರರಾಣಿ ಕಿತ್ತೂರ ಚನ್ನಮ್ಮನವರ ಸಮಾಧಿಗೆ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಸಮಿತಿಯಿಂದ 27ನೇ ವರ್ಷದ ರಾಯಣ್ಣನ ಜ್ಯೋತಿಯಾತ್ರೆ ಅದ್ಧೂರಿಯಿಂದ ನಡೆಯಿತು. ಬೆಳಗ್ಗೆ ಬೈಲಹೊಂಗಲ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜ್ಯೋತಿಯಾತ್ರೆ ನಂದಗಡಕ್ಕೆ ತೆರಳಿ, ಅಲ್ಲಿ ರಾಯಣ್ಣನ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮೂವತ್ತು ವಾಹನಗಳೊಂದಿಗೆ ಸ್ಮರಣೋತ್ಸವ ಸಮಿತಿಯ ನೂರಾರು ಯುವಕರು ರಾಯಣ್ಣನ ಆತ್ಮಜ್ಯೋತಿಯನ್ನು ರಾಷ್ಟ್ರಾಭಿಮಾನದೊಂದಿಗೆ, ಭಕ್ತಿಪೂರ್ವಕವಾಗಿ ತಂದು ವೀರರಾಣಿ ಕಿತ್ತೂರ ಚನ್ನಮ್ಮನವರ ಸಮಾಧಿಗೆ ಅರ್ಪಿಸಿದರು.

ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ರಾಯಣ್ಣನ ಜ್ಯೋತಿಗೆ ಹಿರಿಯರಾದ ಮಲ್ಲಿಕಾರ್ಜುನ ಕೊಡೊಳ್ಳಿ ಸೇರಿದಂತೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು. ಮಹಾಂತೇಶ ಆರಾದ್ರಿಮಠ ಪೂಜೆ ಸಲ್ಲಿಸಿದರು. ನಂದಗಡದಲ್ಲಿ ಜ್ಯೋತಿಯಾತ್ರೆಗೆ ಮಾಜಿ ಶಾಸಕ, ಕೆಎಲ್ಇ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ, ಡಾ.ಸಾಗರ ಕುಲಕರ್ಣಿ ಜಂಟಿಯಾಗಿ ಚಾಲನೆ ನೀಡಿದರು.ರಾಯಣ್ಣ ಸಮಿತಿ ಸಂಸ್ಥಾಪಕ ಸಿ.ಕೆ.ಮೆಕ್ಕೇದ, ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಗೌರವಾಧ್ಯಕ್ಷ ಕುಮಾರ ದೇಶನೂರ, ಉದ್ಯಮಿ ಅಣ್ಣಾಸಾಹೇಬ ಪಾಟೀಲ, ಮಹಾಂತೇಶ ತುರಮರಿ, ಈಶ್ವರ ಹೋಟಿ, ರಾಜು ಕುಡಸೋಮಣ್ಣವರ, ನೇಗಿಲ ಯೋಗಿ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ, ಶ್ರೀಶೈಲ ಯಡಳ್ಳಿ, ವಿಜಯ ದಳವಾಯಿ, ನಿಂಗಪ್ಪ ಕುರಿ, ಪ್ರಮೋದಕುಮಾರ ವಕ್ಕುಂದಮಠ, ವಿರೂಪಾಕ್ಷ ಕೋರಿಮಠ, ಮಡಿವಾಳಪ್ಪ ಹೋಟಿ, ಆನಂದ ವಾಲಿ, ಡಾ.ಮಂಜುನಾಥ ಮುದಕನಗೌಡರ, ಡಾ.ಶರಣ ಅಂಗಡಿ, ಡಾ.ರವಿ ಜಕನೂರ, ಎಫ್.ಎಸ್.ಸಿದ್ದನಗೌಡರ, ಜಗದೀಶ ಲೋಕಾಪೂರ ನೇತೃತ್ವದಲ್ಲಿ ಜ್ಯೋತಿಯಾತ್ರೆ ನಡೆಯಿತು. ಜ್ಯೋತಿ ಪಾಲನೆಯನ್ನು ಮಾರುತಿ ಶೆರೆಗಾರ, ನಾಗಪ್ಪ ಮಾರಿಹಾಳ, ಮಲ್ಲಿಕಾರ್ಜುನ ಸೊಗಲ, ಅಭಿಷೇಕ ಈಟಿ, ಸಿದ್ಧಪ್ಪ ಬಂಡಗಿ, ಫಕ್ಕೀರಪ್ಪ ದೊಡಮನಿ, ಸಂಜು ನೀಲನ್ನವರ, ಶಿವಾನಂದ ಹಿರೇಮಠ ಜ್ಯೋತಿ ಪಾಲನೆ ಮಾಡಿದರು.ಕಿತ್ತೂರಲ್ಲಿ ಪ್ರಸಾದ ವ್ಯವಸ್ಥೆ:

ಕಿತ್ತೂರಿನಲ್ಲಿ ರಾಯಣ್ಣನ ಜ್ಯೋತಿಗೆ ನಿಂಗನಗೌಡ ದೊಡಗೌಡರ, ಮಲ್ಲಿಕಾರ್ಜುನ ಉಳ್ಳೇಗಡ್ಡಿ ಹಾಗೂ ಅನೇಕ ಗಣ್ಯರು ಗೌರವ ವಂದನೆ ಸಲ್ಲಿಸಿದರು. ರಾಯಣ್ಣನ ಅಭಿಮಾನಿಗಳಿಗೆ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಪ್ರಸಾದ ವ್ಯವಸ್ಥೆ ಮಾಡಿದ್ದರು.ರಾಯಣ್ಣ ಜ್ಯೋತಿ ಬೈಲಹೊಂಗಲ ನಗರ ಪ್ರವೇಶಿಸುತ್ತಿದ್ದಂತೆ ಗಣ್ಯರು ಜ್ಯೋತಿಗೆ ಅದ್ಧೂರಿ ಸ್ವಾಗತ ನೀಡಿದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಿವರಂಜನ ಬೋಳನ್ನವರ, ಶಂಕರ ಮಾಡಲಗಿ, ತಹಶೀಲ್ದಾರ ಹನುಮಂತ ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ನಗರಸಭೆ ಪೌರಾಯುಕ್ತ ವೀರೇಶ ಹಸಬಿ, ಪಿಡಬ್ಲ್ಯೂಡಿ ಎಇಇ ಅನಿಲ ಹಾಗೂ ಅನೇಕ ಗಣ್ಯರು ಸ್ವಾಗತಿಸಿದರು.ಚನ್ನಮ್ಮನ ಸಮಾಧಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿಶ್ ಮಹಾಂತೇಶ ಕೌಜಲಗಿ, ಪ್ರಥಮ ತುರಮರಿ ಮಾತನಾಡಿದರು. ಮೋಹನ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ವಿರೂಪಾಕ್ಷ ವಾಲಿ, ಅಶೋಕ ಗುಂಡ್ಲೂರ, ಗುರು ಮೆಟಗುಡ್ಡ, ನಾಗೇಶ ಮರಕುಂಬಿ, ಎಂ.ಬಿ.ಹಿರೇಮಠ, ಅಶೋಕ ಬಾಳೇಕುಂದರಗಿ, ರಿತೇಶ ಪಾಟೀಲ, ರಾಜು ನರಸಣ್ಣವರ, ಚಂದ್ರಶೇಖರ ಕೊಪ್ಪದ, ಶ್ರೀಶೈಲ ಶರಣಪ್ಪನವರ, ಹಸನ್ ಗೊರವನಕೊಳ್ಳ, ಮಾಜಿ ಯೋಧರಾದ ನಾಗಪ್ಪ ಗುಂಡ್ಲೂರ, ವೀರು ದೊಡವೀರಪ್ಪನವರ, ಮಂಜು ಜ್ಯೋತಿ, ಈರಪ್ಪ ಕಾಡೇಶನವರ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸ್ವಾಭಿಮಾನಿ ಕ್ರಿಯಾಶೀಲ ಗೆಳೆಯರ ಬಳಗದ ಮುಖಂಡರು ಜ್ಯೋತಿಯೊಂದಿಗೆ ಸಾಗಿದರು. ಬಾದಾಮಿಯ ಮುತ್ತಲಗೇರಿ ಕುರಿಗೌಡಪ್ಪಜ್ಜನ ಡೊಳ್ಳು ತಂಡದ ಕಲಾವಿದರು ಡೊಳ್ಳು ಕುಣಿತದ ಮೂಲಕ ನೋಡುಗರ ಗಮನ ಸೆಳೆದರು. ರಾಯಣ್ಣನ ಅಭಿಮಾನಿಗಳು ಹಾಗೂ ಅಟೋಚಾಲಕರ ಸಂಘದ ಸದಸ್ಯರು ಭಕ್ತಿಭಾವದಿಂದ ಜ್ಯೋತಿಯಾತ್ರೆ ಸ್ವಾಗತಿಸಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ರಾಯಣ್ಣನ ಸಾಧನೆ, ನಡೆದು ಬಂದ ದಾರಿಯ ಗುಣಗಾನ ನಡೆಯಿತು. ರಾಜು ಸೊಗಲ ಸ್ವಾಗತಿಸಿದರು. ರವಿ ಹುಲಕುಂದ ನಿರೂಪಿಸಿದರು. ಚಂದ್ರಯ್ಯ ಯರಗಟ್ಟಿಮಠ ವಂದಿಸಿದರು.

ಬೈಲಹೊಂಗಲದಲ್ಲಿ ರಾಯಣ್ಣನ ಆತ್ಮಜ್ಯೋತಿಯನ್ನು ತಹಸೀಲ್ದಾರ್‌ ಹನುಮಂತ ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಚಿತ್ರನಟ ಶಿವರಂಜನ್ ಬೋಳಣ್ಣವರ, ಸಿಪಿಐ ಪ್ರಮೋದ ಯಲಿಗಾರ ಸೇರಿದಂತೆ ಅನೇಕ ಅಧಿಕಾರಿಗಳು, ಗಣ್ಯಮಾನ್ಯರು ಅದ್ಧೂರಿಯಾಗಿ ಸ್ವಾಗತಿಸಿದರು. ಜ್ಯೋತಿಯಾತ್ರೆಯಲ್ಲಿ ಡೊಳ್ಳು ಕುಣಿತ ಕಣ್ಮನ ಸೆಳೆಯಿತು.