ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Feb 17 2024, 01:18 AM IST

ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಕೆರೂರ: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ನಾಮಫಲಕ ಹೊತ್ತ ರಥಯಾತ್ರೆ ಗುರುವಾರ ರಾತ್ರಿ ಕೆರೂರ ಪಟ್ಟಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಪುಷ್ಪವೃಷ್ಟಿಗೈದು ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಕೆರೂರ

ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ನಾಮಫಲಕ ಹೊತ್ತ ರಥಯಾತ್ರೆ ಗುರುವಾರ ರಾತ್ರಿ ಕೆರೂರ ಪಟ್ಟಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಪುಷ್ಪವೃಷ್ಟಿಗೈದು ಬರಮಾಡಿಕೊಂಡರು. ಕೆರೂರ ಸಮೀಪದ ಹೊಸಕೋಟೆ ಗ್ರಾಮದ ಶ್ರೀ ಮಾರುತೇಶ್ವರ ಪ.ಪಂ.ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದವರು ಸಂಘದ ಅಧ್ಯಕ್ಷ ಗೋಪಾಲ ನಾಯ್ಕ ನೇತೃತ್ವದಲ್ಲಿ ಭುವನೇಶ್ವರಿ ಮಾತೆಗೆ ಪುಷ್ಪ ಅರ್ಪಿಸಿ ಕನ್ನಡ ಪರ ಘೋಷಣೆ ಕೂಗಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಡೊಳ್ಳು ಕುಣಿತ ಕನ್ನಡದ ಭಕ್ತಿ ಗೀತೆಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಬಾದಾಮಿ ತಹಸೀಲ್ದಾರ್‌ ಜೆ.ಬಿ.ಮಜ್ಜಗಿ, ಉಪತಹಸೀಲ್ದಾರ್‌ ರಾಜಶೇಖರ ಸಾತಿಹಾಳ, ಕಂದಾಯ ನಿರೀಕ್ಷಕ ಮಂಜುನಾಥ ಮಲಕನವರ, ಪಪಂ ಅಧಿಕಾರಿಗಳಾದ ಎಂ.ಐ. ಹೊಸಮನಿ, ಬಿ.ಸಿ.ಕಟ್ಟಿಮನಿ, ಸಂಗಮೇಶ ಎಂ, ಕಪೀಲ್‌ ಪ್ಯಾಟಿ, ಅ.ರಾ. ಹಿರೇಮಠ ಶಾಲೆಯ ಮುಖ್ಯಶಿಕ್ಷಕ ಸಿ.ಎಸ್‌. ನಾಗನೂರ, ಶಿಕ್ಷಕ ಬಸವರಾಜ ಪ್ಯಾಟಿ, ಕರವೆ ಪದಾಧಿಕಾರಿಗಳಾದ ವಿಷ್ಣು ಬದಾಮಿ, ರಾಚಪ್ಪ ಕುದರಿ, ನಾಗೇಶ ಚಂದಾವರಿ, ಉಸ್ಮಾನಸಾಬ್‌ ಅತ್ತಾರ, ಬಸು ಪೂಜಾರ, ಶಂಕ್ರಪ್ಪ ಪ್ರಭಾಕರ ಇತರರು ಇದ್ದರು.