ಬೃಹತ್ ಶೋಭಾಯಾತ್ರೆಯ ಮೂಲಕ ಅದ್ಧೂರಿ ಸ್ವಾಗತ

| Published : May 28 2024, 01:07 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗಅಯ್ಯೋಧೆ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪಣೆ ನೆರವೇರಿಸಿ 48 ದಿನಗಳ ಕಾಲ ಮಂಡಲಪೂಜೆ ನೆರವೇರಿಸಿದ ಹಿನ್ನೆಲೆ ರಾಮದುರ್ಗದಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರಿಗೆ ಏರ್ಪಡಿಸಿರುವ ಅಭಿನಂಧನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಪೂಜ್ಯರನ್ನು ಸೋಮವಾರ ಸಂಜೆ ಬೃಹತ್ ಶೋಭಾಯಾತ್ರೆಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಪಟ್ಟಣದ ವೇಂಕಟೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯಮೇಳ ಮತ್ತು ಮುತ್ತೈದೆಯರ ಕುಂಭಮೇಳ ಹಾಗೂ ಭಜನಾ ಮಂಡಳಿಯ ಸದಸ್ಯರು ಮತ್ತು ಬ್ರಾಹ್ಮಣ ಸಮಾಜದ ಹಿರಿಯರು ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರನ್ನು ಸ್ವಾಗತಿಸಿ ತೇರಬಜಾರ ಮೂಲಕ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಕೈಗೊಂಡು ಪಡಕೋಟಗಲ್ಲಿಯಲ್ಲಿರುವ ರಾಘವೇಂದ್ರ ಮಠದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.

ಶೋಭಾಯಾತ್ರೆಯುದ್ಧಕ್ಕೂ ಜೈಶ್ರೀರಾಮ ಘೋಷಣೆ ಮೊಳಗಿತು. ಈ ಸಂದರ್ಭದಲ್ಲಿ ಅಭಿನಂದನಾ ಸಮಾರಂಭದ ಅಧ್ಯಕ್ಷ ಪ್ರಲ್ಹಾದಾಚಾರ್ಯ ಜೋಶಿ, ವಿ.ಎನ್.ಗೋಡಖಿಂಡಿ, ಎಸ್.ವಿ.ಕುಲಕರ್ಣಿ, ಪ್ರಸಾದ ಕುಲಕರ್ಣಿ, ವಾದಿರಾಜ ಫಡ್ನೀಸ್, ಪವನ ದೇಶಪಾಂಡೆ ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು ಭಾಗವಹಿಸಿದ್ದರು.