ಸಾರಾಂಶ
- ಹೊನ್ನಾಳಿ ತಾಲೂಕು ಆಡಳಿತದಿಂದ ವಿಶ್ವಕರ್ಮ ಜಯಂತಿಯಲ್ಲಿ ಶಾಸಕ ಶಾಂತನಗೌಡ ಭರವಸೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ನಿರ್ಮಾಣ ಆಗುತ್ತಿರುವ ವಿಶ್ವಕರ್ಮ ಸಮುದಾಯ ಭವನಕ್ಕೆ ₹25 ಲಕ್ಷ ಅನುದಾನ ಕೊಡಿಸುವುದಾಗಿ ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹತ್ತಾರು ವರ್ಷಗಳಿಂದ ವಿಶ್ವಕರ್ಮ ಸಮುದಾಯದ ಕಟ್ಟಡ ಆರ್ಥಿಕ ಸಂಕಷ್ಟದಿಂದ ಪೂರ್ಣವಾಗದೇ ನನೆಗುದಿಗೆ ಬಿದ್ದಿದೆ. ಸಮುದಾಯದ ನಾಯಕರು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಕೆ.ರುದ್ರಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಡಿ ಈ ಹಿಂದೆ ₹10 ಲಕ್ಷ ಅನುದಾನ ಮತ್ತು ಸಣ್ಣ ನೀರಾವರಿ ಇಲಾಖೆಯಡಿ ₹25 ಲಕ್ಷ ಸಮುದಾಯ ಭವನಕ್ಕೆ ಅನುದಾನ ಮಂಜೂರಾಗಿತ್ತು. ಆದರೆ, ಬಿಡುಗಡೆಯಾಗಲಿಲ್ಲ. ಇದೀಗ ಈ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ. ಈ ಅನುದಾನವನ್ನು ಪುನಃ ಮಂಜೂರು ಮಾಡಿಸಿಕೊಡಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಅವರಲ್ಲಿ ಮನವಿ ಮಾಡಿದರು.
ಸಮಾಜದ ಮುಖಂಡ ಅಶೋಕಾಚಾರ್, ತಹಸೀಲ್ದಾರ್ ಪಟ್ಟರಾಜಗೌಡ, ಗ್ರೇಡ್-2 ತಹಸೀಲ್ದಾರ್ ಸುರೇಶ್ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಸಮಾಜ ಅಧ್ಯಕ್ಷ ಪಾಲಾಕ್ಷಾಚಾರ್ ಮಾತನಾಡಿದರು.ಬಿಇಒ ಕೆ.ಟಿ. ನಿಂಗಪ್ಪ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಮೃತ್ಯುಂಜಯ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಉಮಾ, ವಿಶ್ವಕರ್ಮ ಸಮಾಜದ ಮುಖಂಡರಾದ ಸುರೇಶಾಚಾರ್, ಸಹ ಕಾರ್ಯದರ್ಶಿ ವಸಂತ್ ಆಚಾರ್, ವಿಜಯಕುಮಾರ್, ಕೃಷ್ಣಾಚಾರ್ ಉಪಸ್ಥಿತರಿದ್ದರು.
- - - -17ಎಚ್.ಎಲ್.ಐ2: