ಜನರ ಗಮನ ಸೆಳೆದ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರದರ್ಶನ

| Published : Jan 27 2024, 01:16 AM IST

ಜನರ ಗಮನ ಸೆಳೆದ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಪುತ್ರಿ ಗಹನ ತಮ್ಮ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ವೇದಿಕೆಯಲ್ಲಿ ಕುಳಿತಿದ್ದ ಡಿಸಿ ಡಾ.ಕುಮಾರ ಅವರು ಸಚಿವರೊಂದಿಗೆ ಮಾತನಾಡುತ್ತಾ ತಮ್ಮ ಪುತ್ರಿ ನೃತ್ಯವನ್ನು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪೊಲೀಸ್ ಪರೇಡ್ ಮೈದಾನದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿಗೆ ಸಾಮೂಹಿಕ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ನಗರದ ಗುತ್ತಲು ಬಡಾವಣೆಯ ವಿಮಲಾ ಹಿರಿಯ ಪ್ರಾಥಮಿಕ ಶಾಲೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲವು ದೇಶಭಕ್ತಿ ಗೀತೆ, ಭಾರತಾಂಬೆ ಇಂದು ನಿಮ್ಮ ಜನುಮ ದಿನ ಸಾಮೂಹಿಕ ನತ್ಯ ಪ್ರದರ್ಶನ ನೀಡಿದ್ದು ಮೆಚ್ಚುಗೆ ಪಾತ್ರವಾಯಿತು. ಬಟ್ಟೆಯ ಪರದೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕೈಗಳಿಂದ ಜೈಹಿಂದ್ ಕಲಾಕೃತಿ ರಚಿಸಿ ಗಮನ ಸೆಳೆದರು.

ಬಳಿಕ ಚೈತನ್ಯ ಟೆಕ್ನೋ ಸ್ಕೂಲ್‌ನ ನೂರಾರು ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ಕ್ರೀಡಾಂಗಣದಲ್ಲಿ ದೇಶಭಕ್ತಿ ಮೇಳೈಸುವಂತೆ ಮಾಡಿದರು. ಜಗ್ಗದು ಜಗ್ಗದು ಯಾರಿಗೆ ಜಗ್ಗದು... ಇಂಡಿಯಾ ನಮ್ ಇಂಡಿಯಾ... ಹಾಡುಗಳಿಗೆ ಹೆಜ್ಜೆ ಹಾಕಿದರು. ಸೈಕಲ್ ಹಾಗೂ ಲೆಜಿಮ್ಸ್ ಬಳಿಸಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯವು ನೋಡುಗರನ್ನು ಆಕರ್ಷಿಸಿತು.

ನಂತರ ಮಂಡ್ಯದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ವಂದೇ ಮಾತರಂ, ಮಾ.. ತುಜೇ ಸಲಾಂ, ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ ನಮ್ಮ ಇಂಡಿಯಾ... ಹಾಡುಗಳಿಗೆ ಹಾಗೂ ಅಚೀವರ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದಿಲ್ ಶೇ ರೇ, ರಂಗ್ ತೇರಿ ಜೀತ್ ಕಾ... ಹಾಡುಗಳಿಗೆ ನೃತ್ಯರೂಪಕ ಪ್ರದರ್ಶಿಸಿ ನೆರೆದಿದ್ದವರ ಮೈಮನಗಳನ್ನು ರೋಮಾಂಚನಗೊಳಿಸಿದರು.

ನೃತ್ಯ ಪ್ರದರ್ಶಿಸಿದ ಡೀಸಿ ಪುತ್ರಿ:

ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಪುತ್ರಿ ಗಹನ ತಮ್ಮ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ವೇದಿಕೆಯಲ್ಲಿ ಕುಳಿತಿದ್ದ ಡಿಸಿ ಡಾ.ಕುಮಾರ ಅವರು ಸಚಿವರೊಂದಿಗೆ ಮಾತನಾಡುತ್ತಾ ತಮ್ಮ ಪುತ್ರಿ ನೃತ್ಯವನ್ನು ಕಣ್ತುಂಬಿಕೊಂಡರು.ಪಥ ಸಂಚಲನ, ವಿಜೇತರಿಗೆ ಬಹುಮಾನ ವಿತರಣೆ

ಗಣರಾಜ್ಯೋತ್ಸವದ ನಿಮಿತ್ತ ನಡೆದ ಪಥ ಸಂಚಲನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಇಲಾಖಾ ತಂಡಗಳ ವಿಭಾಗದಲ್ಲಿ ಅಬಕಾರಿ ಇಲಾಖೆ ಪ್ರಥಮ, ಗೃಹ ರಕ್ಷಕ ದಳ ದ್ವಿತೀಯ, ಎನ್‌ಸಿಸಿ ವಿಭಾಗದಲ್ಲಿ ಪಿಇಎಸ್ ಬಾಲಕಿಯರ ಪದವಿ ಕಾಲೇಜು ಪ್ರಥಮ, ಪಿಇಎಸ್ ಬಾಲಕ ಪದವಿ ಕಾಲೇಜು ದ್ವಿತೀಯ ಹಾಗೂ ಅನೇಕತನ ಪದವಿ ಪೂರ್ವ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡರು.ಪ್ರೌಢಶಾ ವಿಭಾಗದಲ್ಲಿ ಸೆಂಟ್ ಜೋಸೆಫ್ ಪ್ರೌಢಶಾಲೆ ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ ದ್ವಿತೀಯ ಹಾಗೂ ಕೆಪಿಎಸ್ ಪ್ರೌಢ ಶಾಲೆ ತೃತೀಯ, ಹಿರಿಯ ಪ್ರಾಥಮಿಕ ಶಾಲೆಗ ವಿಭಾಗ- ಅಭಿನವ ಭಾರತಿ ಹಿರಿಯ ಪ್ರೌಢಶಾಲೆ ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ, ಸೆಂಟ್ ಜೋಸೆಫ್ ಹಿರಿಯ ಪ್ರೌಢಶಾಲೆ ತೃತೀಯ ಸ್ಥಾನ. ಸ್ಕೌಟ್ಸ್ ಮತ್ತು ಗ್ರೈಡ್ಸ್ ವಿಭಾಗ ರೋಟರಿ ಪ್ರೌಢಶಾಲೆ ಸಮಧಾನಕರ ಬಹುಮಾನ ಪಡೆದುಕೊಂಡರು.24 ತಂಡಗಳು ಭಾಗಿ:ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಜಿಲ್ಲಾ ಶಸಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರೀಕ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಅಬಕಾರಿ ದಳ, ಲಕ್ಷ್ಮೀ ಜನಾರ್ಧನ ಶಾಲೆ, ಅನಿಕೇತನ ಪ್ರೌಢಶಾಲೆ, ಲಕ್ಷ್ಮೀ ಜನಾರ್ಧನ ಶಾಲೆ, ಕಾರ್ಮೆಲ್ ಕಾನ್ವೆಂಟ್, ಆದರ್ಶ ಪ್ರೌಢಶಾಲೆ, ಪಿಇಎಸ್ ಪ್ರೌಢಶಾಲೆ, ಸದ್ವಿದ್ಯ ಪ್ರೌಢಶಾಲೆ, ಪಿಇಎಸ್ ಮಹಿಳಾ ಕಾಲೇಜು, ಸೇಂಟ್ ಜೋಸೆಫ್ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ರೋಟರಿ ಪ್ರೌಢಶಾಲೆ, ಅಭಿನವ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಂಡ ಸೇರಿದಂತೆ 24 ತಂಡಗಳು ಭಾಗವಹಿಸಿದ್ದವು.