ಗಣಪತಿಯನ್ನು ಸ್ವಾಗತಿಸಿದ ಅಭಿಮಾನಿ ಬಳಗ

| Published : Sep 09 2024, 01:39 AM IST

ಸಾರಾಂಶ

ಮಲೇಬೆನ್ನೂರು ಪಟ್ಟಣದ ವಿವಿಧ ಗಣೇಶ ಮೂರ್ತಿಗಳ ತಯಾರಿಕಾ ಕಲಾವಿದರಿಂದ ಒಂದೇ ಬಾರಿಗೆ ನೂರಾರು ಗಣಪತಿ ಮೂರ್ತಿಗಳನ್ನು ಏಕಕಾಲದಲ್ಲಿ ಮೆರವಣಿಗೆ ಮೂಲಕ ಪ್ರತಿಷ್ಠಾಪನಾ ವೇದಿಕೆಗಳಿಗೆ ಆಗಮಿಸಿ, ಸಂಭ್ರಮದಿಂದ ವಿಘ್ನ ನಿವಾರಕನನ್ನು ಭಕ್ತರು, ಅಭಿಮಾನಿಗಳು ಸ್ವಾಗತಿಸಿದರು.

- ಪೊಲೀಸ್, ಗೃಹರಕ್ಷಕ ದಳ ಸಿಬ್ಬಂದಿಯಿಂದ ಬಿಗಿ ಭದ್ರತೆ- - - ಮಲೇಬೆನ್ನೂರು: ಪಟ್ಟಣದ ವಿವಿಧ ಗಣೇಶ ಮೂರ್ತಿಗಳ ತಯಾರಿಕಾ ಕಲಾವಿದರಿಂದ ಒಂದೇ ಬಾರಿಗೆ ನೂರಾರು ಗಣಪತಿ ಮೂರ್ತಿಗಳನ್ನು ಏಕಕಾಲದಲ್ಲಿ ಮೆರವಣಿಗೆ ಮೂಲಕ ಪ್ರತಿಷ್ಠಾಪನಾ ವೇದಿಕೆಗಳಿಗೆ ಆಗಮಿಸಿ, ಸಂಭ್ರಮದಿಂದ ವಿಘ್ನ ನಿವಾರಕನನ್ನು ಭಕ್ತರು, ಅಭಿಮಾನಿಗಳು ಸ್ವಾಗತಿಸಿದರು. ಗಣೇಶ ಮೂರ್ತಿಗಳ ಸಿಂಗರಿಸಿ, ಪೂಜಿಸಲೆಂದೇ ಹೂ, ಹಣ್ಣು, ಕಾಯಿ, ಹೊಸವಸ್ತ್ರ, ಪಟಾಕಿ ಖರೀದಿಗಾಗಿ ಸುತ್ತಮುತ್ತಲ ಹಲವು ಗ್ರಾಮಗಳ ಭಕ್ತರು ಜಮಾಯಿಸಿದ್ದರು. ಇದರಿಂದಾಗಿ ಶಿವಮೊಗ್ಗ-ಹರಿಹರ ರಸ್ತೆಯು ಜನಗಜಂಗುಳಿಯಿಂದ ಕೂಡಿತ್ತು. ವಿವಿಧ ವಾಹನಗಳಲ್ಲಿ ಭಕ್ತರು ವಿದ್ಯಾಗಣಪನನ್ನು ಭಕ್ತಿಯಿಂದ, ಸುರಕ್ಷಿತವಾಗಿ ತಮ್ಮ ಗ್ರಾಮಗಳ ಸ್ಥಳಕ್ಕೆ ಸಾಗಿಸಿದರು.

ಪಟ್ಟಣದ ನೀರಾವರಿ ಇಲಾಖೆ, ವಿದ್ಯುತ್ ಕಚೇರಿ, ಪೋಲೀಸ್ ಠಾಣೆ, ಆಂಜನೇಯ ದೇವಾಲಯ, ವಿವಿಧ ದೇವಸ್ಥಾನಗಳಲ್ಲಿ ಗಣೇಶ ವಿಗ್ರಹಳನ್ನು ಸ್ಥಾಪಿಸಲಾಗಿದೆ. ಗಣೇಶ ಪ್ರತಿಷ್ಠಾಪನಾ ವೇದಿಕೆಗಳಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್, ಶ್ರೀರಾಮ, ವೀರ ಸಾವರ್ಕರ್, ಬಾಲ ಗಂಗಾಧರ ತಿಲಕ್, ಹನುಮಾನ್ ಚಿತ್ರವಿರುವ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಗಣೇಶನಿಗೆ ವಿಶೇಷ ಪ್ರಜೆ, ನೈವೇದ್ಯ ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಹಿಂದೂ ಮಹಾಗಣಪತಿ ಸಮಿತಿ ಗಣಪತಿಯ ಭವ್ಯ ಮೆರವಣಿಗೆ ನೋಡುಗರನ್ನು ಆಕರ್ಷಿಸಿತು. ವಿವಿಧ ಕಲಾ ತಂಡಗಳು ಮೆರುಗು ನೀಡಿದವು. ಹಲವು ಪಕ್ಷಾತೀತ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರಸಭಾ ಸದಸ್ಯರು ನೂರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿದರು. ಪೊಲೀಸ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

- - - -೮ಎಂಬಿಆರ್೧:

ಮಲೇಬೆನ್ನೂರು ಪಟ್ಟಣದಲ್ಲಿ ಗಣಪತಿ ಮೂರ್ತಿಗಳನ್ನು ಏಕಕಾಲದಲ್ಲಿ ಮೆರವಣಿಗೆ ಮೂಲಕ ಪ್ರತಿಷ್ಠಾಪನಾ ವೇದಿಕೆಗಳಿಗೆ ಕರೆತರಲಾಯಿತು.