ಸಾರಾಂಶ
ಲೋಕಾಪುರ ಸಮೀಪ ಹೆಬ್ಬಾಳ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಅಬ್ದುಲ್ ಕಲಾಂ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಲೋಕಾಪುರ: ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸುಂದರ ಪರಿಸರ ಅತ್ಯಗತ್ಯವಾಗಿದೆ ಎಂದು ಪ್ರಾಚಾರ್ಯ ವಿ. ವಿ. ಬಿರಾದಾರ ಹೇಳಿದರು.
ಸಮೀಪದ ಹೆಬ್ಬಾಳ ಮೊರಾರ್ಜಿ ದೇಸಾಯಿ ಬಾಲಕೀಯರ ವಸತಿ ಶಾಲೆ ಅಬ್ದುಲ್ ಕಲಾಂ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಪರಿಸರದ ಮಹತ್ವ ಅರಿತು ಗಿಡ ಮರ ಬೆಳೆಸಬೇಕು. ಮರಗಳ ಪಾಲನೆ ಪೋಷಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಜ್ಞಾನ ಶಿಕ್ಷಕಿ ರೇಷ್ಮಾ ಎಸ್. ಕಲ್ಹಾಳ ಮಾತನಾಡಿ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರದ ಸಮತೋಲನ, ಪರಿಸರ ಮಾಲಿನ್ಯ ಕುರಿತು ತಿಳಿಸಿದರು. ಈ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.