ಆರೋಗ್ಯವಂತ ಮಹಿಳೆಯಿಂದ ಉತ್ತಮ ಸಮಾಜ

| Published : Mar 22 2024, 01:01 AM IST

ಸಾರಾಂಶ

ಬಾಗಲಕೋಟೆ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದಿಂದ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಿಳೆಯ ಆರೋಗ್ಯ ಮತ್ತು ಸಶಕ್ತತೆಯಲ್ಲಿನ ಹೊಸ ಬದಲಾವಣೆಯ ಕುರಿತು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಎಚ್.ಎಸ್.ಕೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೀರ್ತಿ ಹುರಕಡ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತೀಯ ಅಹಾರ ಪದ್ಧತಿಯಿಂದ ದೇಹದ ಆರೋಗ್ಯ ಸಮತೋಲದನಲ್ಲಿದೆ. ಅದೆ ರೀತಿ ಆರೋಗ್ಯವಂತ ಮಹಿಳೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಎಚ್.ಎಸ್.ಕೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೀರ್ತಿ ಹುರಕಡ್ಲಿ ಹೇಳಿದರು. ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದಿಂದ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಿಳೆಯ ಆರೋಗ್ಯ ಮತ್ತು ಸಶಕ್ತತೆಯಲ್ಲಿನ ಹೊಸ ಬದಲಾವಣೆಯ ಕುರಿತು ಮಾತನಾಡಿದ ಅವರು, ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದರೇ ಮಾತ್ರ ನಾವೂ ಅಂದಕೊಂಡಿದ್ದು ಸಾಧಿಸಲು ಸಾಧ್ಯ. ನಿತ್ಯ ಧ್ಯಾನ, ಯೋಗ, ನಡಿಗೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತೀಯ ಅಹಾರ ಪದ್ಧತಿಯು ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗಿದೆ. ಮನೆ ಅಡುಗೆ ಕುಟುಂಬದ ಆರೋಗ್ಯವನ್ನು ಕಾಪಾಡುತ್ತದೆ ಎಂದರು.ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ.ಒಡೆಯರ ಮಾತನಾಡಿ, ಮಹಿಳೆ ಇಂದು ಎಲ್ಲ ರಂಗದಲ್ಲೂ ಸಾಧನೆಯನ್ನು ಮಾಡುತ್ತಿದ್ದಾಳೆ. ಸಮುದಾಯದ ಪ್ರೋತ್ಸಾಹ ಬಲದಿಂದ ಮಹಿಳೆ ಏನೆಲ್ಲಾ ಸಾಧಿಸಲೂ ಸಿದ್ದವಾಗಿದ್ದಾಳೆ. ಅವಳ ಶಕ್ತಿ ಅಗಾದವಾಗಿದೆ. ತಾಯಿ, ಅಮ್ಮಂದಿರೆ ವಿದ್ಯಾರ್ಥಿನಿಯರಿಗೆ ಪ್ರೇರಣಾ ಶಕ್ತಿ ಎಂದು ತಿಳಿಸಿದರು.

ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಕ್ಷೇತ್ರಗಳ್ಲಿ ಮಹಿಳೆಯರ ಸಾಧನೆಗೆ ಅವರ ಸತತ ಪ್ರಯತ್ನವೇ ಕಾರಣವಾಗಿದೆ. ಮಹಿಳೆ ಈಗ ಸಬಲೆಯಾಗಿದ್ದಾಳೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಪಿ.ಕೆ.ಚೌಗಲಾ, ಮಹಿಳಾ ಸಶಕ್ತೀರಣ ಘಟಕದ ಸಂಯೋಜಕಿ ವಿ.ಎಸ್.ತಾಳಿಕೋಟಿ, ಡಾ.ಎಸ್.ಆರ್‌.ಕಲಾದಗಿ ಇದ್ದರು. ಮೇಘಾ ಪಾಗಿ ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಮಹಿಳೆ ಇಂದು ಎಲ್ಲ ರಂಗದಲ್ಲೂ ಸಾಧನೆಯನ್ನು ಮಾಡುತ್ತಿದ್ದಾಳೆ. ಸಮುದಾಯದ ಪ್ರೋತ್ಸಾಹ ಬಲದಿಂದ ಮಹಿಳೆ ಏನೆಲ್ಲ ಸಾಧಿಸಲೂ ಸಿದ್ಧವಾಗಿದ್ದಾಳೆ. ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದರೇ ಮಾತ್ರ ನಾವೂ ಅಂದಕೊಂಡಿದ್ದು ಸಾಧಿಸಲು ಸಾಧ್ಯ. ನಿತ್ಯ ಧ್ಯಾನ, ಯೋಗ, ನಡಿಗೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತೀಯ ಅಹಾರ ಪದ್ಧತಿಯು ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗಿದೆ. ಮನೆ ಅಡುಗೆ ಕುಟುಂಬದ ಆರೋಗ್ಯ ಕಾಪಾಡುತ್ತದೆ.

ಡಾ.ಕೀರ್ತಿ ಹುರಕಡ್ಲಿ,

ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ.