ಸಾರಾಂಶ
ಮುದ್ದೇಬಿಹಾಳ: ತಾಲೂಕಿನ ಸುಕ್ಷೇತ್ರ ಕುಂಟೋಜಿಯ ಬಸವಣ್ಣ, ಸಂಗಮೇಶ್ವರ ನೂತನ ರಥಕ್ಕೆ ಅಳವಡಿಸಲು ಕಾಶಿಯ ರುದ್ರಾಕ್ಷಿಗಳಿಂದ ತಯಾರಿಸಿದ ಎರಡು ಬೃಹತ್ ರುದ್ರಾಕ್ಷಿ ಮಾಲೆಗಳನ್ನು ಮಂಗಳವಾರ ಗದಗ ಜಿಲ್ಲೆ ನರಗುಂದ ತಾಲೂಕಿನ ಇಬ್ರಾಹಿಂಪುರದ ಶಿವಾನಂದ ಮಹಾಸ್ವಾಮಿಗಳ ಮಠದಲ್ಲಿ ಬಸವೇಶ್ವರ ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಮತ್ತು ಗ್ರಾಮದ ಜಾತ್ರಾ ಸಮಿತಿಗೆ ಹಸ್ತಾಂತರ ಮಾಡಲಾಯಿತು.

ಅಬ್ಬಿಹಾಳ ಗ್ರಾಮಸ್ಥರು ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶರಣು ಹಿರೇಮಠ ತಲಾ ಒಂದು ರುದ್ರಾಕ್ಷಿ ಮಾಲೆಯನ್ನು ಕಾಣಿಕೆಯಾಗಿ ದೇವಸ್ಥಾನಕ್ಕೆ ನೀಡಿದ್ದಾರೆ. ಒಂದು ಬೃಹತ್ ಮಾಲೆಯನ್ನು ಕೋಟಿ ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ರುದ್ರಾಕ್ಷಿಯು ಶಿವನ ಕಣ್ಣೀರಿನ ಹನಿಯಿಂದ ಹುಟ್ಟುಕೊಂಡಿರುವ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಶಿವಭಕ್ತರು ಧರಿಸುವ ಪವಿತ್ರ ಮಣಿಯಾಗಿರುವುದರಿಂದ ಈ ಮಾಲೆಗೆ ವಿಶೇಷ ಮಹತ್ವ ಇದೆ ಎಂದು ಕಮಿಟಿ ಮುಖಂಡರು ತಿಳಿಸಿದರು.ಈ ಸಂದರ್ಭ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳಳ್ಳಿ, ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಈರಯ್ಯ ಶಂಕಿನಮಠ, ಶರಣು ಹಿರೇಮಠ, ಆನಂದ ಗಸ್ತಿಗಾರ, ರಾಮಣ್ಣ ಹುಲಗಣ್ಣಿ, ಮಲಕಾಜಿ ಹೆಬ್ಬಾಳ, ಬಸಲಿಂಗಪ್ಪಗೌಡ ಬಿರಾದಾರ, ಬಸವರಾಜ ಕೋರಿ, ಗುರು ಮಡಿವಾಳರ, ಸಂಗಮೇಶ ಯರಝರಿ, ಬಸವರಾಜ ಹುಲಗಣ್ಣಿ, ಮುತ್ತು ಮದರಿ, ಸಂಗಮೇಶ ಒಣರೊಟ್ಟಿ, ಹಾಜಿ ನಾಯ್ಕೋಡಿ ಸೇರಿ ಹಲವರು ಇದ್ದರು. ಹಸ್ತಾಂತರದ ನಂತರ ಮಾಲೆಯೊಂದಿಗೆ ದೇವಸ್ಥಾನ ಕಮಿಟಿ ಕೊಪ್ಪಳದತ್ತ ತೆರಳಿತು.