ಸಾರಾಂಶ
ಬರವಣಿಗೆಯ ವಿಕಾಸಕ್ಕೆ ಭಾಷೆ ಹಾಗೂ ಓದು ಮುಖ್ಯವಾಗಿದ್ದು ಪತ್ರಕರ್ತನಾಗಲು ತಾಳ್ಮೆ, ಸಂಯಮ, ವಾಸ್ತವದ ಅಧ್ಯಯನ ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ಲೋಕೇಶ.ಎಸ್.ಕೆ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬರವಣಿಗೆಯ ವಿಕಾಸಕ್ಕೆ ಭಾಷೆ ಹಾಗೂ ಓದು ಮುಖ್ಯವಾಗಿದ್ದು ಪತ್ರಕರ್ತನಾಗಲು ತಾಳ್ಮೆ, ಸಂಯಮ, ವಾಸ್ತವದ ಅಧ್ಯಯನ ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ಲೋಕೇಶ.ಎಸ್.ಕೆ ಹೇಳಿದರು.ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಹಮ್ಮಿಕೊಂಡಿದ್ದ ಸುದ್ದಿ ಬರವಣಿಗೆ ಕೌಶಲ್ಯ ವಿಷಯದ ಸರ್ಟಿಫಿಕೆಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪತ್ರಿಕೋದ್ಯಮದಲ್ಲಿ ಬರವಣಿಗೆಯಿಂದ ಗುರುತಿಸಿಕೊಳ್ಳಬಹುದು. ಯಾವುದೇ ವಿಷಯಗಳ ಕುರಿತು ಬರೆಯುವ ಮುನ್ನ ಅದರ ಪೂರ್ವಭಾವಿ ವಿಷಯಗಳನ್ನು ತಿಳಿದುಕೊಂಡಿರಬೇಕು. ಬರವಣಿಗೆ ಬುನಾದಿ ಬಾಲ್ಯದಿಂದಲೇ ಆರಂಭವಾಗಬೇಕು. ಪೂರ್ವಾಗ್ರಹ ಪೀಡಿತರಾಗದೆ ವಾಸ್ತವ ಅರ್ಥೈಸಿಕೊಂಡರೆ ಬರವಣಿಗೆ ಮೊನಚಾಗುತ್ತದೆ ಎಂದು ಸಲಹೆ ನೀಡಿದರು.ಓದದೆ ಆಳವಾದ ಅಧ್ಯಯನ ಮಾಡುವ ಕಲೆ ರೂಡಿಸಿಕೊಳ್ಳಬೇಕು. ಸರಳತೆ, ಸ್ಪಷ್ಟತೆ ಮತ್ತು ನಿಖರತೆ ರೂಢಿಸಿಕೊಂಡರೆ ಒಬ್ಬ ಒಳ್ಳೆಯ ಬರಹಗಾರರಾಗಬಹುದು. ಅನುಭವಗಳನ್ನು ಬರವಣಿಗೆ ರೂಪದಲ್ಲಿ ತರುವುದನ್ನು ಕಲಿಯಬೇಕು. ಪತ್ರಕರ್ತರಿಗೆ ಕಡಿಮೆ ಮಾತು, ಜಾಸ್ತಿ ತಾಳ್ಮೆ ಬಹಳ ಮುಖ್ಯವಾಗಿದೆ ಎಂದರು.ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಅಧ್ಯಕ್ಷೆತೆ ವಹಿಸಿ ಮಾತನಾಡಿ, ವಿಧ್ಯಾರ್ಥಿಗಳು ಪ್ರತಿಕ್ರಿಯಿಸುವುದನ್ನುಕಲಿಯಬೇಕು. ಬರಹಗಳು ಆಯಾ ಕಾಲಗಳಲ್ಲಿ ಅದರದ್ದೆಯಾದ ವೈಶಿಷ್ಟ ಹೊಂದಿದ್ದು, ಅದರಕಡೆಗೆ ಗಮನ ವಹಿಸಬೇಕು. ಬರವಣಿಗೆ ಓದಿಸಿಕೊಂಡು ಹೋಗುವ ರೀತಿ ಬರೆಯುವ ಶೈಲಿಯನ್ನು ಬೆಳೆಸಿಕೊಳ್ಳಬೇಕು. ಡಿಜಿಟಲ್ ಯುಗದಲ್ಲಿ ಇದ್ದರೂ ಮುದ್ರಣ ಮಾಧ್ಯಮದ ಮಹತ್ವ ಕಡಿಮೆಯಾಗಿಲ್ಲ. ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡು ಓದುಗರನ್ನು ಸೆಳೆದಿದೆ, ವಿದ್ಯಾರ್ಥಿಗಳು ಭಾಷಾ ಕೌಶಲ್ಯವನ್ನು ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಐ.ಬಿ.ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದದಲ್ಲಿ ಐಕ್ಯೂಎಸಿ ಘಟಕದ ಸಂಯೋಜ ಕರುಡಾ, ಎ.ಯು.ರಾಠೋಡ, ಪ್ರಾಧ್ಯಾಪಕ ಎಂ.ಪಿ.ದೊಡವಾಡ ಉಪಸ್ಥಿತರಿದ್ದರು. ಸೌಮ್ಯಾ ಕಾಗಲ್ ಕಾರ್ಯಕ್ರಮ ನಿರೂಪಿಸಿದರು.