ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ:
ಮೂಡಲಗಿ ತಾಲೂಕಿನ ನಾಗನೂರಿನಲ್ಲಿ ಪ್ರತಿ ಮನೆಗೊಬ್ಬರಂತೆ ಖೋ-ಖೋ ಕ್ರೀಡಾಪಟುಗಳು ಬೆಳೆದಿದ್ದು ಹೆಮ್ಮೆಯ ಸಂಗತಿ. ಗ್ರಾಮೀಣ ಕ್ರೀಡಾಪಟುಗಳು ಅಂತಾರಾಷ್ಟ್ರಮಟ್ಟದಲ್ಲಿ ಬೆಳೆಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಈರಣ್ಣ ಹಳಿಗೌಡರ ಅವರ ಸಾರ್ಥಕ 25 ವರ್ಷಗಳ ಪಟ್ಟ ಪರಿಶ್ರಮ ಇದೀಗ ಸಾರ್ಥಕವಾಗಿದೆ. ಇದಕ್ಕೆ ನಾಗನೂರಿನ ಜನರ ಸಹಾಯ ಸಹಕಾರವೇ ಮುಖ್ಯವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಗಜಾನನ ಮನ್ನಿಕೇರಿ ಹೇಳಿದರು.ತಾಲೂಕಿನ ನಾಗನೂರ ಪಟ್ಟಣದಲ್ಲಿ ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ನಾಗನೂರು ಹಾಗೂ ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲಾ ಖೋಖೋ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಸೀನಿಯರ್ ಪುರುಷರ ಮತ್ತು ಮಹಿಳೆಯರ ಆಹ್ವಾನಿತ ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೆಹಲಿ ಕೆಕೆಎಫ್ಐ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್.ಎಂ ಮಾತನಾಡಿ, ಖೋ ಖೋ ಕ್ರೀಡೆಯಲ್ಲಿ ಅನೇಕ ನಿಯಮಗಳ ಜೊತೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕ್ರೀಡಾಪಟುಗಳು ಮ್ಯಾಟ್ ಮೇಲೆ ಶೂ ಧರಿಸಿ ಸಮವಸ್ತ್ರದೊಂದಿಗೆ ಆಟವಾಡಬೇಕು. ಈ ಭಾಗದಲ್ಲಿ ಕ್ರೀಡೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಈರಣ್ಣ ಹಳಿಗೌಡರ ಅವರನ್ನು ಕರ್ನಾಟಕ ರಾಜ್ಯದ ಖೋ ಖೋ ತಂಡದ ಟೀಮ್ ಮ್ಯಾನೇಜರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ಹುಕ್ಕೇರಿ ಅವಜಿಕರ್ ಕ್ಯಾರಗುಡ್ಡಮಠದ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಮಾತನಾಡಿ, ಕ್ರೀಡಾಪಟುಗಳು ವ್ಯಸನಿಗಳಾಗಲಿ ಕ್ರೀಡೆಯಲ್ಲಿ ಪಾಲ್ಗೊಂಡು ಸದೃಢ ದೇಹ ನಿರ್ಮಿಸಿಕೊಳ್ಳಬೇಕು. ಯುವಕರು ಹೆತ್ತ ತಂದೆ-ತಾಯಿ, ಕಲಿಸಿದ ಗುರುಗಳು ರೈತ, ಗಡಿ ಕಾಯುವ ಸೈನಿಕ, ಗೌರವ ಭಾವನೆಯಿಂದ ಕಾಣಬೇಕು ಎಂದರು. ಬೆಳಗಾವಿ ಖೋ ಖೋ ಅಸೋಸಿಯೇಷನ್ ಉಪಾಧ್ಯಕ್ಷ ಸಿ.ಆರ್.ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್.ಪಾಟೀಲ, ಗಜಾನನ ಮನ್ನಿಕೇರಿ, ಲೋಕೇಶ್ವರ್.ಎಂ ಅವರನ್ನು ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮೂಡಲಗಿ ಬಿಇಒ ಅಜಿತ ಮನ್ನಿಕೆರಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕ್ಷಕ ಜುನೆದ್ ಪಟೇಲ, ಟಿಪಕೊ ಎಸ್.ಬಿ.ಹಳಿಗೌಡರ, ಶಿವಯೋಗಿ ಎಲಿ, ಶ್ರೀನಿವಾಸ.ಓ, ಕೆಂಚನಗೌಡ ಪಾಟೀಲ, ಪರಸಪ್ಪ ಬಬಲಿ, ರಾಮನಗೌಡ ಪಾಟೀಲ, ಕೆ.ಸಿ.ಇಟ್ಟಿಗುಡಿ, ಖೋಖೋ ಅಸೋಸಿಯೇಷನ್ ಅಧ್ಯಕ್ಷ ಗಜಾನನ ಯರಗಣವಿ, ಸಂಸ್ಥೆ ಕಾರ್ಯದರ್ಶಿ ಈರಣ್ಣ ಹಳಿಗೌಡರ, ಪರಸಪ್ಪ ಗುಡೇನ್ನವರ, ಸಂಪತ ಗಾಣಿಗ, ಮಲ್ಲಪ್ಪ ಹೊಸಮನಿ, ಬಸವರಾಜ ಮುತ್ತನಾಳ, ಎಸ್.ಬಿ ಕೇದಾರಿ, ಬಸವರಾಜ ಕರಿಹೋಳಿ, ಅರುಣ ಕುಲಕರ್ಣಿ, ಅರ್ಜುನ ಕೋಲೂರು, ಭೀಮಪ್ಪ ಪಾಟೀಲ, ಸಿ.ಎಸ್.ಹಿರೇಮಠ, ವೀರಭದ್ರಯ್ಯ ಮಠಪತಿ, ಕ್ರೀಡಾಪಟುಗಳು, ನಿರ್ಣಾಯಕರು ಹಾಗೂ ತರಬೇತಿದಾರರು ಇದ್ದರು.