ಕುಸ್ತಿ ಪಂದ್ಯಗಳನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು

| Published : Oct 06 2025, 01:00 AM IST

ಕುಸ್ತಿ ಪಂದ್ಯಗಳನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ: ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಹಾಗೂ ಗರಡಿ ಕುಸ್ತಿ ಸಂಘ, ಪುರಸಭೆಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ಕೊನೆಯ ದಿನವಾದ ಭಾನುವಾರ ಕ್ರೀಡೆ ನೋಡಲು ಪಟ್ಟಣ ಮತ್ತು ಹೊರ ಊರುಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

ತರೀಕೆರೆ: ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಹಾಗೂ ಗರಡಿ ಕುಸ್ತಿ ಸಂಘ, ಪುರಸಭೆಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ಕೊನೆಯ ದಿನವಾದ ಭಾನುವಾರ ಕ್ರೀಡೆ ನೋಡಲು ಪಟ್ಟಣ ಮತ್ತು ಹೊರ ಊರುಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.ಚಿನ್ನದ ಪದಕಗಳು, ನಗದು ಬಹುಮಾನ, ಚಿನ್ನದ ಬಳೆ ಮತ್ತಿತರೆ ಆಕರ್ಷಕ ಮತ್ತು ಬೆಲೆಬಾಳುವ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಲು ಪೈಲ್ವಾನರು ಅಖಾಡದಲ್ಲಿ ಸೆಣೆಸಾಟ ನಡೆಸುವುದನ್ನು ನೋಡಲು ಜನ ಕಕ್ಕಿರಿದು ಸೇರಿದ್ದರು.ಮಹಾರಾಷ್ಟ್ರ, ದೆಹಲಿ, ಪಂಜಾಬ್, ಸೊಲ್ಲಾಪುರ, ಕೊಲ್ಲಾಪುರ, ಬೆಳಗಾಂ, ಹುಬ್ಬಳ್ಳಿ, ಬೀದರ್, ದಾವಣಗೆರೆ, ಹರಿಹರ ಮತ್ತಿತರೆ ಭಾಗಗಳಿಂದ ಆಗಮಿಸಿದ್ದ ಕುಸ್ತಿ ಪಟುಗಳು ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

5ಕೆಟಿಆರ್.ಕೆ.32ಃ

ತರೀಕೆರೆಯಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.