ಗುಡ್ಡೆಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ

| Published : Jul 12 2024, 01:36 AM IST

ಸಾರಾಂಶ

ಕಡೂರು, ಯಗಟಿ ಸುತ್ತಮುತ್ತ ಅಡ್ಡಾಡುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದು ತಾಲೂಕಿನ ಯಗಟಿ ಹೋಬಳಿ ಗುಡ್ಡೆಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ.

ಕನ್ನಡಪ್ರಭ ವಾರ್ತೆ, ಕಡೂರು

ಯಗಟಿ ಸುತ್ತಮುತ್ತ ಅಡ್ಡಾಡುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದು ತಾಲೂಕಿನ ಯಗಟಿ ಹೋಬಳಿ ಗುಡ್ಡೆಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ.

ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಚಿರತೆ ಗುಡ್ಡೇಹಳ್ಳಿಯ ಗುಡ್ಡದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಬೋನಿನಲ್ಲಿ ಬಂಧಿಸಿದ್ದಾರೆ.

ಬುಧವಾರ ರಾತ್ರಿ ಗುಡ್ಡೆಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬೋನಿನಲ್ಲಿ ಬಂಧಿಯಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಅಮೃತಾ ಮತ್ತು ಸಂತೋಷ್ ಭೇಟಿ ನೀಡಿ ಪರಿಶೀಲಿಸಿ ಅರಣ್ಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. --- ಬಾಕ್ಸ್ ---

ಬಯಲು ಸೀಮೆಯಲ್ಲಿ‌ ಚಿರತೆ ಕಾಟ ಹೆಚ್ಚಿದ್ದು, ಕಡೂರು ಸಮೀಪದ ಸರಸ್ವತಿಪುರ ಸುತ್ತಮುತ್ತ ಚಿರತೆ ದನಕರುಗಳನ್ನು ತಿನ್ನುತ್ತಿರುವ ಬಗ್ಗೆ ಗ್ರಾಮಗಳ ಜನರು ಕಂಗಾಲಾಗಿದ್ದಾರೆ. ಮೇಯಲು ಹೋಗಿದ್ದಾಗ ದನದ ಗುಂಪಿನ ಮೇಲೆ ಚಿರತೆ ದಾಳಿ ಮಾಡುದಾಗ ಸರಸ್ವತಿಪುರ ಗೋಪಾಲಾಚಾರ್ ಅವರ ಕರು ಪಾರಾಗಿದೆ.

ಇದುವರೆಗೂ ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮ ಹಾಗು ಸುತ್ತಮುತ್ತಲ ಗ್ರಾಮಗಳ ಸುಮಾರು 8 ಹಸು ಮತ್ತು ಕರುಗಳನ್ನು ತಿಂದು ಹಾಕಿದ್ದು ಚಿರತೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದರೂ ಅರಣ್ಯ ಇಲಾಖೆ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಸರಸ್ವತಿಪುರ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

11ಕೆಕೆಡಿಯು3.ಬೋನಿನಲ್ಲಿ ಬಂಧಿಯಾದ ಚಿರತೆ.