ಸಾರಾಂಶ
ಮಂಡ್ಯ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಅಭಿಯಾನಿಯೊಬ್ಬರು ರಕ್ತದಲ್ಲಿ ಸಿದ್ದರಾಮಯ್ಯ ಅವರಿಗೆ ರಕ್ತ ಪತ್ರ ಬರೆದಿದ್ದಾರೆ.
ತಾಲೂಕಿನ ಮೊತ್ತಹಳ್ಳಿ ಗ್ರಾಮದ ಸಚಿನ್ ರಕ್ತದಲ್ಲಿ ಪತ್ರ ಬರೆದಿರುವ ಅಭಿಮಾನಿ. ಸಿಎಂ ಸಿದ್ದರಾಮಯ್ಯ ಅವರ ಹುಚ್ಚು ಅಭಿಮಾನಿಯಾಗಿರುವ ಸಚಿನ್ ಕೈನಿಂದ ರಕ್ತ ತೆಗೆದು ನಂತರ ರಕ್ತದಲ್ಲಿ ಪತ್ರ ಬರೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಡಿ.ದೇವರಾಜು ಅರಸು ನಂತರ ಅತಿ ಹೆಚ್ಚು ಸರ್ಕಾರಿ ಯೋಜನೆ ಬಡ ಜನರಿಗೆ ನೀಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ಬಡವರು, ದೀನ ದಲಿತರ ಪರ ಕೆಲಸ ಮಾಡುತ್ತೀದ್ದೀರಿ. ಮೈಸೂರು ಮೂಡಾ ಹಗರಣದ ವಿಚಾರದಲ್ಲಿ ನೀವು ರಾಜೀನಾಮೇ ನೀಡಬಾರದು. ನಿಮ್ಮೋಂದಿಗೆ ನಾವಿದ್ದೇವೆ. ರಾಜ್ಯ ಬಡ ಜನರಿದ್ದಾರೆ ಎಂದು ಅಪ್ಪಟ ಅಭಿಮಾನಿಯಾದ ಸಚಿನ್ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.
ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.06 ಅಡಿ
ಒಳ ಹರಿವು – 4,400 ಕ್ಯುಸೆಕ್
ಹೊರ ಹರಿವು – 4,105 ಕ್ಯುಸೆಕ್
ನೀರಿನ ಸಂಗ್ರಹ – 48.419 ಟಿಎಂಸಿ